ಮೊಬೈಲ್ ಫೋನ್ - ಅತಿಯಾದರೆ ಅಪಾಯ?

Admin
0

ಮೊಬೈಲ್ ಫೋನ್ - ಅತಿಯಾದರೆ ಅಪಾಯ?




        ನಿಸ್ತಂತು ತಂತ್ರಜ್ಞಾನ (ವೈರ್‌ಲೆಸ್ ಟೆಕ್ನಲಜಿ)ದಲ್ಲಾಗುತ್ತಿರುವ ಕ್ರಾಂತಿಕಾರಿ ಬೆಳವಣಿಗೆಯಿಂದಾಗಿ ಸಂಪರ್ಕ ಕ್ಷೇತ್ರದಲ್ಲಿ ಕ್ಷಿಪ್ರಗತಿಯ ಬೆಳವಣಿಗೆ ಕಂಡು ಬರುತ್ತಿದೆ. ಮೊಬೈಲ್ ಫೋನ್, ಡಿಜಿಟಲ್ ಕ್ಯಾಮರಾ, ಕಾರ್ಡ್‌ಸ್ ಮೈಕ್ರೋಫೋನ್, ಟೆಲಿಫೋನ್‌ಂತಹ ಸಾಧನಗಳು ಅತ್ಯಂತ ಜನಪ್ರಿಯವಾಗುತ್ತಿವೆ. ಇಂತಹ ಉಪಕರಣಗಳ ಬೇಡಿಕೆ ಹೆಚ್ಚುತ್ತಿದ್ದು, ಈ ಸಾಧನಗಳನ್ನು ತಯಾರಿಸುವ ಕೈಗಾರಿಕೆಗಳು ಜಾಗತಿಕವಾಗಿ ಪ್ರತಿವರ್ಷ ಶೇಕಡಾ 40ರಷ್ಟು ಬೆಳವಣಿಗೆ ಹೊಂದುತ್ತಿರುವುದಾಗಿ ವರದಿಗಳು ತಿಳಿಸಿವೆ. ಈ ಪೈಕಿ ಮೊಬೈಲ್ ಫೋನ್‌ಗಳ ಬಳಕೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. 2005ರ ಕೊನೆಯಲ್ಲಿ ವಿಶ್ವದಲ್ಲಿ 126 ಶತಕೋಟಿ ಮೊಬೈಲ್ ಚಂದಾದಾರರಿದ್ದರು.2023 ರ ಹೊತ್ತಿಗೆ, ಪ್ರಪಂಚದಾದ್ಯಂತ ಸುಮಾರು 8.9 ಶತಕೋಟಿ ಮೊಬೈಲ್ ಫೋನ್ ಚಂದಾದಾರಿಕೆಗಳಿವೆ, ಹಿಂದಿನ ವರ್ಷ ಸುಮಾರು 8.6 ಶತಕೋಟಿಗಿಂತ ಹೆಚ್ಚಿದೆ. 2019 ರಲ್ಲಿ ಮೊದಲ ಬಾರಿಗೆ ಚಂದಾದಾರಿಕೆಗಳ ಸಂಖ್ಯೆ ಎಂಟು ಬಿಲಿಯನ್ ಮೀರಿದೆ.

👉 ಮೊಬೈಲ್ ಬಳಕೆಯ ಉಪಯೋಗ :

