ಜೇನುನೊಣಗಳ ಕೌತುಕ ಸಂಗತಿಗಳು
ಯಾವುವು ?
.
✔ ಜೇನುಗೂಡನ್ನು ನೀವು ನೋಡಿರಬಹುದು. ಸಾವಿರಾರು ಸಂಖ್ಯೆಯಲ್ಲಿ ಜೇನುಗಳಿದ್ದರೂ ಪ್ರತಿ ಗೂಡಿಗೆ ಒಂದೇ ಒಂದು ಮೊಟ್ಟೆ ಇಡುವ ರಾಣಿಜೇನು ಇರುತ್ತದೆ. ಇನ್ನುಳಿದ ಉಳಿದ ಜೇನುಗಳಲ್ಲಿ ಎರಡು ವಿಧಗಳಿವೆ. ಒಂದು, ಕೆಲಸಗಾರ ಜೇನು ನೊಣ. ಇನ್ನೊಂದು ಸೋಮಾರಿಯಾದ ಗಂಡು ಜೇನುನೊಣ. ನಿಜಕ್ಕೂ ಕೆಲಸಗಾರ ಜೇನುನೊಣಗಳು ಹೆಣ್ಣಾಗಿದ್ದರೂ ಇವೆಲ್ಲವೂ ಬಂಜೆಯಾಗಿ ಬಿಟ್ಟಿರುತ್ತವೆ.
✔ ಆದರೆ ಇವುಗಳೇ ಮಧುವನ್ನು ತರುವುದು, ರಾಣಿಜೇನು ಇಟ್ಟ ಮೊಟ್ಟೆಗಳನ್ನು ನೋಡಿಕೊಳ್ಳುವುದು. ಇವುಗಳಿಗೆ ಒಂದು ವಿಷದ ಕೊಂಡಿಯೂ ಶತ್ರುಗಳಿಂದ ರಕ್ಷಿಸಿಕೊಳ್ಳುಲು ಇದೆ. ಗಂಡಿಗೆ ಇಂತಹ ಕೊಂಡಿಯೂ ಇಲ್ಲ. ಇದು ಶುದ್ಧ ಸೋಮಾರಿ. ಗೂಡು ಬಿಟ್ಟು ಸ್ವಲ್ಪವೂ ಕದಲುವುದಿಲ್ಲ. ಕೆಲಸಗಾರ ಜೇನು ನೊಣಗಳು ತಂದ ಆಹಾರವನ್ನು ಉಂಡು ಕುಳಿತುಕೊಳ್ಳುತ್ತವೆ. ಇವುಗಳ ಒಂದೇ ಒಂದು ಕೆಲಸವೇನೆಂದರೆ ರಾಣಿಜೇನನ್ನು ಲೈಂಗಿಕವಾಗಿ ಸಂಪರ್ಕಿಸುವುದೊಂದೇ.
✔ ಆದರೂ ಎಲ್ಲಾ ಗಂಡಿಗೂ ಅಂತಹ ಅವಕಾಶ ಸಿಕ್ಕದು. ರಾಣಿಜೇನು ಸಹ ತನ್ನ ಗೊಡಿನಿಂದ ತನ್ನ ಜೀವಿತದಲ್ಲಿ ಮೂರು ಬಾರಿ ಮಾತ್ರ ಹೊರಹೋಗುತ್ತದೆ . ಅದು ಮಧುಚಂದ್ರಕ್ಕಾಗಿ ಬೆಳಗಿನ ಪ್ರಶಾಂತತೆಯಲ್ಲಿ ಇದು ತನ್ನ ಗೂಡಿನಿಂದ ಆರೇಳು ಕಿಲೋಮೀಟರ್ ತನಕ ಅತಿವೇಗವಾಗಿ ಹಾರಿ ಹೋಗುತ್ತದೆ. ಆಗ ಅದು ಸ್ರವಿಸುವ ಲೈಂಗಿಕ ಫೆರೋಮೋನ್‌ಗಳ ವಾಸನೆಯಿಂದ ಹಿಂಡುಹಿಂಡಾಗಿ ಗಂಡುಗಳು ಅದನ್ನು ಹಿಂಬಾಲಿಸುತ್ತವೆ. ಕೊನೆಯಲ್ಲಿ ಕೆಲವು ಬಲಿಷ್ಠ ಗಂಡುಗಳೊಡನೆ ರಾಣಿಜೇನು ನನ್ನ ಗಗನದಲ್ಲೇ ಹಾರಾಡುತ್ತಲೇ ಮಧುಚಂದ್ರ ಗೈಯುತ್ತದೆ.
