ಸರ್ವಾಂತರ್ಯಾಮಿ ಆಗುತ್ತಿರುವ ದೂರ ಸಂಪರ್ಕ ತಂತ್ರ - ಉಪಗ್ರಹ

Admin
0

ಸರ್ವಾಂತರ್ಯಾಮಿ ಆಗುತ್ತಿರುವ ದೂರ ಸಂಪರ್ಕ ತಂತ್ರ - ಉಪಗ್ರಹ


    
 ★  ಹಿನ್ನೆಲೆ : 

         ನಾವೇ ಬೇಕಾದ ವಸ್ತುವನ್ನು ಆರಿಸಿ. ಆರಿಸಿ ಡಿಪಾರ್ಟ್‌ ಮೆಂಟಲ್ ಸ್ಪೋರ್ಸ್‌ನಿಂದ ಎತ್ತಿಕೊಂಡು ಬರುತ್ತೇವೆ. ಅಲ್ಲಿ ನಮ್ಮನ್ನು ಗಮನಿಸಲು ಯಾರೂ ಇರುವುದಿಲ್ಲ. ಚಿನ್ನಾಭರಣ ಇರುವ ಮಳಿಗೆಗೆ ಹೋಗಿ ಬೇಕಾದ ಸರವನ್ನೋ, ನೆಕ್‌ಲೆಸ್‌ನ್ನೋ ತರುತ್ತೇವೆ. ಅಲ್ಲಿ ಸಹ ಯಾರೂ ಇರುವುದಿಲ್ಲ. ಆದರೆ ಹಾಗೆಂದುಕೊಂಡು ಕದ್ದು ತರಲು ಪ್ರಯತ್ನಿಸಿದರೆ ಸಿಕ್ಕಿ ಹಾಕಿಕೊಳ್ಳುವುದು ಖಚಿತ. ಅಂಗಡಿಯಲ್ಲಿ ಹುದುಗಿಸಿಟ್ಟ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳವುದು ಕಷ್ಟ.

            ಇದೇ ರೀತಿ ನೀವು ಅತಿ ವೇಗದಲ್ಲಿ ಬೈಕ್ ಅಥವಾ ಕಾರ್ ಓಡಿಸಿಕೊಂಡು ಹೋಗಿ ಪೋಲೀಸರ ಕಣ್ಣು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ, ರಸ್ತೆಯ ಪಕ್ಕದಲ್ಲಿದ್ದ ರಾಡಾರ್ ನಿಮ್ಮ ವಾಹನವನ್ನು ಪರೀಕ್ಷಿಸುತ್ತಿರುತ್ತದೆ.