            ಮೊಬೈಲ್ ಬಳಕೆ ಇಷ್ಟೊಂದು ತೀವ್ರಗತಿಯಲ್ಲಿ ಹೆಚ್ಚಲು ಮುಖ್ಯ ಕಾರಣ ಅದರ ಅನುಕೂಲ. ಅದನ್ನು ಎಲ್ಲಿ ಬೇಕಾದರೂ ಕೊಂಡೊಯ್ಯ ಬಹುದು. ಯಾವಾಗಲೂ ಇಟ್ಟುಕೊಂಡಿರಬಹುದು. ಅಪಘಾತ ಅಥವಾ ಭೂಕಂಪ, ಪ್ರವಾಹ, ಅಗ್ನಿ ದುರಂತಗಳಂತಹ ಆಪತ್ತಿನ ಸಮಯದಲ್ಲಿ ಅದೇ ಆಪದ್ಭಾಂಧವ. ನಮಗೆ ಹೊರಗಿನ ಜಗತ್ತಿಗೆ ಸಂಪರ್ಕ ಕಲಿಸುವ ಬೆಳಕಿಂಡಿ. ಇಷ್ಟೇ ಅಲ್ಲ ಅದು ಪುಟ್ಟ ಕಂಪ್ಯೂಟರ್‌ನಂತೆ. ಸಂದೇಶವಾಹಕ. ಕ್ಯಾಮರಾದಂತೆ ಛಾಯಾಗ್ರಾಹಕ. ಬ್ಯಾಂಕಿಂಗ್ ಕೆಲಸಕ್ಕೂ ಸಿದ್ಧ. ಬೇಕಾದಾಗ ಅಲಾರಾಂ ಮಾಡಿ ಸೂಕ್ತ ಸಮಯದಲ್ಲಿ ಎಚ್ಚರಿಸುವ, ಜ್ಞಾಪಿಸುವ ಸಾಧನ. ನಮ್ಮ ಆಜ್ಞಾಧಾರಕ ಸಂಗಾತಿ. ಅದರ ಅಭ್ಯಾಸ ಮೈಗೂಡಿಸಿಕೊಂಡರೆ ಅರೆಕ್ಷಣವೂ ಅದನ್ನು ಬಿಟ್ಟಿರುವುದು ಕಷ್ಟ, ಹೀಗೆ ಇಷ್ಟೊಂದು ರೀತಿಯಲ್ಲಿ ಪ್ರಯೋಜನಕಾರಿಯಾಗಿರುವ ಸಾಧನ ಜನಪ್ರಿಯತೆ ಹೆಚ್ಚುತ್ತ ಹೋಗುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಇದು ಅತಿಯಾದರೆ ಅಪಾಯ ಎನ್ನುವ ಎಚ್ಚರಿಕೆಯ ಮಾತೂ ಕೇಳಿ ಬರತೊಡಗಿದೆ.

    ನಿಸ್ತಂತು ಸಾಧನಗಳಿಂದ (ಆರ್‌ಎಫ್‌ಆರ್) ವಿಕಿರಿಣತೆ ಪರಿಸರದಲ್ಲಿ ವ್ಯಾಪಿಸುತ್ತದೆ. ಫ್ರಿಜ್, ರೇಡಿಯೋ, ಟಿವಿ, ಮೈಕ್ರೋವೇವ್‌ನಂತಹ ಸಾಧನಗಳಿಂದಾಗಿ ಇಂತಹ ವಿಕರಣತೆಗೆ ನಾವು ಹೆಚ್ಚುಹೆಚ್ಚಾಗಿ ಈಡಾಗುತ್ತಿದ್ದೇವೆ. ಕಳೆದ ಒಂದು ನೂರು ವರ್ಷಗಳಲ್ಲಿ ಈ ಪ್ರಮಾಣ 10 ಸಾವಿರ ಪಟ್ಟಿಗೂ ಅಧಿಕವಾಗಿದೆ. ಈ ಸಾಧನಗಳ ಕಾರ್ಯ ನಿರ್ವಹಣೆಗಾಗಿ ರೇಡಿಯೋ. ಟಿ.ವಿ. ಮತ್ತು ಫೋನ್‌ ಗಳ ಗೋಪುರ ಮತ್ತು ಆ್ಯಂಟೆನಾಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಅಮೆರಿಕೆಯೊಂದರಲ್ಲೇ ಪ್ರತಿದಿನ 65 ಸಾವಿರ ಜನ ಮೊಬೈಲ್ ಫೋನ್‌ಗಳಿಗೆ ಚಂದಾದಾರರಾಗುತ್ತಿದ್ದಾರೆ.

