ಪ್ಲಾಸ್ಟಿಕ್ ಇಲೆಕ್ಟ್ರಾನಿಕ್ಸ್

Admin
0

ಪ್ಲಾಸ್ಟಿಕ್ ಇಲೆಕ್ಟ್ರಾನಿಕ್ಸ್





    👉    ಇಂದಿನ ದಿನಗಳಲ್ಲಿ ಬಹುಶಃ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿರುವ ವಸ್ತುವೆಂದರೆ ಪ್ಲಾಸ್ಟಿಕ್. ದಿನಬಳಕೆಯ ತರಕಾರಿ, ಹಾಲು ತರುವ ಚೀಲದಿಂದ ಹಿಡಿದು, ವಾಹನಗಳ ಕವಚದ ತನಕ ಅವುಗಳ ವ್ಯಾಪ್ತಿ ವಿಸ್ತರಿಸಿದೆ. ಕಾಗದಕ್ಕಿಂತ ತೆಳುವಾದ ಪೊರೆಯಷ್ಟು ತೆಳ್ಳಗಿನ ಪ್ಲಾಸ್ಟಿಕ್ ಒಂದು ರೀತಿಯದಾದರೆ, ಯಂತ್ರೋಪಕರಣಗಳಲ್ಲೂ ಬಳಸಬಹುದಾದ ಕಠಿಣವಾದ ಲೋಹದಂತಹ ಪ್ಲಾಸ್ಟಿಕ್‌ಗಳು ಇನ್ನೊಂದೆಡೆ. ಮೊದಲು ಪ್ಲಾಸ್ಟಿಕ್ ವಸ್ತುಗಳು ಬಿಸಿನೀರಿಗೆ ತಡೆಯುತ್ತಿರಲಿಲ್ಲ. ಆದರೆ ಈಗ ನೀರನ್ನೇ ಕಾಯಿಸಬಲ್ಲ ಹಂತದವರೆಗೂ ಅವು ರೂಪುಗೊಂಡಿವೆ.
        
  👉 ಪಾಲಿ ಎಸಿಟಲೀನ್ನಂತಹ ಪಾಲಿಮರ್ ಮೂಲದಿಂದ ತಯಾರಿಸಲಾಗುವ ಈ ಸಾವಯವ ವಸ್ತುವಿನ ಬಳಕೆ, ದಿನ ದಿನಕ್ಕೂ ವಿಸ್ತರಿಸುತ್ತಿದೆ. ಪಾಲಿಮರ್‌ನಲ್ಲಿ ವಿವಿಧ ವಸ್ತುಗಳನ್ನು ಸೇರಿಸಿ, ಬೇರೆ ಬೇರೆ ವಿಧಾನಗಳಲ್ಲಿ ಸಂಸ್ಕರಿಸುವ ಮೂಲಕ ವಿಭಿನ್ನ ಸ್ವಭಾವದ, ಮಾರ್ಪಟ್ಟ ರಚನೆಯ ಪ್ಲಾಸ್ಟಿಕ್ ಪಡೆಯಲು ಸಾಧ್ಯ. ಥರ್ಮೊಪ್ಲಾಸ್ಟಿಕ್ ಇದಕ್ಕೆ ಒಂದು ಉದಾಹರಣೆ.





