ರಾತ್ರಿಯಲ್ಲಿ ನೀವೆಷ್ಟು ನಕ್ಷತ್ರಗಳನ್ನು ನೋಡಬಲ್ಲರಿ?
✔ ಪರಿಚಯ :
ಯಾವುದೇ ರಾತ್ರಿಯಲ್ಲಿ, ನಗರಗಳು ಮತ್ತು ನಗರ ಪ್ರದೇಶಗಳ ಪ್ರಕಾಶಮಾನವಾದ ದೀಪಗಳಿಂದ ಮನುಷ್ಯರು ಸರಾಸರಿ ದೃಷ್ಟಿ ಹೊಂದಿರುವ ಒಬ್ಬ ವ್ಯಕ್ತಿಯು ಸುಮಾರು 2,000 ರಿಂದ 3,000 ನಕ್ಷತ್ರಗಳನ್ನು ನೋಡಬಹುದು. ಆದರು ನಕ್ಷತ್ರಗಳ ಈ ಸಂಖ್ಯೆಯು ನಮ್ಮ ಭೂಮಿಯ ಬೆಳಕಿನ ಮಾಲಿನ್ಯ, ವಾತಾವರಣದ ಮಾಲಿನ್ಯ ಮತ್ತು ಚುಕ್ಕಿಗಳನ್ನು ನೋಡುವ ವ್ಯಕ್ತಿಯ ಸ್ಥಳ ಇವುಗಳ ಮೇಲೆ ಅವಲಂಬಿಸಿ ಗಣನೆಯು ಬದಲಾಗುತ್ತದೆ.
ಬೀದಿ ದೀಪಗಳು, ಕಟ್ಟಡಗಳು ಮತ್ತು ಇತರ ಮೂಲಗಳಿಂದ ಕೃತಕ ದೀಪಗಳಿಂದ ಉಂಟಾಗುವ ಬೆಳಕಿನ ಮಾಲಿನ್ಯವು ರಾತ್ರಿಯ ಆಕಾಶದಲ್ಲಿ ಗೋಚರಿಸುವ ನಕ್ಷತ್ರಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ, ನೀವು ಕೆಲವು ಚುಕ್ಕಿಗಳನ್ನು ಮಾತ್ರ ನೋಡಲು ಸಾಧ್ಯವಾಗುತ್ತದೆ . ಅಮೋಘ ನಕ್ಷತ್ರಗಳಿಂದ ಕೂಡಿದ ಆಕಾಶದ ಸೌಂದರ್ಯವನ್ನು ನಿಜವಾಗಿಯೂ ಅನುಭವಿಸಲು ನಗರದ ಬೀದಿ ದೀಪ , ಲೈಟ್‌ಗಳಿಂದ ದೂರವಿರುವ ಹಳ್ಳಿ ಅಥವಾ ಬೆಟ್ಟದಂತಹ ಸ್ಥಳಗಳಿಗೆ ಹೋಗುವುದು ಅತ್ಯಗತ್ಯ.
ರಾತ್ರಿ ಹೊತ್ತಿನಲ್ಲಿ ಆಕಾಶ ವೀಕ್ಷಿಸಿದರೆ ಕತ್ತಲ ಪರದೆಯ ಮೇಲೆ ಮಿನುಗುವ ಎಣಿಸಲಾಗದಷ್ಟು ಸಹಸ್ರಾರು ನಕ್ಷತ್ರಗಳನ್ನು ನಾವು ಕಾಣಬಹುದು. ಆದರೆ ದೂರದರ್ಶಕದ ಹೊರತಾಗಿ ಕೇವಲ 6,000 ನಕ್ಷತ್ರಗಳನ್ನು ಮಾತ್ರ ನಾವು ವೀಕ್ಷಿಸಲು ಸಾಧ್ಯ ಎಂಬ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ. ಇದರರ್ಥ ಒಬ್ಬ ವ್ಯಕ್ತಿ ತಾನು ನೋಡುವ ನಕ್ಷತ್ರಗಳನ್ನು ಎಣಿಸಿಕೊಳ್ಳಲೆಂದಲ್ಲ. ಏಕೆಂದರೆ 6,000 ನಕ್ಷತ್ರಗಳಲ್ಲಿ ಕಾಲು ಭಾಗದಷ್ಟು ನಕ್ಷತ್ರಗಳು ಪಶ್ಚಿಮ ಯೂರೋಪಿನ ದಕ್ಷಿಣ ಭಾಗದಿಂದ ಹೆಚ್ಚು ದೂರವಿದ್ದು, ಉಳಿದ ನಕ್ಷತ್ರಗಳು ಭೂಮಿಯ ಎಲ್ಲಾ ಜಾಗದಿಂದಲೂ ಕಾಣುತ್ತವೆ. ಇವುಗಳಲ್ಲಿ ಒಂದರಲ್ಲಿ ಅರ್ಧದಷ್ಟು ನಕ್ಷತ್ರಗಳು ಒಂದು ಸಮಯದಲ್ಲಿ ಕಾಣುತ್ತವೆ. ಉಳಿದವು ದಿಗಂತದ ಒಳಗಿರುವಂತೆ ಕಾಣುತ್ತವೆ.