👉 ಅತಿಯಾದ ಮೊಬೈಲ್ ಬಳಕೆಯ ದುಷ್ಪರಿಣಾಮಗಳು 

        ಈ ಎಂಟೆನಾಗಳಿಂದ ವಿಕಿರಣದ ಅಪಾಯ ಹೆಚ್ಚುತ್ತದೆ. ಈ ಅಪಾಯದ ಪ್ರಮಾಣ ನಾವು ಸಾಧನಗಳನ್ನು ಬಳಸುವ ರೀತಿಯನ್ನು ಅವಲಂಬಿಸಿದೆ. ಸಾಮಾನ್ಯವಾಗಿ ನಾವು ಮೊಬೈಲ್ ಫೋನ್‌ನಲ್ಲಿ ಮಾತನಾಡುವಾಗ, ಸ್ಪಷ್ಟವಾಗಿ ಕೇಳಿಸಬೇಕೆಂದು ತಲೆ ಎತ್ತಿ ಮಾತನಾಡುತ್ತೇವೆ. ಇದರಿಂದ ಹೆಚ್ಚಿನ ವಿಕಿರಣ ಪ್ರಭಾವಕ್ಕೆ ನಮ್ಮ ತಲೆಯ ಭಾಗ ಗುರಿಯಾಗುತ್ತದೆ. ಶೇಕಡಾ 60ರಷ್ಟು ತರಂಗಗಳು ಶಿರೋಭಾಗದೊಳಗೆ ಪ್ರವೇಶಿಸಬಹುದು. ಕೆಲವೊಮ್ಮೆ ಮಿದುಳಿನಲ್ಲಿ ಒಂದರಿಂದ ಒಂದೂವರೆ ಅಂಗುಲದಷ್ಟು ಒಳಗೂ ತಲುಪಬಹುದಾಗಿದೆ. ಮೊಬೈಲ್ ಫೋನ್ ದೇಹಕ್ಕೆ ಹತ್ತಿರವಿದ್ದಷ್ಟೂ ಅದರ ಪರಿಣಾಮ ಹೆಚ್ಚು.


ದೇಹವು ವಿಕಿರಣ ಚೈತನ್ಯದ ಎಷ್ಟು ಭಾಗವನ್ನು ಹೀರಿಕೊಳ್ಳುತ್ತದೆ ಎನ್ನುವುದನ್ನು ಸ್ಪೆಸಿಫಿಕ್ ಅಬ್‌ಸಾಕ್ಸಿಷನ್ ರೇಟ್ - ಎಸ್‌ಎಆರ್ ಎನ್ನುವ ಮಾನದಿಂದ ಅಳೆಯಲಾಗುತ್ತದೆ. ಪ್ರತಿ ಕಿಗ್ರಾಂ ತೂಕಕ್ಕೆ ಎಷ್ಟು ವ್ಯಾಟ್ ಚೈತನ್ಯವನ್ನು ದೇಹ ಹೀರಿಕೊಂಡಿದೆ ಎನ್ನುವ ಮೂಲಕ ನಿಗದಿಪಡಿಸಲಾಗುತ್ತದೆ. ಇದನ್ನು ಸೆಲ್‌ಫೋನ್ ಕಂಪೆನಿಗಳು ತಮ್ಮ ಉಪಕರಣಗಳು ಹೊರಹೊಮ್ಮುವ ವಿಕಿರಣದ ಪ್ರಮಾಣವನ್ನು ನಿರ್ಧರಿಸಲು ಬಳಸುತ್ತವೆ.