  👉 ಹೀಗೆ ಪ್ಲಾಸ್ಟಿಕ್ ಪ್ರಪಂಚದಲ್ಲಿ ಮುಂದುವರಿದಿರುವ ಇತ್ತೀಚಿನ ತಾಂತ್ರಿಕ ಬೆಳವಣಿಗೆಯೆಂದರೆ, ಪ್ಲಾಸ್ಟಿಕ್ ಇಲೆಕ್ಟ್ರಾನಿಕ್ಸ್ ಎನ್ನಬಹುದು. ಪ್ಲಾಸ್ಟಿಕ್ ವಸ್ತುಗಳನ್ನು ಇಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಬಳಸಿಕೊಳ್ಳಲು ಈ ಹೊಸ ತಂತ್ರಜ್ಞಾನ ಸಹಾಯಕವಾಗಿದೆ. ಪ್ಲಾಸ್ಟಿಕ್ ವಸ್ತುಗಳ ಬಳಕೆಯ ಇನ್ನೊಂದು ಹೊಸ ಪ್ರಪಂಚಕ್ಕೆ ಇದರಿಂದ ಕಾಲಿರಿಸಿದಂತಾಗಿದೆಯೆಂದು ಪರಿಣಿತರು ಈಗಾಗಲೇ ಇದರ ಬಗೆಗೆ ಅನೇಕ ಭರವಸೆಗಳನ್ನು ವ್ಯಕ್ತಪಡಿಸಿದ್ದಾರೆ. ಕೈಗಾರಿಕೋದ್ಯಮಿಗಳು ಮುಂದಿನ ಬೆಳವಣಿಗೆಯನ್ನು ಕಾತರದಿಂದ ಕಾಯುತ್ತಿದ್ದಾರೆ. ವಸ್ತು ನಿರ್ಮಾಣ ತಂತ್ರಜ್ಞಾನ ಕ್ಷೇತ್ರದಲ್ಲಿ ಇದು ಹೊಸ ಅಲೆಯನ್ನೇ ಹುಟ್ಟಿಸಿದೆ.
   ✔     ಪ್ಲಾಸ್ಟಿಕ್ ಮತ್ತು ಲೋಹಗಳ ನಡುವಣ ಪ್ರಮುಖ ವ್ಯತ್ಯಾಸವೆಂದರೆ ವಾಹಕತ್ವ, ಪ್ಲಾಸ್ಟಿಕ್, ವಿದ್ಯುತ್ ಅಥವಾ ಉಷ್ಣತೆಯ ವಾಹಕವ ಇದರ ಅ ಗುಣ ಅದರ ಬಳಕೆಯನ್ನು ಕೆಲಮಟ್ಟಿಗೆ ಸೀಮಿತಗೊಳಿಸಿತ್ತು, ಆದರೆ ಅದರಲ್ಲೂ ವಾಹಕತ್ವ ಉಂಟುಮಾಡಲು ಸಾಧ್ಯ ಎನ್ನುವುದು ದೃಢಪಟ್ಟನಂತರ, ಈ ಸಾಧ್ಯತೆಯನ್ನು ಅನುಕೂಲಕರ ರೀತಿಯಲ್ಲಿ ಬಳಸಿಕೊಳ್ಳುವ ಬಗ್ಗೆ ಪ್ರಯೋಗಗಳು ಮುಂದುವರಿದವು.
   ✔      ಪ್ಲಾಸ್ಟಿಕ್‌ನ ಮೂಲ ಕಚ್ಚಾ ವಸ್ತುವಾದ ಪಾಲಿ ಎಸಟಲೀನ್ ‌ ಕಣಗಳ ಮೂಲಕ ಅಯೋಡಿನ್ ಭಾಷೆ ಅಥವಾ ಉಗಿಯನ್ನು ಹಾಯಿಸುವುದರಿಂದ ಅದನ್ನು ವಿದ್ಯುತ್ ವಾಹಕವನ್ನಾಗಿ ಮಾಡಬಹುದೆಂದು ವಿಜ್ಞಾನಿಗಳು ದೃಢಪಡಿಸಿದರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಲನ್ ಜೆ ಹೀಗರ್, ಪೆನ್ಸಿಲ್ವಾನಿಯಾ ವಿಶ್ವವಿದ್ಯಾಲಯದ ಅಲನ್ ಜಿ. ಮ್ಯಾಕ್‌ಡಾಯರ್‌ಮಿಡ್ ಮತ್ತು ಜಪಾನಿನ ತ್ಸುಕುಬಾ ವಿಶ್ವವಿದ್ಯಾಲಯದ ಹಿಡೆಕಿ ಶಿರಕಾವಾ ಈ ವಿಜ್ಞಾನಿಗಳಿಗೆ ಇಂತಹ ಅದ್ಭುತ ಸಾಧನೆಗಾಗಿ 2008ನೇ ಸಾಲಿನ ರಸಾಯನ ಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯೂ ಲಭಿಸಿತು. ಇದರ ನಂತರ ಪ್ರಯೋಗಾಲಯಗಳಲ್ಲಿ ಪ್ಲಾಸ್ಟಿಕ್ ಇಲೆಕ್ಟ್ರಾನಿಕ್ಸ್ ತಂತ್ರಜ್ಞಾನದ ಬೆಳವಣಿಗೆಗೆ ಚಾಲನೆ ದೊರಕಿತು.

