ನೀವು ಕುಡಿಯುವ ಕಾಫಿಯಲ್ಲಿರುವ ಕೆಫೀನ್ ಬಗ್ಗೆ ನಿಮಗೇನು ಗೊತ್ತು ?
👉 ಹಿನ್ನೆಲೆ
ನಮ್ಮ ಶರೀರದ ಎಲ್ಲಾ ದೈಹಿಕ ಕ್ರಿಯೆಗೂ ಶಕ್ತಿ ಕೊಡುವುದು ನಮ್ಮ ದೇಹದಲ್ಲಿರುವ ಸಕ್ಕರೆ ಅಂಶ. ಈ ಸಕ್ಕರೆ ಅಡ್ರಿನಲಿನ್ ನಿರ್ನಾಳ ಗ್ರಂಥಿಯಿಂದ ಶ್ರಮಿಸುವ ಇನ್‌ಸುಲಿನ್‌ನಿಂದ 'ದಹಿಸಲ್ಪಟ್ಟಾಗ' ನಮಗೆ ದೈಹಿಕ ಕ್ರಿಯೆಗೆ ಶಕ್ತಿಸಿಗುತ್ತದೆ. ಈ ಸಕ್ಕರೆ ಅಂಶವನ್ನು ರಕ್ತದಲ್ಲಿ ಉಂಟುಮಾಡುವುದು ನಮ್ಮ ಯಕೃತ್ತು.
✔ ಈ ಯಕೃತ್ತಿನ ಈ ಕ್ರಿಯೆಯನ್ನು ಪ್ರಚೋಧಿಸುವುದು ಅಡ್ರಿನಲಿನ್‌ನಿಂದಲೇ ಉತ್ಪತ್ತಿಯಾದಅಡೆನೋ ಸೈನ್ ಮೋನೋಫಾಸ್ಟೇಟ್ ಅಥವಾ AMP ಎಂಬ ರಸಾಯನಿಕ ವಸ್ತು ಈ ರಸಾಯನಿಕ ವಸ್ತುವೇನೋ ಸಕ್ಕರೆ ಉತ್ಪಾದಿಸಲು ಪ್ರಚೋದಿಸಿಬಿಡುತ್ತದೆ.
ಆದರೆ ನಮ್ಮ ದೇಹದಲ್ಲಿ ಬೇಕಾಬಿಟ್ಟಿ ಸಕ್ಕರೆ ಉತ್ಪಾದಿತವಾಗದಂತೆ, ನಮ್ಮ ಶರೀರದಲ್ಲೇ ಇರುವ ಮತ್ತೊಂದು AMP ಕ್ರಿಯಾ ನಿಯಂತ್ರಕ ರಸಾಯನಿಕವಸ್ತು ಪ್ರತಿಬಂಧಿಸುತ್ತದೆ. ಇದೇ ಫಾಸ್ಪೋಡಿ ಎಸ್ಟರೇಸ್.
✔ ಈಗ ನಮ್ಮ ಕಾಫಿಗೇ ಮರಳುವ, ನಮ್ಮ ಕಾಫಿಯಲ್ಲಿರುವ ಕೆಫೀನ್ ವಿಷವಸ್ತು ಈ ನಿಯಂತ್ರಕ ರಸಾಯನಿಕ ವಸ್ತುವಿಗೆ ಕ್ರಿಯೆಯನ್ನೇ ತಡೆಗಟ್ಟುವುದರಿಂದ ನಮ್ಮ ದೇಹದಲ್ಲಿ ಸಕ್ಕರೆ ಅನಿಯಂತ್ರಿತವಾಗಿ ಉತ್ಪಾದಿತವಾಗಿ, ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚುತ್ತದೆ. ಈ ಹೆಚ್ಚಿನ ಸಕ್ಕರೆಯಿಂದಲ್ಲೇ ನಮಗೆ ಕಾಫಿ ಕುಡಿದಾಗ ಚುರುಕುತನ,
ಕಾರಶೀಲತೆ ಉಂಟಾಗುವುದು . ಈ ರೀತಿ ಸಕ್ಕರೆ ಅಂಶವನ್ನು ರಕ್ತದಲ್ಲಿ ಹೆಚ್ಚು ಮಾಡುವ ಕಾಫಿಯಂತೂ ಸಿಹಿಮೂತ್ರ ರೋಗಿಗಳಿಗೆ ಹಿತವಲ್ಲ. ಇನ್ನೂ ಈ ಕಾಫಿಯ ಮತ್ತೊಂದು ಕ್ರಿಯೆಯನ್ನು ನೋಡಿ.
✔ ನಾವು ತಿಂದ ಪದಾರ್ಥಗಳಲ್ಲಿ ಕೊಬ್ಬಿನಂಶ ಇರುತ್ತದೆ. ಈ ಕೊಬ್ಬು ರಕ್ತವನ್ನು ಸೇರಿದಾಗ ಅದನ್ನು ಕೆಲವು ಬಗೆಯ ಕಿಣ್ವಎನ್ ಸೈಮ್ ಗಳು ತಮ್ಮಲ್ಲಿ ಅರಸಿಕೊಂಡು ಬಿಡುತ್ತವೆ. ಇದರಿಂದ ಕೊಬ್ಬು ಕೊಲೆಸ್ಟರಲ್ ನಮ್ಮ ಹೃದಯದ ಕರೋನರಿ ರಕ್ತನಾಳಗಳ ಒಳಗೆ ಗಾರೆಯಂತೆ ಬಳಿದುಕೊಂಡು ನಾಳಗಳ ಒಳ ವ್ಯಾಸವನ್ನು ಕಿರಿದು ಆಗಲ್ಪಡುವುದು ತಪ್ಪುತ್ತದೆ .