ದೇಹದಲ್ಲಿ ಪ್ರವೇಶಿಸುವ ತರಂಗಗಳು, ಅಯಾನೀಕರಣದಿಂದ ದೇಹದಲ್ಲಿ ಶಾಖವನ್ನು ಉಂಟುಮಾಡುವ ಮೂಲಕ ದೇಹದಲ್ಲಿನ ಅಂಗಾಂಶಗಳಿಗೆ ಹಾನಿಯುಂಟುಮಾಡಬಹುದು. ಆದರೆ ಸಾಮಾನ್ಯವಾಗಿ ರೇಡಿಯೋ ತರಂಗಗಳಿಂದ ಇಂತಹ ಪರಿಣಾಮ ಕಡಿಮೆ. ಆದರೆ ಇವು ದೀರ್ಘಕಾಲದಲ್ಲಿ ಅಂಗಾಂಶಗಳಲ್ಲಿ ಜೈವಿಕ ಕ್ರಿಯೆಗಳ ಮೇಲೆ ದುಷ್ಪರಿಣಾಮ ಮಾಡಬಹುದಾಗಿದೆ. ಉದಾಹರಣೆಗೆ ಮೊಬೈಲ್ ಫೋನ್‌ಗಳನ್ನು ಸತತವಾಗಿ ದೀರ್ಘಕಾಲ ಬಳಸಿದರೆ

ಪುರುಷರ ವೀರ್ಯಾಣುಗಳ ಮೇಲೆ ದುಷ್ಪರಿಣಾಮ ಕಂಡು ಬಂದಿದ್ದು ವರದಿಯಾಗಿದೆ. 
    ಅಮೆರಿಕೆಯ ಕ್ಲೀವ್‌ ಲ್ಯಾಂಡ್ ಮತ್ತು ನ್ಯೂ ಅರೆನ್ಸ್‌ನಲ್ಲಿನ ಸಂಶೋಧಕರು ಮತ್ತು ಮುಂಬೈನ ಕೆಲ ವೈದ್ಯರು ಇದನ್ನು ಗುರುತಿಸಿರುವುದಾಗಿ ವರದಿಗಳು ತಿಳಿಸಿವೆ. ಇದಲ್ಲದೆ ಮೊಬೈಲ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರಿಗೂ ಸಂಬಂಧ ಇರಬಹುದೆಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದನ್ನು ಇನ್ನು ಕೆಲವು ತಜ್ಞರು ಅಲ್ಲಗಳೆದಿದ್ದಾರೆ. ವಿಕಿರಣದ ದುಷ್ಪರಿಣಾಮಗಳ ಬಗ್ಗೆ ಇನ್ನೂ ಅಧ್ಯಯನಗಳು ಮುಂದುವರಿದಿವೆ. ವಿಶೇಷವಾಗಿ ವಿಕಿರಣದ ಜೈವಿಕ ದುಷ್ಪರಿಣಾಮಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲು ವೀಕ್ಷಣೆ ಮುಂದುವರಿದಿದೆ. ವಿಶ್ವಆರೋಗ್ಯ ಸಂಸ್ಥೆಯೂ ಈ ನಿಟ್ಟಿನಲ್ಲಿ ಸಹಕರಿಸುತ್ತಿದೆ.


  ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜಾಗೃತೆ ವಹಿಸಬೇಕೆಂಬ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. 
    ಮೈಕ್ರೋವೇವ್ ಪರಿಣಾಮಗಳಿಗೆ ಮಕ್ಕಳ ದೇಹ ಹೆಚ್ಚಿನ ಬಾಧೆಗೆ ಒಳಗಾಗಬಹುದಾಗಿದೆ. ಮಕ್ಕಳ ನರವ್ಯೂಹ ಇನ್ನೂ ಬಲಿತಿರುವುದಿಲ್ಲ. ಆದ್ದರಿಂದ ತರಂಗಗಳ ಹೀರಿಕೊಳ್ಳುವಿಕೆ ದೊಡ್ಡವರಿಗಿಂತ 3 ಪಾಲು ಅಧಿಕವಾಗಿರುತ್ತದೆ. ಅದರಲ್ಲೂ 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಪರಿಣಾಮ ಅಧಿಕವಾಗಿರುವುದರಿಂದ ಅವರಿಗೆ ಮೊಬೈಲ್ ಫೋನ್ ಬಳಕೆಯ ಆಕರ್ಷಣೆ, ಅಭ್ಯಾಸ ಬೆಳೆಸಬಾರದೆನ್ನುವುದು ಪರಿಣಿತರ ಅಭಿಪ್ರಾಯವಾಗಿದೆ.