✔ ರಾಣಿಯಲ್ಲಿರುವ ವಿಶೇಷ ಚೀಲದಲ್ಲಿ ಗಂಡಿನ ಸಂಗ್ರಹಗೊಳ್ಳುತ್ತದೆ. ಈ ಬೇಕಾದಾಗ ರಾಣಿ ತತ್ತಿಗಳನ್ನು ಉತ್ಪಾದಿಸಿಕೊಳ್ಳುತ್ತದೆ. ಮೊಟ್ಟೆಯಿಡುವ ಮೊದಲೇ ಗಂಡು ಬೇಕೋ, ಕೆಲಸಗಾರ ಜೇನುಗಳು ಬೇಕೋ ಎಂಬುದನ್ನು ನಿರ್ಧರಿಸಿ ನಿಯಂತ್ರಿಸುವ ಶಕ್ತಿ ರಾಣಿಜೇನಿಗಿದೆ. ಒಂದು ಗೂಡಿನಲ್ಲಿ ಒಂದೇ ರಾಣಿಜೇನಿದ್ದರೂ ಅದಕ್ಕೇನಾದರೂ ಕಾಯಿಲೆ ಬಂದಾಗ ಗುಂಪಿನಲ್ಲಿರುವ ಕೆಲಸಗಾರ ಜೇನುನೊಣಗಳು ಮತ್ತೊಂದು ರಾಣಿಜೇನನ್ನು ವಿಶಿಷ್ಟ ಆಹಾರ ನೀಡಿ ಬೆಳೆಸುತ್ತವೆ. ಆದರೆ ಒಂದು ಗೂಡಿಗೆ ಒಂದೇ ರಾಣಿ ಇರತಕ್ಕದ್ದೆಂಬ ನಿಯಮವನ್ನು ಇವು ಖಡಾಖಂಡಿತವಾಗಿ ಪಾಲಿಸುತ್ತವೆ. ಆಕಸ್ಮಿಕವಾಗಿ ಎರಡು ರಾಣಿಜೇನಿದ್ದರೆ ಒಂದನ್ನು ಯಾವ ಮುಲಾಜೂ ಇಲ್ಲದೆ ಸಾಯಿಸಿಬಿಡುತ್ತವೆ. ಹಾಗೆಯೇ ಬೇರೆ ಬೇರೆ ಗೂಡಿನ ರಾಣಿಗಳು ಯಾವಾಗಲಾದರೂ ಎದುರಾದರೆ ಹೋರಾಟ ಶತಸ್ಸಿದ್ದ. ಒಂದು ಸಾಯುವ ತನಕ ಯುದ್ಧ ನಡೆಯುತ್ತದೆ. ಗಂಡಿಗೆ ಇಷ್ಟೆಲ್ಲಾ ವೀರಾವೇಶ ಇಲ್ಲ. ಲೈಂಗಿಕ ಕ್ರಿಯೆ ಜರುಗಿದೊಡನೆ ಇವು ನಿಶ್ಯಕ್ತಿಗೊಂಡು ಸತ್ತುಬಿಡುತ್ತವೆ. ಇಷ್ಟಲ್ಲದೆ ಆಹಾರ ಅಭಾವದ ಕಾಲದಲ್ಲಿ ಕೆಲಸಗಾರ ನೊಣಗಳು ಇವನ್ನು ಬರೀ ತಿಂಡಿಪೋತರೆಂದು ಕಡೆಗಾಣಿಸಿ ಗೂಡಿನಿಂದ ಹೊರಹಾಕುವುದುಂಟು. ಮತ್ತು ಹರ ಮಾಡಿದ ಗಂಡುಗಳನ್ನು ನಿರ್ದಯವಾಗಿ ಕೊಂದುಹಾಕುವುದುಂಟು. ಕೆಲಸಗಾರ ಜೇನುಗಳು ಹುಟ್ಟಿದ ಎರಡನೆಯ ದಿನದಿಂದಲೇ ಶಿಸ್ತಿನ ಕೆಲಸಗಾರರಾಗಿ ಸಾಯುವ ತನಕ ದುಡಿಯುವುದುಂಟು. ಮೂರರಿಂದ ನಾಲ್ಕು ದಿನಗಳ ಮರಿಗಳು ಜೇನುಗೂಡನ್ನು ಶುಚಿಗೊಳಿಸುತ್ತವೆ. ತಮಗಿಂತ ಕಿರಿಯ ಅಪಕ್ವ ಮರಿಗಳಿಗೆ ಆಹಾರವನ್ನು ತಿನ್ನಿಸುತ್ತವೆ. ಐದು ದಿನಗಳ ನೊಣಗಳು ಮೇಣವನ್ನು ಸ್ರವಿಸಿ ಗೂಡನ್ನು ಕಟ್ಟುತ್ತವೆ. ಹದಿನೆಂಟರಿಂದ ಇಪ್ಪತ್ತು ದಿನಗಳ ನಂತರ ಗೂಡಿನಿಂದ ಹೊರಬಂದು ಆಹಾರದ ಅನ್ವೇಷಣೆಗೆ ಹೊರಡುತ್ತವೆ.
