ಅಲ್ಯೂಮಿನಿಯಂ ಪಾತ್ರೆಗಳು ಆಪತ್ಕಾರಿಯೇ ?
👉ಹಿನ್ನೆಲೆ :
ಅಲ್ಯೂಮಿನಿಯಂ ತಿಳಿಯದವರಾರು? ಅಲ್ಯೂಮಿನಿಯಂ ಪಾತ್ರೆಗಳು ಒಂದು ಕಾಲದಲ್ಲಿ ಎಲ್ಲರ ಮನೆಗಳನ್ನು ಅಲಂಕರಿಸಿದ್ದವು. ಬಡವರಿಂದ ಶ್ರೀಮಂತರವರೆಗೂ ಎಲ್ಲರ ಮನೆ ಮನೆಗಳಲ್ಲಿ ಅಲ್ಯೂಮಿನಿಯಂ ಪಾತ್ರೆಗಳೇ . ಇಂದೂ ಅದರ ಬಳಕೆ ಇದೆ. ಡಬ್ಬಿಗಳ ಮುಚ್ಚಳವಾಗಿ ಅಲ್ಯೂಮಿನಿಯಂ ತಗಡುಗಳು ಚಿರಪರಿಚಿತ. ಬಡವರ ಬೆಳ್ಳಿ, ಎಂದೂ ಅಲ್ಯೂಮಿನಿಯಂಗೆ ಖ್ಯಾತಿ ಇದೆ. ಇದು ಸುಲಭ ಬೆಲೆಗೆ ದೊರೆಯುತ್ತದೆ. 👉 ಹೇಗೆ ದೊರೆಯುತ್ತದೆ : ಭೂ ಕವಚದಲ್ಲಿ ಬಾಕ್ಸೈಟ್ ಅದು ರಾಗಿ, ಜೇಡುಮಣ್ಣು ಮತ್ತು ಜಿಯಾಲೈಟ್ ಗಳಲ್ಲಿ ಸಿಲಿಕೇಟುಗಳಾಗಿ ಅಲ್ಯೂಮಿನಿಯಂ ಲಭ್ಯ. ಆದರೆ ಇವುಗಳಿಂದ ಅಲ್ಯೂಮಿನಿಯಂ ಪಡೆಯುವುದು ಕಠಿಣವೇ, ವಿದ್ಯುತ್ತಿನ ಬಳಕೆಯಿಂದಾಗಿ ಲೋಹ ತಯಾರಿಸುವ ವಿಧಾನ ಸರಳವಾಗಿ ಅದರ ಬಳಕೆಯೂ ಹೆಚ್ಚಾಯಿತು. ಅಲ್ಯೂಮಿನಿಯಂ ಸೇರಿದ ಮಿಶ್ರಲೋಹ ಹೆಚ್ಚು ಬಾಳುತ್ತದೆ. 👉 ಸಾಮಾನ್ಯವಾಗಿ ಎಲ್ಲಿ ಬಳಸುತ್ತಾರೆ : ಅಲ್ಯೂಮಿನಿಯಂ ಹಗುರ, ವಿಮಾನಗಳಲ್ಲಿ ಈ ಕಾರಣದಿಂದಾಗಿಯೇ ಉಪಯೋಗಿಸುವರು. ಉತ್ತಮ ವಿದ್ಯುದ್ವಾಹಕವಾದುದರಿಂದ ಅಲ್ಯೂಮಿನಿಯಂ ತಂತಿಗಳನ್ನು ತಯಾರಿಸಿ ಉಪಯೋಗಿಸುವರು. ಅಡಿಗೆ ಪಾತ್ರಗಳಲ್ಲಿ, ಬಾಣ ಬಿರುಸುಗಳಲ್ಲಿ, ಸಿಗರೇಟ್ ಪ್ಯಾಕ್ ಮೊದಲಾದ ಪ್ಯಾಕಿಂಗ್‌ಗಳಲ್ಲಿ, ವಾಹನ ಬಿಡಿ ಭಾಗಗಳಲ್ಲಿ, ಬಣ್ಣ ತಯಾರಿಕೆಯಲ್ಲಿ ಹೀಗೆ ಅಲ್ಯೂಮಿನಿಯಂನ ಉಪಯೋಗಗಳು ಹತ್ತು ಹಲವು.