✔ ಮೊಬೈಲ್ ಫೋನ್‌ಗಳ ಸಂಖ್ಯೆ ಹೆಚ್ಚುತ್ತಿದ್ದು ಸರಾಸರಿ ಪ್ರತಿ ಒಂದೂವರೆ ವರ್ಷಕ್ಕೊಮ್ಮೆ ಅವುಗಳನ್ನು ಬದಲಾಯಿಸುವುದೊ, ಮೂಲೆಗುಂಪು ಮಾಡುವುದೋ ನಡೆದೇ ಇರುವುದರಿಂದ, ಅವು ತ್ಯಾಜ್ಯ ವಸ್ತುಗಳಾಗಿ ಪರಿಸರ ಮಾಲಿನ್ಯಕ್ಕೂ ಕಾರಣವಾಗಿ ಪರಿಣಮಿಸುತ್ತಿವೆ. ಈ ಇಲೆಕ್ಟ್ರಾನಿಕ್ ಕಸ, ಹಾನಿಕಾರಕ ಲೋಹ ಮತ್ತು ಅಪಾಯಕಾರಿ ರಾಸಾಯನಿಕ ವಸ್ತುಗಳನ್ನು ಹೊಂದಿರುತ್ತದೆ. ಸೀಸ, ಬೆರಿಲಿಯಂ, ಆರ್ಸೆನಿಕ್, ಪಾದರಸ, ಆಂಟಿಮನಿ, ಕ್ಯಾಡ್ಮಿಯಂನಂತಹ ವಸ್ತುಗಳು ತುಂಬ ಅಪಾಯಕಾರಿಯಾಗಿದ್ದು, ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಉಂಟುಮಾಡಬಲ್ಲವಾಗಿವೆ.


✔ ಮೊಬೈಲ್ ಫೋನ್‌ಗಳನ್ನು ವಾಹನ ಚಾಲನೆಯಂತಹ ಸಂದರ್ಭಗಳಲ್ಲಿ ಬಳಸುವಾಗ ಸಂಭವಿಸಬಹುದಾದ ಅಪಘಾತದಂತಹ ದುಷ್ಪರಿಣಾಮಗಳ ಬಗೆಗೂ ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗುತ್ತಿದೆ. ಪ್ರತಿವರ್ಷ ಒಂದು ಸಾವಿರಕ್ಕೂ ಹೆಚ್ಚು ಜನ ಇಂತಹ ಅಪಘಾತಗಳಲ್ಲಿ ಸಾವಿಗೀಡಾಗುವರೆಂದು ಅಂದಾಜು ಮಾಡಲಾಗಿದೆ. ಕುಡಿದ ಅಮಲಿನಲ್ಲಿ ಚಾಲನೆ ಮಾಡುವಷ್ಟೇ ಅಪಾಯ, ಮೊಬೈಲ್ ಫೋನ್ ಬಳಕೆಯ ಚಾಲನೆಯಲ್ಲೂ ಕಂಡುಬರುವುದಾಗಿ ಅಧ್ಯಯನಗಳು ದೃಢಪಡಿಸಿವೆ.