    ✔     ಈಗಾಗಲೇ ಸಾಕಷ್ಟು ಬೇಡಿಕೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಉಪಕರಣಗಳ ಉದ್ಯಮಕ್ಕೆ ಇದು ಇನ್ನಷ್ಟು ಪ್ರೋತ್ಸಾಹದಾಯಕವಾಗಿ ಪರಿಣಮಿಸಿತು. ಲೋಹಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ ತನ್ನದೇ ಆದ ಅನೇಕ ಅನುಕೂಲಗಳನ್ನು ಹೊಂದಿದೆ. ಕೆಲಮಟ್ಟಿಗೆ ರಬ್ಬರ್‌ನ ಸ್ಥಿತಿ ಸ್ಥಾಪಕತ್ವದಂತಹ ಗುಣವನ್ನೂ ಹೊಂದಿದೆ. ಇದನ್ನು ಮೃದು, ತೆಳ್ಳಗಿನ ಹಾಳೆಗಳಲ್ಲೊ, ಕೊಳವೆಗಳಲ್ಲೊ ರೂಪಿಸಬಹುದು. ಇದನ್ನು ಕರಗಿಸಿ ಆಕಾರ ಬದಲಿಸುವುದು ಸುಲಭ. ಎಲ್ಲಕ್ಕಿಂತ ಹೆಚ್ಚಾಗಿ ಪ್ಲಾಸ್ಟಿಕ್ ಅಗ್ಗದ ವಸ್ತು, ಹೆಚ್ಚು ಹಗುರವಾದದ್ದೂ ಹೌದು. ಆದ್ದರಿಂದ ಇಷ್ಟೊಂದು ಅನುಕೂಲ ಹೊಂದಿರುವ ಪ್ಲಾಸ್ಟಿಕ್, ಲೋಹದ ಮುಖ್ಯ ಲಕ್ಷಣವಾದ ವಿದ್ಯುತ್ ವಾಹಕವೂ ಆಗಿಬಿಟ್ಟರೆ ಅದಕ್ಕಿಂತ ಅನುಕೂಲ ಇನ್ನೇನು ಬೇಕು? ಹೀಗಾಗಿ ಇದು ಆನ್ವಯಿಕ ತಂತ್ರಜ್ಞಾನದ ಹೊಸ ಅಧ್ಯಾಯಕ್ಕೇ ನಾಂದಿಯಾಗಿ ಪರಿಣಮಿಸಿತೆಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.