ಜೇನುಗಳು ಸಾಮಾನ್ಯವಾಗಿ ಒಂದೇ ಜಾತಿಯ ಸಸ್ಯಗಳ ಮಧುವನ್ನು ಸಂಗ್ರಹಿಸುತ್ತವೆ. ಇದರಿಂದ ಸಸ್ಯಗಳಿಗೂ ಭಾರೀ ಪ್ರಯೋಜನವುಂಟು. ಜೇನುನೊಣಗಳು ಮಧುವನ್ನು ಸಂಗ್ರಹಿಸುವ ಕಾಲದಲ್ಲಿ ಜರುಗುವ ಪರಾಗಸ್ಪರ್ಶದಿಂದಲೇ ಬೆಳೆಯ ಇಳುವರಿ ಶೇಕಡಾ ೩೦ರಿಂದ ೩೦೦ ಪಾಲು ಹೆಚ್ಚಾಗುವುದುಂಟೆಂದು ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ.
.jpg)
✔ ಜೇನುನೊಣಗಳಿಗೆ ತಮ್ಮದೇ ಭಾಷೆಯುಂಟು, ಇವು ಸೂಕ್ಷ್ಮಶಬ್ದಗಳನ್ನು ಹೊರಡಿಸಿ, ನರ್ತಿಸಿ, ವಾಸನೆಗಳನ್ನು ವಿಸರ್ಜಿಸಿ, ರೆಕ್ಕೆಗಳನ್ನು ವಿಸರ್ಜಿಸಿ, ರೆಕ್ಕೆಗಳನ್ನು 5 ಲುಗಿಸುವುದರ ಮೂಲಕ ಸಂಜ್ಞೆಗಳನ್ನು ಸೂಚಿಸಿ ಪರಸ್ಪರ ಸಂಭಾಷಣಗೈಯುವುದುಂಟು. ಜೇನುಗಳಿಗೆ ಉಣ್ಣೆ, ಕೂದಲು, ಕಪ್ಪನೆಯ ಬಟ್ಟೆ ವಿನ್ನಾ ಕಂಡರೆ ಆಗದು. ಏಕೆಂದರೆ ಅವುಗಳ ಜನ್ಮ ಜನ್ಮಾಂತರದ ಶತ್ರು ಕರಡಿ। ಅದಕ್ಕೆ ಕರಡಿಯನ್ನು ನೆನಪಿಸುವ ಯಾವ ವಸ್ತುವೂ ಇವುಗಳಿಗೆ ಅಹಿತಕಾರಿಯಾಗುತ್ತದೆ. ಮತ್ತು ಇನ್ನು ಹೊಗೆಗೂ ಸಹ ಜೇನುನೊಣಗಳು ತೀವ್ರವಾಗಿ ಸ್ಪಂದಿಸುತ್ತವೆ. ಇದೂ ಸಹ ಜನ್ಮ ಜನ್ಮಾಂತರಗಳಿಂದ ಕಾಡ್ಡಿಚ್ಚಿನ ಬವಣೆಯನ್ನು ಅನುಭವಿಸಿದ್ದರೆ ನೆನಪು ಆಗಿದೆ. ಹೊಗೆ ಕಂಡೊಡನೆ ತಾವೇ ಶೇಖರಿಸಿದ್ದ ಮಧುವನ್ನೆಲ್ಲಾ ತಾವೇ ತಿಂದು ಮುಗಿಸಿಬಿಡುತ್ತವೆ! ಆದರೆ ಇಲ್ಲೊಂದು ವಿಶೇಷ ಏನೆಂದರೆ ತಿಂದಾದ ನಂತರ ಜೇನುನೊಣಗಳು ತುಂಬಾ ಸಾಧುವಾಗಿಬಿಡುತ್ತವೆ!
✔ ಹೂವುಗಳಿಂದ ಸಂಗ್ರಹಿಸಿದ ಮಧುವಿನಲ್ಲಿ ಹೆಚ್ಚಿನ ನೀರಿನಂಶ ಇರುತ್ತದೆ. ಇದನ್ನು ಕಡಿಮೆ ಮಾಡಲು ಜೇನುನೊಣಗಳು ತಮ್ಮ ರೆಕ್ಕೆಗಳಿಂದ ಗಾಳಿ ಬೀಸುತ್ತವೆ. ತಾವು ತಂದ ಮಧುವಿಗೆ ಜೇನುನೊಣಗಳು ತಮ್ಮಲ್ಲಿಂದ ವಿಶಿಷ್ಟವಾದ ಕಿಣ್ವಗಳನ್ನು ಬಿಡುಗಡೆ ಮಾಡಿ ಸೇರಿಸುತ್ತವೆ. ಇದರಿಂದ ಜೇನು ತುಪ್ಪಕ್ಕೆ ಆಮ್ಮಿಯತೆ ಹೆಚ್ಚಾಗಿ ಕೆಡದಂತಹ ಗುಣ ಬರುತ್ತದೆ. ಇದರ ಮೇಣ ನೂರಾರು ವರ್ಷ ಇಟ್ಟರೂ ಕೆಡುವುದಿಲ್ಲ.