ಬಹಳಷ್ಟು ನಕ್ಷತ್ರಗಳು ದಿಗಂತದ ಸಮೀಪದಲ್ಲಿದ್ದರೂ ಮಂಜು ಮುಸುಕಿರುವ ಕಾರಣದಿಂದ ನಮಗೆ ಕಾಣಿಸುವುದಿಲ್ಲ. ಹೀಗಾಗಿ ನಾವು ನೋಡಿದ ನಕ್ಷತ್ರಗಳನ್ನು ಎಣಿಸಿಕೊಳ್ಳುತ್ತಾ ಹೋದರೂ, 1,000 ನಕ್ಷತ್ರಗಳನ್ನು ಎಣಿಸುವಷ್ಟರಲ್ಲಿ ನಮಗೆ ಗೊಂದಲ ಉಂಟಾಗುತ್ತದೆ. ಹೀಗಾಗಿ ನಕ್ಷತ್ರಗಳ ಎಣಿಕೆ ಸಾಧ್ಯವಿಲ್ಲ. ಹಾಗಾದರೆ ಈಗ ತಿಳಿಸಿರುವ ಲೆಕ್ಕವನ್ನು ಯಾರು ಮಾಡಿದರು, ಹೇಗೆ ಮಾಡಿದರು?
ದೂರದರ್ಶಕಗಳಿಗೆ ವಿಶೇಷ ಕೆಮೆರಾಗಳನ್ನು ಅಳವಡಿಸಿ ಆ ಮೂಲಕ ಬಾನಿನ ನಕ್ಷತ್ರಗಳ ಛಾಯಾಚಿತ್ರಗಳನ್ನು ತೆಗೆದು ಲೆಕ್ಕ ಮಾಡಲಾಗಿದೆ. ಈ ರೀತಿ ಮಾಡುವಾಗ ನಮಗೆ ಸಹಜವಾಗಿ ಕಣ್ಣಿಗೆ ಕಾಣದ ನಕ್ಷತ್ರಗಳನ್ನು ಛಾಯಾಚಿತ್ರದಲ್ಲಿ ಗುರುತಿಸಿ, ಬಾನಿನ ಎಣಿಕೆ ಮಾಡಿದ್ದಾರೆ. ಇದರ ಜೊತೆಗೆ ಕಾಲಕಾಲಕ್ಕೆ ತಕ್ಕಂತೆ ಇನ್ನೂ ಹಲವು ನಕ್ಷತ್ರಗಳ ಸೇರ್ಪಡೆಯಾಗುತ್ತಲೇ ಇರುತ್ತವೆ. ಅಂದ ಹಾಗೆ ಈ ಕಾರ್ಯದಲ್ಲಿ, ಉತ್ಕೃಷ್ಟ ದೂರದರ್ಶಕದ ಸಹಾಯದಿಂದ ಸುಮಾರು 100,00,00,000(ನೂರು ಕೋಟಿ)ಗಿಂತಲೂ ಹೆಚ್ಚು ನಕ್ಷತ್ರಗಳ ಛಾಯಾಚಿತ್ರಗಳನ್ನು ತೆಗೆಯಲಾಗಿದೆ!
✔ ಚುಕ್ಕಿಗಳಿಗು ಹೆಸರು :
ನಕ್ಷತ್ರಗಳ ಅನ್ವೇಷಣೆಯಲ್ಲಿ ತೊಡಗಿದ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಕಾಣುವ ಪ್ರತಿ ನಕ್ಷತ್ರವನ್ನೂ ಹೆಸರಿಸುತ್ತಾರೆ ಅಥವಾ ಗುರುತಿನ ಸಂಖ್ಯೆಯನ್ನು ನೀಡುತ್ತಾರೆ. ಹೀಗಾಗಿ ಅವುಗಳ ಲೆಕ್ಕವಿಡಲು ಸಾಧ್ಯವಾಗುತ್ತದೆ. ಬಹಳ ಹಿಂದೆ ಅರಬ್, ಭಾರತ, ಗ್ರೀಕ್, ರೋಮ್ ಮತ್ತು ಚೀನಾದ ಜನರು ಹೆಚ್ಚು ಪ್ರಕಾಶಮಾನವಾದ ನಕ್ಷತ್ರಗಳಿಗೆ ಹೆಸರಿಸುತ್ತಿದ್ದರು. ಅಲ್ಲದೆ ಉಳಿದ ನಕ್ಷತ್ರಗಳೂ ಸಹ ತಮ್ಮದೇ ರೀತಿಯಲ್ಲಿ ಪ್ರಸಿದ್ಧವಾಗಿದೆ. 100ಕ್ಕೂ ಹೆಚ್ಚು ನಕ್ಷತ್ರಗಳಿಗೆ ಈ ರೀತಿ ಹೆಸರಿಸಲಾಗಿದೆ.