✔ ಮೊಬೈಲ್ ಫೋನ್ ಹೊಮ್ಮುವ ವಿಕಿರಣದಿಂದ ರಕ್ಷಣೆ ಪಡೆಯಲು ಕೆಲ ಉಪಕರಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿವೆ. ಉದಾಹರಣೆಗೆ ಸೆಲ್ ಸೆನ್ಸರ್ ಎನ್ನುವ ಸಾಧನ. ಇದು ಟ್ರೈಫೀಲ್ಡ್ ಮೀಟರ್ ವ್ಯವಸ್ಥೆಯಿಂದ ಕೂಡಿದ್ದು ಸೆಲ್ ಫೋನ್ ಹೊಮ್ಮುವ ವಿಕಿರಣದ ಪ್ರಮಾಣವನ್ನು ತಿಳಿಸುತ್ತದೆ. ಇದರ ಸಹಾಯದಿಂದ, ಕಡಿಮೆ ಪ್ರಮಾಣದ ವಿಕಿರಣ ಸೂಸುವ ಮೊಬೈಲ್ ಫೋನ್ನನ್ನು ಆರಿಸಿಕೊಳ್ಳಬಹುದು. ಹೆಡ್‌ಸೆಟ್‌ಗಳ ಪರೀಕ್ಷೆಗೂ ಇವುಗಳನ್ನು ಬಳಸಬಹುದು. ಇದಲ್ಲದೆ ಮೊಬೈಲ್ ಫೋನ್‌ಗಳನ್ನು ಎಷ್ಟು ಅಂತರದಲ್ಲಿ ಯಾವ ರೀತಿಯಲ್ಲಿ ಬಳಸಿದರೆ ಹೆಚ್ಚು ಸುರಕ್ಷಿತ ಎನ್ನುವುದನ್ನು ನಿರ್ಧರಿಸಲೂ ಇದು ಸಹಾಯಕವಾಗಬಹುದು.


✔ ರೇಡಿಯೋ ತರಂಗಗಳ ಸುರಕ್ಷಿತ ಬಳಕೆಗೆ ಸಂಬಂಧಿಸಿದಂತೆ ಮಾನಕಗಳನ್ನು ರೂಪಿಸಲು ಮಿತಿಗಳನ್ನು ನಿರ್ಧರಿಸಲು ವಿಶ್ವದ ಅನೇಕ ರಾಷ್ಟ್ರಗಳು ಯೋಚಿಸುತ್ತಿವೆ. ಸ್ಕಾಟ್‌ಲ್ಯಾಂಡ್‌ನಲ್ಲಿ ಮೊಬೈಲ್ ಫೋನ್‌ಗಳ ಗೋಪುರಗಳನ್ನು ಆಸ್ಪತ್ರೆ, ಶಾಲೆ ಮತ್ತು ಜನನಿಬಿಡ ಪ್ರದೇಶಗಳ ತೀರ ಹತ್ತಿರದಲ್ಲಿ ನಿರ್ಮಿಸಬಾರದೆಂದು ಕಟ್ಟಳೆ ವಿಧಿಸಲಾಗಿದೆ. ಇಂಗ್ಲೆಂಡ್‌ನಲ್ಲಿ ಇದರ ಬಗ್ಗೆ ಸಾರ್ವಜನಿಕರಲ್ಲಿ ಪ್ರಜ್ಞೆಯನ್ನು ಬೆಳೆಸಲು ಪ್ರಯತ್ನಿಸಲಾಗುತ್ತಿದೆ. ವಿಚಾರವಾಗಿ ಹೆಚ್ಚು ಜಾಗೃತವಾಗಿವೆ. ಪೂರ್ವ ಯುರೋಪ್ ದೇಶಗಳೂ ಈ


ನಮ್ಮ ದೇಶದಲ್ಲೂ ಈ ಸಂಬಂಧ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆಯೆಂದು ತಜ್ಞರು ಹೇಳುತ್ತಿದ್ದಾರೆ.




Post a Comment

0Comments
Post a Comment (0)