ಆದರೆ ನಮ್ಮ ಕಾಫಿಯಲ್ಲಿರುವ ಕೆಫೀನ್ ಅಂಶ ಕೆಲಮಟ್ಟಿಗೆ ಕೊಬ್ಬನ್ನು ಜೀರ್ಣಿಸಿಕೊಳ್ಳುವ ಎನ್‌ಸೈಮ್‌ಗಳನ್ನೇ ನಾಶಮಾಡಿಬಿಡುತ್ತದೆ. ಇದರಿಂದ ರಕ್ತದಲ್ಲಿ ಕೊಬ್ಬು ಜಾಸ್ತಿ ಆಗುತ್ತದೆ ಇದರಿಂದ ಹೃದಯದ ಕರೋನರಿ ರಕ್ತನಾಳಗಳಲ್ಲಿ ಕೊಬ್ಬು ಉಳಿದುಕೊಂಡು. ರಕ್ತ ಪ್ರವಹಿಸಲು ಅಡಚಣೆ ಉಂಟಾಗುತ್ತದೆ. ಆಗ ನಮ್ಮ ಹೃದಯಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಆಮ್ಲಜನಕವೇ ಸರಿಯಾಗಿ ಸಿಗುವುದಿಲ್ಲ. ಇದನ್ನು ಹೋಗಲಾಡಿಸಲು ಹೃದಯ ತನ್ನ ಬಡಿತವನ್ನು ತೀವ್ರಗೊಳಿಸುತ್ತದೆ. ಈ ಸಾಧಾರಣವಲ್ಲದ ಹೃದಯ ಕ್ರಿಯೆಯಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ನಮ್ಮ ಉಸಿರಾಟದ ವೇಗವೂ ಹೆಚ್ಚುತ್ತದೆ. ರಕ್ತದ ಒತ್ತಡವೂ ಹೆಚ್ಚುತ್ತದೆ. ಕೊನೆಗೆ ಹೃದಯ ರೋಗಕ್ಕೂ ಆಸ್ಪದ ಕೊಡುವಂತೆ ಮಾಡುತ್ತದೆ.
✔ ವೈದ್ಯಕೀಯ ಸಮೀಕ್ಷೆಗಳಿಂದ ಕಾಫಿ ಕುಡಿಯದವರಿಗಿಂತ, ಕುಡಿದವರಲ್ಲೇ ಎರಡು ಪಟ್ಟು ಹೆಚ್ಚು ಹೃದಯ ರೋಗಗಳು ಕಂಡು ಬಂದಿರುವುದು ಗೊತ್ತಾಗಿದೆ .
✔ ಇನ್ನು ಈ ಕಾಫಿ ನಮ್ಮ ಜಠರದಲ್ಲಿ ಅತಿಹೆಚ್ಚಾಗಿ ಜಠರಾಮ್ಲ -ಹೈಡೋಕ್ಲೋರಿಕ್ ಆಮ್ಲವನ್ನು ಹೆಚ್ಚಾಗಿಸಿ ಬಿಡುತ್ತದೆ, ಈ ಹೆಚ್ಚಿನ ಆಮ್ಲತೆಯಿಂದ ನಮ್ಮ ಜಠರದಲ್ಲಿ ಹುಣ್ಣುಗಳಾಗಬಹುದು ಇದರಿಂದ 'ಅಲ್ಸರ್' ಇರುವವರು ಕಾಫಿಯನ್ನು ಕುಡಿಯಲೇಬಾರದು ಈ ಕಾಫಿಯಲ್ಲಿರುವ ಕೆಫೀನ್ ಇಷ್ಟು ಮಾಡುವುದಲ್ಲದೆ. ನಮ್ಮ ದೇಹದ ಕ್ರೋಮೋಸೋಮ್ ವರ್ಣ ತಂತುಗಳನ್ನೇ ಅಸ್ತವ್ಯಸ್ತಗೊಳಿಸಿ ಬಿಡುತ್ತದೆ. ಇದರಿಂದ ಗರ್ಭಿಣಿ ಸ್ತ್ರೀಯರು ಅಂಗವಿಕಲ ಅಥವಾ ವಿರೂಪ ಹೊಂದಿದ ಮಕ್ಕಳನ್ನು ಹಡೆಯಬಹುದಾದ ಸಾಧ್ಯತೆ ಹೆಚ್ಚಿರುತ್ತದೆ. ಇದರ ನಿಜವಾದ ಅಂಕಿ ಅಂಶಗಳು ಇನ್ನು ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೂ, ಗರ್ಭಿಣಿಯರು ಕಾಫಿಯನ್ನು ಕುಡಿಯದಿರುವುದೇ ವಾಸಿ.