ಸುಮಾರು ಕ್ರಿಸ್ತಶಕ 136ರಲ್ಲಿ ಗುರುತಿಸಿದ ನಕ್ಷತ್ರಗಳ ವಿವರಗಳ ಪಟ್ಟಿಯನ್ನು ಮೊದಲ ಬಾರಿಗೆ ರಚಿಸಲಾಯಿತು. ಇದರಲ್ಲಿ 1,025 ನಕ್ಷತ್ರಗಳ ವಿವರಣೆಯಿದೆ. ಇಂತಹ ಹೊಸ ವಿವರಣೆ ಪಟ್ಟಿಯಲ್ಲಿ 4,57,000 ನಕ್ಷತ್ರಗಳ ವಿವರಣೆಯಿದೆ.
✔ ವೇದಗಳಲ್ಲಿ ನಕ್ಷತ್ರಗಳು :
ನಕ್ಷತ್ರ ಎಂಬ ಪದವನ್ನು ಋಗ್ವದ ಮತ್ತು ಬೇರೆ ವೇದಗಳಲ್ಲಿ ಬಹಳಷ್ಟು ಬಾರಿ ಬಳಸಲಾಗಿದೆ. ಋಗ್ಗೇದದಲ್ಲಿ ಅವುಗಳನ್ನು ಎಣಿಸುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ. ಆದರೆ ಇಡೀ ವೇದದ ಕೆಲವು ವಾಕ್ಯವೃಂದಗಳಲ್ಲಿ ಅವುಗಳ ಜೊತೆಗೆ ಕೆಲವು ಹೆಸರುಗಳ ಸೇರ್ಪಡೆಯಾಗಿರುವುದನ್ನು ಕಾಣಬಹುದು.
👉 ಅಥರ್ವಣವೇದದ 19ನೇ ಪುಸ್ತಕದಲ್ಲಿ ಎಲ್ಲಾ 27 ನಕ್ಷತ್ರಗಳ ಹೆಸರನ್ನು ನಮೂದಿಸಲಾಗಿದೆ. ಶುನಶೇಪ ಎಂಬುವವನು ಪ್ರಾಚೀನ ಕಾಲದ ಶ್ರೇಷ್ಠ ನಕ್ಷತ್ರ ಅವಲೋಕನಕಾರರಲ್ಲಿ ಒಬ್ಬನಾಗಿದ್ದಾನೆ. ಆತನ ಬಗೆಗೆ ಅನೇಕ ದಂತಕತೆಗಳು ಪ್ರಸಿದ್ಧವಾಗಿವೆ. ಈತ ಅಜಿಗಾರ್ಥ ಎಂಬುವವರ ಮಗನಾಗಿದ್ದು, ವಿಶ್ವಾಮಿತ್ರ ಮುನಿಯ ಬಾಹ್ಯಾಕಾಶ ಅಧ್ಯಯನದ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದನಂತೆ. ಇವನು ನಕ್ಷತ್ರಗಳ ಬಗೆಗೆ ಅನೇಕ ಅಧ್ಯಯನಗಳನ್ನು ಮಾಡಿದ್ದನು ಎಂಬ ಪ್ರತೀತಿಯಿದೆ.
👉 ವಾಮದೇವ ಎಂಬುವವರು ಬೃಹಸ್ಪತಿ ಅಥವಾ ಗುರು ಗ್ರಹವನ್ನು ಮೊದಲ ಬಾರಿಗೆ ಕಂಡುಹಿಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಭೈಗುಮಹರ್ಷಿಯ ಮಗ ವೀಣ ಎಂಬಾತ ಶುಕ್ರ ಗ್ರಹವನ್ನು ಕಂಡುಹಿಡಿದವರಾಗಿದ್ದಾರೆ. ಇವಂದ ಚಿತ್ರದ
👉 ಗ್ರೀಸ್ ಮತ್ತು ಸಿರಿಯಾ ದೇಶಗಳಲ್ಲಿ ಮೊದಲ ಬಾರಿಗೆ ತಿಳಿಸಲಾದ ನಕ್ಷತ್ರ ಪುಂಜಗಳ ಹೆಸರು ಫೆ-ಅಡ್ಸ್ ಹೋಮರ್ ಮತ್ತು ಹೆಸ್ಯಾಡ್ ಇವುಗಳನ್ನು
ಹೆಸರಿಸಿದರು. ಕ್ರಿಸ್ತಶಕ 1884ರಲ್ಲಿ ನಾರನ್ ಲಾಕ್‌ಯೆರ್ ಎಂಬುವವರು ಓರಿಯನ್, ಆರ್ಕ್‌ರಸ್, ದಿ ಗ್ರೇಟ್ ಬೇರ್ ಎಂಬ ನಕ್ಷತ್ರಗಳನ್ನು ಹೆಸರಿಸಿದರು. ವೇದಗಳಲ್ಲಿ ನಕ್ಷತ್ರಗಳ ಬಗ್ಗೆ ವಿವರಿಸಲಾಗಿದ್ದು, ಇದಾದ ಹಲವು ಶತಮಾನಗಳ ನಂತರ ನಾಲ್ಮನ್ ಮೇಲೆ ತಿಳಿಸಿದ ನಕ್ಷತ್ರಗಳ ಬಗ್ಗೆ ವಿವರಿಸಿದರು.
.jpg)
.jpg)