   ✔      ಇಲೆಕ್ಟ್ರಾನಿಕ್ ಮುದ್ರಣ ಚಿತ್ರಗಳಲ್ಲಿ ಇಲೆಕ್ಟ್ರಾನಿಕ್ ಪ್ರಿಂಟ್ ಸಲ್ಯೂಟ್‌ಗಳಲ್ಲಿ ಕೊರೆಯುವ (ಎಚ್ಚಿಂಗ್) ವಿಧಾನವನ್ನು ಬಳಸಲಾಗುತ್ತದೆ. ವಿದ್ಯುತ್ ಉಪಕರಣ ಕಾರ್ಯ ನಿರ್ವಹಿಸುವುದೇ ಈ ಪ್ರಿಂಟ್ ಸಲ್ಯೂಟ್ ಮೂಲಕ. ಇದಕ್ಕೆ ಲೋಹದ ಸ್ಟೇಟ್ (ತಗಡು)ಗಳ ಮೇಲೆ ಈ ಸಲ್ಯೂಟ್ ಚಿತ್ರವನ್ನು ಕೊರೆದಿರುತ್ತಾರೆ. ಆದರೆ ಲೋಹದ ಬದಲು ಪ್ಲಾಸ್ಟಿಕ್ ಹಾಳೆಯ ಮೇಲೆ ಇಂತಹ ಚಿತ್ರಗಳನ್ನು ಮುದ್ರಿಸಬಹುದಾಗಿದೆ. ಇದಕ್ಕೆ ಸ್ಟಾಂಪಿಂಗ್ ವಿಧಾನ ಎನ್ನುತ್ತಾರೆ. ಈ ವಿದ್ಯುತ್ ಮಂಡಲಗಳ ಚಿತ್ರ ಹೊಂದಿದ ಸ್ಟಾಂಪ್ ಮೇಲೆ ತಾಮ್ರ ಅಥವಾ ಬೆಳ್ಳಿಯ ಭಾಷಿಕರಣದಿಂದ ಅದರ ಕೆಲವು ಸೂಕ್ಷ್ಮ ಕಣಗಳನ್ನು ಸಾಂದ್ರೀಕರಿಸಲಾಗುತ್ತದೆ. ನಂತರ ಆ ಸ್ಟಾಂಪನ್ನು ಒದ್ದೆ ಮಾಡಿದ ಪ್ಲಾಸ್ಟಿಕ್ ಮೇಲೆ ಒತ್ತಲಾಗುತ್ತದೆ. ಸ್ಟಾಂಪನ್ನು ತೆಗೆದ ನಂತರ ಅದರ ಗುರುತು ಮೂಡಿದ ಸ್ಥಳದಲ್ಲಿ ಕಾರ್ಬನ್‌ಯುಕ್ತ ಅರೆವಾಹಕಗಳನ್ನು ಸೇರಿಸಿದಾಗ, ಈ ವಿದ್ಯುನ್ಮಂಡಲಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ವಿದ್ಯುತ್ ಪ್ರವಹಿಸುತ್ತದೆ. ಹೀಗೆ ಪ್ಲಾಸ್ಟಿಕ್‌ ಯುಕ್ತ ವಿದ್ಯುತ್‌ ಮಂಡಲಗಳನ್ನು ಟ್ರಾನ್ಸಿಸ್ಟರ್ ಮತ್ತಿತರ ಸರಳ ಉಪಕರಣಗಳಲ್ಲಿ ತುಂಬ ಅನುಕೂಲಕರವಾಗಿ ಬಳಸಿಕೊಳ್ಳಬಹುದಾಗಿದೆ. ಇದರಿಂದ ಈ ವಸ್ತುಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