👉ಆರೋಗ್ಯದ ಮೇಲೆ ಅಲ್ಯೂಮಿನಿಯಂ ನ ಪರಿಣಾಮವೇನು :
ಇತ್ತೀಚಿನ ಸಂಶೋಧನೆಗಳು ಅಲ್ಯೂಮಿನಿಯಂ ಪಾತ್ರೆಗಳನ್ನುಪಯೋಗಿಸಿ ಅಡಿಗೆ ಮಾಡಿ ಸೇವಿಸಿದಲ್ಲಿ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಗಳುಂಟಾಗುತ್ತವೆ ಎಂದು ಹೇಳುತ್ತವೆ. ಹೀಗಾಗಿ ಅಲ್ಯೂಮಿನಿಯಂ ಆಪತ್ಕಾರಿ ಎಂದು ಸಂಶೋಧಕರು ಹೇಳುತ್ತಿದ್ದಾರೆ . ಆಹಾರವನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸಿದಾಗ ಲೋಹದ ಸ್ವಲ್ಪಾಂಶ ಕರಗಿ ಆಹಾರದ ಮೂಲಕ ನಮ್ಮ ದೇಹವನ್ನು ಸೇರುತ್ತದೆ. ಆಮ್ಮಿಯ ಆಹಾರವನ್ನು ಹೆಚ್ಚೆಚ್ಚು ಬೇಯಿಸಿ ಸೇವಿಸಿದಂತೆ ಇಲ್ಲವೆ ಅಲ್ಯೂಮಿನಿಯಂ ಪಾತ್ರೆ-ಡಬ್ಬಗಳಲ್ಲಿ ದಾಸ್ತಾನು ಮಾಡಿ ಬಳಸಿದಂತೆ ಶರೀರದಲ್ಲಿ ಅದರ ಅಂಶ ಸೇರುವುದು ಹೆಚ್ಚು. ನಾವು ದಿನನಿತ್ಯ ಬಳಸುವ ಹುಣಸೆ, ನಿಂಬೆ ಮತ್ತು ಟೊಮ್ಯಾಟೊ ಸ್ವಾಭಾವಿಕವಾಗಿ ಹೆಚ್ಚು ಆಮ್ಲಿಯ . ಅಲ್ಲದೆ ಅಧಿಕ ಉಷ್ಣತೆಯಲ್ಲಿ ದೀರ್ಘಕಾಲ ಆಹಾರ ಬೇಯಿಸಿದಲ್ಲಿ ನಶಿಸುವಿಕೆ ಹೆಚ್ಚಾಗುತ್ತದೆ. ಹಾಗೆ ನೋಡಿದರೆ ಇತರ ಖನಿಜ ಗಳಂತೆ ಅಲ್ಯೂಮಿನಿಯಂ, ಅವಶ್ಯ ಮೂಲವಸ್ತುವಲ್ಲ ಎಂದಾದರೂ ನಮ್ಮ ಶರೀರದಲ್ಲಿ ರುತ್ತದೆ, ಇದಲ್ಲದೆ ನೀರು, ಆಹಾರ, ಹಣ್ಣು ತರಕಾರಿಗಳು, ಔಷಧ, ಶೃಂಗಾರ ಸಾಧನಗಳು ಇವುಗಳ ಮೂಲಕ ನಾವು ಅಲ್ಯೂಮಿನಿಯಂ ಅನ್ನು ನಮ್ಮ ದೇಹವನ್ನು ಪ್ರವೇಶಿಸುತ್ತಲೇ ಇರುತ್ತದೆ . 👉 ಅಲ್ಯೂಮಿನಿಯಂನಿಂದ ಬರುವ ಕೆಲವು ರೋಗಗಳು :
ವಿಜ್ಞಾನಿಗಳ ಈಚಿನ ಶೋಧಗಳ ಪ್ರಕಾರ ಅಲ್ಮೈಮರಣ ರೋಗ ಉಂಟು ಮಾಡುವಲ್ಲಿ ಅಲ್ಯೂಮಿನಿಯಂ ಸಹಕಾರಿ, ಇದೊಂದು ಮಿದುಳು ನಶಿಸಿ ಹೋಗುವ ರೋಗ, ಈ ರೋಗದಲ್ಲಿ ಮಿದುಳಿನ ವಿವಿಧ ಭಾಗಗಳು-ಹಣೆ, ಕಪೋಲ ಮತ್ತು ಹಿಂಭಾಗಗಳು, ಲಂಬಿಕ್ ವ್ಯವಸ್ಥೆಯ ಹೀಪ್ಟಾ ಕ್ಕಾಂಪನ್ ಕ್ಷೇತ್ರ ವಿಪರೀತವಾಗಿ ಹಾನಿಗೀಡಾಗುತ್ತವೆ. ಅಲ್ಯೂಮಿನಿಯಂ ಮಿದುಳಿನ ನರಕೋಶಗಳನ್ನು ಅಪಾಯ ಕ್ಕೀಡುಮಾಡುತ್ತವೆ. ಚುಚ್ಚುಮದ್ದುಗಳನ್ನು ಮಿದುಳಿಗೆ ನೀಡಿದಾಗ ಸ್ಮರಣಶಕ್ತಿ ಕುಗ್ಗುತ್ತದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ . ✔ ಮಣ್ಣು ಮತ್ತು ನೀರಿನಲ್ಲಿ ಹೆಚ್ಚಿನ ಮಟ್ಟದ ಅಲ್ಯೂಮಿನಿಯಂ ಇದ್ದು ಈ ಪ್ರದೇಶಗಳಲ್ಲಿ ವಾಸಿಸುವ ಜನರು ನರಸಂಬಂಧದ ಕಾಯಿಲೆಗಳಿಗೆ ಈಡಾಗಿರುವುದು ಕಂಡುಬಂದಿದೆ. ಅವರ ಮಿದುಳಿನಲ್ಲಿ ಆಲ್ಮೈಮರನ ರೋಗ ತಗುಲಿದಾಗ ಕ೦ಡು ಬಂದ ಲಕ್ಷಣಗಳು ಗೋಚರಿಸಿವೆ. ✔ ಮೂತ್ರಪಿಂಡದ ತೊಂದರೆಗಳಿಂದ ಬಳಲುತ್ತಿದ್ದರೆ ಆಹಾರ ಸ್ವೀಕರಿಸುವಲ್ಲಿ ಭಾರಿ ಎಚ್ಚರವಿರಬೇಕು. ಯಾವುದೇ ಲೋಹದ ವಿರುದ್ಧ ನಿಯಂತ್ರಿಸಲು ಮತ್ತು ರಕ್ಷಿಸಲು ಮೂತ್ರಪಿಂಡ ದೇಹದ ಒಂದು ಪ್ರಮುಖ ಅಂಗ. ಶಿಶುಗಳು ಅಲ್ಯೂಮಿನಿಯಂನಿಂದಾಗುವ ಅಪಾಯಗಳಿಗೆ ಬೇಗ ಈಡಾಗುತ್ತಾರೆ. ಏಕೆಂದರೆ ಮಗುವಿನಲ್ಲಿ ನಿಯಂತ್ರಣಾಂಗಗಳು ಇನ್ನೂ ವೃದ್ಧಿಯಾಗಿರುವುದಿಲ್ಲ. ಅಲ್ಯೂಮಿನಿಯಂ ಡಬ್ಬಿಯಲ್ಲಿ ಕರಿಗಿಸಿದ ಹಾಲುಪುಡಿ ಬಳಸುವುದು ತಪ್ಪಿಸುವುದೇ ಕ್ಷೇಮ, ಕಬ್ಬಿಣದ ಬಾಣಲೆ ಒಂದು ಉತ್ತಮ ಸಾಧನ. ಅದನ್ನು ಬೇಯಿಸಲು ಬಳಸಬಹುದು . .