  ✔   ಪ್ಲಾಸ್ಟಿಕ್‌ಗಳಲ್ಲಿ ಅರೆವಾಹಕ ಗುಣಗಳನ್ನು ಪ್ರಚೋದಿಸುವ ಕಾರ್ಯದಲ್ಲಿ ಕಂಡುಬರುತ್ತಿರುವ ಪ್ರಗತಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾದೀತೆಂಬುದು ತಜ್ಞರ ಅನಿಸಿಕೆ. ಪ್ಲಾಸ್ಟಿಕ್ ಹಾಳೆಗಳ ಮೇಲೆ ವಿದ್ಯುದ್ವಾಹಕ ಗುಣವನ್ನು ಪ್ರಚೋದಿಸುವುದರಿಂದ ಅನೇಕ ಪ್ರಯೋಜನ ಗಳಿವೆ. ಗೋಡೆಯ ಉದ್ದಗಲಕ್ಕೂ ಇಲೆಕ್ಟ್ರಾನಿಕ್ ಪರದೆಯಂತೆ ಅದನ್ನು ಬಳಸಬಹುದು. ಜಾಹೀರಾತು ಫಲಕಗಳಲ್ಲಿ, ಟಿ.ವಿ. ಪರದೆಗಳಲ್ಲಿ ಈ ತಂತ್ರವನ್ನು ಅಳವಡಿಸಬಹುದು. ಇದಲ್ಲದೆ ಇವುಗಳನ್ನು ಸೌರ ವಿದ್ಯುತ್ ಕೋಶಗಳಂತೆಯೂ ಬಳಸಬಹುದು. ಬ್ಯಾಟರಿ ಚಾರ್ಜ‌್ರನಂತೆಯೂ ಈ ಸಾಧನಗಳನ್ನು ಉಪಯೋಗಿಸಿಕೊಳ್ಳಬಹುದು. ಮೊಬೈಲ್ ಫೋನ್, ಎಮರೆನ್ಸಿ ಲ್ಯಾಂಪ್ ಮುಂತಾದವುಗಳ ರೀಚಾರ್ಜ್‌ಗೆ ಇವು ಬಳಕೆಯಾಗಬಹುದು. ಎಲೆಕ್ಟ್ರಾನಿಕ್ ಪೇಪರ್‌ಗಳಲ್ಲೂ ಬಳಸಬಹುದು.

   ✔  ಇತ್ತೀಚಿನ ದಿನಗಳಲ್ಲಿ ಇಲೆಕ್ಷನಿಕ್ ಸಾಧನಗಳಲ್ಲಿ ಸಿಲಿಕಾನ್ ಚಿಪ್‌ಗಳ ಬಳಕೆ ಹೆಚ್ಚುತ್ತಿದೆ. ಹೀಗಾಗಿ ಚಿಪ್‌ಗಳ ಬೇಡಿಕೆ ಹೆಚ್ಚಿ ಅವುಗಳ ಬೆಲೆಯೇರುತ್ತಿದೆ. ಅವುಗಳಿಗೆ ಪರ್ಯಾಯವಾಗಿ ಪ್ಲಾಸ್ಟಿಕ್ ಇಲೆಕ್ಟ್ರಾನಿಕ್ಸ್ ಬಳಕೆಯನ್ನು ಪ್ರೋತ್ಸಾಹಿಸುವ ಬಗ್ಗೆ ಸಂಶೋಧನೆಗಳು ಮುಂದುವರಿದಿವೆ.


   ✔  ಡಿಜಿಟಲ್ ಕ್ಯಾಮರಾಗಳಲ್ಲಿ ಈಗಾಗಲೇ ಇಂತಹ ಇಲೆಕ್ಟ್ರಾನಿಕ್ ಪರದೆಗಳ ಬಳಕೆ ಪ್ರಾರಂಭವಾಗಿದೆ. ಇಂತಹ ಪರದೆಗಳನ್ನು ಇಲೆಕ್ಟ್ರಾನಿಕ್ ದಿನಪತ್ರಿಕೆಗಳಲ್ಲಿ ಬಳಸಬಹುದು. ಇಂಟರ್‌ನೆಟ್‌ನೊಂದಿಗೆ ಇದಕ್ಕೆ ಸಂಪರ್ಕ ಕಲ್ಪಿಸಿರುತ್ತಾರೆ. ಪತ್ರಿಕೆಯನ್ನು ಓದುವಾಗ ಮಾಹಿತಿಯನ್ನು ಇಂಟರ್‌ನೆಟ್‌ನಿಂದ ಕೆಳಗಿಳಿಸಿಕೊಂಡು ಅಂದರೆ ಡೌನ್‌ ಲೋಡ್ ಮಾಡಿಕೊಳ್ಳಬಹುದು. ಉಪಯೋಗಿಸಿದ ನಂತರ ಮಾಮೂಲಿ ಪತ್ರಿಕೆಯಂತೆ ಮಡಚಿ ಇಡಬಹುದು.