ನಮ್ಮ ಶರೀರವನ್ನು ಅಲ್ಯೂಮಿನಿಯಂ ಹೇಗೆಲ್ಲ ಪ್ರವೇಶಿಸುತ್ತದೆ ಎಂಬುದೂ ಕುತೂಹಲಕಾರಿ ಅಂಶ, ಅಲ್ಯೂಮಿನಿಯಂ, ಆಮ್ಲಜನಕ, ಗಂಧಕ ಮತ್ತು ಸಿಲಿಕಾನ್‌ನಂತಹ ಬೇರೆ ಬೇರೆ ಮೂಲ ವಸ್ತುಗಳೊಡನೆ ಬೆರೆತು ಅಲ್ಯೂಮಿನಿಯಂ ಸಂಯುಕ್ತ ವಸ್ತುಗಳನ್ನುಂಟು ಮಾಡುತ್ತವೆ. ಇವುಗಳಲ್ಲಿ ಕೆಲವನ್ನು ಹೆಚ್ಚಿನ ಪ್ರಮಾಣದಲ್ಲಿ ಶರೀರವು ಹೀರಿಕೊಳ್ಳುತ್ತದೆ. ಉದಾಹರಣೆಗೆ ನೀರಿನ ಶುದ್ದೀಕರಣ ದಲ್ಲಿ ಸ್ಪಟಿಕ (ಆಲಂ)ವನ್ನು ಬಳಸುತ್ತಾರೆ. ಇದೊಂದು ಅಲ್ಯೂಮಿನಿಯಂ ಸಂಯುಕ್ತ, ಅಲ್ಯೂಮಿನಿಯಂನ ಸಂಯುಕ್ತ ವಸ್ತುಗಳು ಸ್ಟೇದ ಕರೋಧ (ಆಂಟಿ ಪರ್‌ಸ್ಪರೆಂಟ್) ಗಳಲ್ಲಿ ಕ್ರಿಯಾತ್ಮಕ ಘಟಕವಾಗಿರುತ್ತವೆ. ಇವು ಚರ್ಮದ ಮೂಲಕ ಸುಲಭವಾಗಿ ಶರೀರ ಸೇರುತ್ತವೆ. ಆದುದರಿಂದ ಅಲ್ಯೂ ಮಿನಿಯಂ ಹೊಂದಿರುವ ಶೃಂಗಾರ ಸಾಧನಗಳ ಬಳಕೆ ತಪ್ಪಿಸಬೇಕು. ಮುಖಕ್ಕೆ ಬಳಿಯುವ ಕ್ರೀಮಿನಲ್ಲಿ ಅಲ್ಯೂಮಿನಿಯಂ ವಿಶೇಷವಾಗಿರುತ್ತದೆ. ಹಾಗೆ ನೋಡಿದರೆ ಅಲ್ಯೂಮಿನಿಯಂ ನಮ್ಮ ಶರೀರಕ್ಕೆ ಅಗತ್ಯವಾದ ವಸ್ತುವೂ ಅಲ್ಲ. 👉 ಅಲ್ಯೂಮಿನಿಯಂ ಪಾತ್ರೆಗಳ ಬಳಕೆ ಬಗ್ಗೆ ಪೌಷ್ಟಿಕ ಆಹಾರ ತಜ್ಞರು ಹೇಳುವುದು ಹೀಗೆ : (1) ಅಲ್ಯೂಮಿನಿಯಂ ಪಾತ್ರೆಗಳನ್ನು ಅಡಿಗೆಗಾಗಿ ಬಳಸುವಾಗ ಅದು ಲೇಪಿಸಿದ (ಕರಗಿದ) ಅಲ್ಯೂಮಿನಿಯಂ ಹೌದೆ ಎಂಬುದನ್ನು ದೃಢಪಡಿಸಿಕೊಳ್ಳಿ. (2) ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸುವಾಗ ಅಧಿಕ ಜ್ವಾಲೆ ಉರಿಸಬೇಡಿ. ಹೆಚ್ಚಿನ ಉಷ್ಣತೆ ದ್ರವಸೋರಿಕೆಗೆ ಕಾರಣವಾಗುತ್ತದೆ. (3) ನೀರು ಮೂಲದ ಆಹಾರ ಬೇಯಿಸಿದಲ್ಲಿ ಅಪಾಯ ಕಡಿಮೆ. ಸಾಧ್ಯ ವಿದ್ದಷ್ಟೂ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸುವಾಗ ಮರದ ಚಮಚೆ ಬಳಸಿ ಆಹಾರ ಕಲಸಿರಿ. (4) ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಆಮ್ಮಿಯ ಆಹಾರಗಳನ್ನು ಬೇಯಿಸಬಾರದು. ಉಪ್ಪು ಸಹ ಅಲ್ಯೂಮಿನಿಯಂ ಜೊತೆ ನರ್ತಿಸುತ್ತದೆ. ಆದುದರಿಂದ ಬೇಯಿಸಿದ ಆಹಾರಕ್ಕೆ ಉಪ್ಪು ಬೆರೆಸುವ ಮುನ್ನ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗೆ ವರ್ಗಾಯಿಸಿ. (5) ಅಲ್ಯೂಮಿನಿಯಂ ಪಾತ್ರೆಯಲ್ಲಿ ಟೀ ಅಥವಾ ಕಾಫಿಯನ್ನು ಹೆಚ್ಚು ಕಾಲ ಕಾಯಿಸಬೇಡಿ. ಅಲ್ಯೂಮಿನಿಯಂ ಆಪತ್ಕಾರಿ ನಿಜ. ಮಿತಿಯರಿತು ಬಳಸುವುದು ಕ್ಷೇಮ.