   ✔ ಇಲೆಕ್ಟ್ರಾನಿಕ್ ಲೇಬಲ್ ತಯಾರಿಕೆ, ಮುದ್ರಣಗಳಲ್ಲೂ ಇವುಗಳ ಬಳಕೆ ಅನುಕೂಲಕರ. ಈಗ ಅನುಸರಿಸಲಾಗುತ್ತಿರುವ ಬಾರ್‌ಕೋಡ್ ಮುದ್ರಣ ವಿಧಾನದ ಒಂದು ಅನಾನುಕೂಲವೆಂದರೆ, ಅದನ್ನು ಓದಲು ಕಂಪ್ಯೂಟರ್ ವಿಂಡೊ ಬೇಕೇ ಬೇಕು. ಆದರೆ ಪ್ಲಾಸ್ಟಿಕ್ ಅಥವಾ ಆರ್ಗನೋ ಇಲೆಕ್ಟ್ರಾನಿಕ್ ಲೇಬಲ್ ವಿಧಾನದಲ್ಲಿ ಇಂತಹ ತೊಂದರೆಯಿಲ್ಲ. ಆದ್ದರಿಂದ ಇವುಗಳನ್ನು ಆಹಾರ, ಔಷಧ ಮುಂತಾದ ಪ್ಯಾಕೆಟ್‌ಗಳಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಲಗ್ಗೇಜ್ ನಿರ್ವಹಣೆಯಂತಹ ಕಾರ್ಯಗಳಲ್ಲಿ ಸುಲಭವಾಗಿ ಬಳಸಬಹುದಾಗಿದೆ. ಇಲೆಕ್ಟ್ರಾನಿಕ್ ಪ್ಯಾಕೇಜಿಂಗ್‌ಲ್ಲೂ ಬಳಸಬಹುದಾದ ಪ್ಲಾಸ್ಟಿಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

  ✔      ಕಂಪ್ಯೂಟರ್ ಸ್ಮರಣೆ (ಮೆಮೊರಿ)ಯಲ್ಲಿ ಬಳಸುವ ಪ್ಲಾಸ್ಟಿಕ್‌ಗಳ ಬಗೆಗೂ ಪ್ರಯೋಗಗಳು ಮುಂದುವರಿದಿವೆ. ಮೆಮೊರಿ ಕಾರ್ಡ್‌ಗಳಲ್ಲಿ ಅರೆವಾಹಕಗಳ ಪ್ಲಾಸ್ಟಿಕ್ ಕಾಗದ ಬಳಸಿ ನಿರೀಕ್ಷಿತ ಫಲಿತಾಂಶ ದೊರಕಿಸಬಹುದಾಗಿದೆ. ಆದರೆ ಈ ಸಾಮರ್ಥ್ಯ ಸದ್ಯಕ್ಕೆ ಗಮನಾರ್ಹ ಪ್ರಮಾಣದಲ್ಲಿಲ್ಲ.

   ✔      ಪರಿಸರ ಮಾಲಿನ್ಯಕ್ಕೆ ಸ್ಪಂದಿಸಿ, ದಾಖಲಿಸಬಲ್ಲ ಸೂಚಕಗಳಲ್ಲೂ ಇಂತಹ ಪ್ಲಾಸ್ಟಿಕ್‌ಗಳ ಬಳಕೆಯ ಪ್ರಯೋಗ ಪ್ರಗತಿಯಲ್ಲಿದೆ. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ ಈಗಾಗಲೇ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ರಸ್ತೆಯ ಉದ್ದಕ್ಕೂ ರಾಸಾಯನಿಕ ಪ್ಲಾಸ್ಟಿಕ್ ಫಲಕಗಳನ್ನು ನಿಗದಿತ ಅಂತರದಲ್ಲಿ ಸ್ಥಾಪಿಸಿರುತ್ತಾರೆ. ಈ ಪ್ಲಾಸ್ಟಿಕ್ ಪರದೆಯಲ್ಲಿನ ರಾಸಾಯನಿಕಗಳು ಸಂವೇದನಾಶಕ್ತಿ ಹೊಂದಿದ್ದು ತಮ್ಮ ಸುತ್ತಲೂ ವಾತಾವರಣದಲ್ಲಿರುವ ಸೂಕ್ಷ್ಮಜೀವಿಗಳು, ಧೂಳು, ಅನಿಲದ ಕಣಗಳು, ಮಾಲಿನ್ಯದ ಪ್ರಮಾಣ ಮುಂತಾದ ವಿವರಗಳನ್ನು ದಾಖಲಿಸುತ್ತವೆ. ಇಂತಹ ಸಾಧನಗಳನ್ನು ಕೈಗಾರಿಕೆ, ಕಾರ್ಖಾನೆ ಯಂತಹ ಸ್ಥಳಗಳ ಒಳಾವರಣಗಳಲ್ಲೂ ಬಳಸಬಹುದಾಗಿದೆ.

   ✔ ಇತ್ತೀಚೆಗೆ ನ್ಯಾನೊ ತಂತ್ರಜ್ಞಾನದಲ್ಲೂ ಇಂತಹ ಪ್ಲಾಸ್ಟಿಕ್‌ಗಳ ಬಳಕೆ .ಪಯುಕ್ತವೆಂದು ಕಂಡುಬಂದಿದೆ. ನ್ಯಾನೊ ಉಪಕರಣಗಳಂತಹ ಸೂಕ್ಷ್ಮ ಉಪಕರಣಗಳಲ್ಲಿ ಇವುಗಳನ್ನು ಬಳಸಬಹುದಾಗಿದೆ. ಅಲ್ಲದೆ ಇವುಗಳನ್ನು ಸೂಕ್ತದ್ರಾವಣದಲ್ಲಿ ಕರಗಿಸಿ ಮರುಬಳಕೆ ಮಾಡಬಹುದಾಗಿದೆ.

   ✔      ವೈದ್ಯಕೀಯ ಕ್ಷೇತ್ರದಲ್ಲೂ ಇಂತಹ ಪ್ರಯೋಗಗಳು ನಡೆಯುತ್ತಿರುವ ಬಗ್ಗೆ ವರದಿಗಳು ತಿಳಿಸಿವೆ. ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು, ವಿವಿಧ ಕಾರಣಗಳಿಂದಾಗಿ ಆಘಾತಕ್ಕೊಳಗಾದ ಮನುಷ್ಯ ದೇಹದ ನರತಂತುಗಳ ಕುದಿಗಳನ್ನು ಇಲೆಕ್ಟ್ರಾನಿಕ್ ಪ್ಲಾಸ್ಟಿಕ್ ಎಳೆಗಳಿಗೆ ಬಂಧಿಸಿ, ಸಕ್ಕರೆಯ ದ್ರಾವಣದಲ್ಲಿ ಇರಿಸಿದರು. ಕೆಲದಿನಗಳ ನಂತರ, ನರತಂತುಗಳು ಸುಧಾರಿಸಿರುವುದು ಕಂಡುಬಂದಿತು. ಪ್ಲಾಸ್ಟಿಕ್ ವಿದ್ಯುದ್ವಾಹಕದಂತೆ ವರ್ತಿಸಿ ನಿಧಾನವಾಗಿ ದ್ರಾವಣದಲ್ಲಿ ಕರಗುವ ಮೂಲಕ ನರತಂತುಗಳ ಪುನಾರಚನೆಗೆ ಮತ್ತು ಅವುಗಳ ಬಲವರ್ಧನೆಗೆ ಕಾರಣವಾಗುವ ಅಂಶ ಇದರಿಂದ ವ್ಯಕ್ತವಾಯಿತು.





Post a Comment

0Comments
Post a Comment (0)