        ಭೂಮಿಯ ಮೇಲಿನ ಚಟುವಟಿಕೆಗಳನ್ನು ಗಗನದಲ್ಲಿದ್ದ ಉಪಗ್ರಹ ಗಮನಿಸುತ್ತಿರುತ್ತದೆ. ಹೀಗೆ ಇಂದಿನ ದಿನಗಳಲ್ಲಿ ಇಂತಹ ಪತ್ತೇದಾರಿ ಕೆಲಸಕ್ಕೆ ಅನೇಕ ತಂತ್ರಗಳು ಸಾಧನಗಳು ಬಳಕೆಯಲ್ಲಿವೆ. ಭೂಮಿಯ ಮೇಲಷ್ಟೇ ಅಲ್ಲ, ನೆಲದಾಳದಿಂದ, ಭೂಗರ್ಭದಿಂದ, ನೀರಿನಾಳದಲ್ಲೂ ಗಮನಿಸುವ, ನಿಗಾ ಇರಿಸಿ, ದಾಖಲಿಸುವ ಪತ್ತೇದಾರಿ ತಂತ್ರಜ್ಞಾನ ಇಂದು ತೀವ್ರಗತಿಯಲ್ಲಿ ಬೆಳೆದು ಬರುತ್ತಿದೆ. ಗಗನದಲ್ಲಿ ಗೂಢಚರ್ಯೆ ನಡೆಸುವ ಉಪಗ್ರಹಗಳು ಇದರಲ್ಲಿ ಪ್ರಮುಖವಾದುವು. ದೂರ ಸಂವೇದಿ ತಂತ್ರಜ್ಞಾನವನ್ನು ಬಳಸಿಕೊಂಡು ಸದಾಕಾಲ ನಿಗದಿತ ಪ್ರದೇಶಗಳ, ದೇಶಗಳ ಚಟುವಟಿಕೆಗಳ ಮೇಲೆ ಇವು ಕಣ್ಣಿಟ್ಟಿರುತ್ತವೆ. ಬೆಂಗಳೂರಿನಲ್ಲಿ ಕೆಲವರ್ಷಗಳ ಹಿಂದೆ ಸಂಭವಿಸಿದ್ದ ಸರ್ಕಸ್ ಕಂಪೆನಿ ದುರಂತ, ಭಾರತೀಯರಿಗಿಂತ ಮುಂಚಿತವಾಗಿ ಅಮೇರಿಕನ್ನರಿಗೆ ತಿಳಿಯಲು ಇದೇ ಕಾರಣ. ನಮ್ಮ ಶಸ್ತ್ರಾಸ್ತ್ರ ಸಂಗ್ರಹ, ತೈಲ ಸಂಗ್ರಹ, ಯುದ್ಧ ತರಬೇತಿ, ಸೈನಿಕ ಚಟುವಟಿಕೆಗಳು, ಕರಾವಳಿ ಪ್ರದೇಶದಲ್ಲಿನ ಕಾವಲು ಕಾರ್ಯದಿಂದ ಹಿಡಿದು ಕಾಶ್ಮೀರದ ಕಾರ್ಗಿಲ್ ಪ್ರದೇಶದ ಗಡಿ ನಿಯಂತ್ರಣ ರೇಖೆಯ ವರೆಗಿನ ರಕ್ಷಣಾ ಚಟುವಟಿಕೆ ವಿವರಗಳನ್ನೂ ಈಗ ವಿಳಂಬವಿಲ್ಲದೇ ತಿಳಿದುಕೊಳ್ಳಬಹುದು.


    ಉಪಗ್ರಹ ಸಂಪರ್ಕ ಜಾಲ ಇದಕ್ಕೆ ಸೂಕ್ತ ಅನುವು ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಅಮೇರಿಕಾ ಮತ್ತು ರಶಿಯಾ ಮುಂಚೂಣಿಯಲ್ಲಿದ್ದವು. ಆದರೆ ಈಗ ಚೀನಾ, ಜಪಾನ್, ಫ್ರಾನ್ಸ್, ಐರೋಪ್ಯ ದೇಶಗಳ ಸಂಘಟನೆಗಳೂ ತಮ್ಮದೇ ಆದ ಬೇಹುಗತಿ ಸಾಧಿಸದೆ ಒಂದು ಮೀಟರ್ ಗಾತ್ರದ ಸಹ ಆದ ಬೇಹುಗಾರಿಕೆ ಉಪಗ್ರಹ ಹೊಂದಿವೆ. ಭಾರತವೂ ಇತ್ತೀಚೆಗೆ ఈ నిట్టి ಪರೀಕ್ಷಿಸಲು ಸಾಧ್ಯವಾಗುವ ಕ್ಯಾಮರಾಗಳನ್ನು ಇಂತಹ ಉಪಗ್ರಹಗಳಲ್ಲಿ ಅಳವಡಿಸಲಾಗಿದೆ.

★ ಉಪಗ್ರಹ ಉಪಯೋಗ :

ಈ ಉಪಗ್ರಹಗಳಲ್ಲಿನ ರಾಡಾರ್ ವ್ಯವಸ್ಥೆ ಆಕಾಶದಲ್ಲಿ ಮಂಜು ಅಥವಾ ಮೋಡ ಮುಸುಕಿದ ವಾತಾವರಣವಿದ್ದರೂ ಅದನ್ನು ಬೇಧಿಸಿ. ತನ್ನ  ಕಾರ್ಯವನ್ನು  ನಿರ್ವಹಿಸಬಲ್ಲದು. ಇಷ್ಟೇ ಅಲ್ಲ ಕೆಲಮಟ್ಟಿಗೆ ಭೂಮಿಯಲ್ಲಿ ಹುದುಗಿಸಿಟ್ಟ ಶಸ್ತ್ರಾಸ್ತ್ರಗಳನ್ನೂ ಹುಡುಕಬಲ್ಲ ಹದ್ದಿನ ಕಣ್ಣನ್ನು ಹೊಂದಿದೆ. ವಿಶೇಷ ಬಗೆಯ ದ್ಯುತಿ ಶೋಧಕ ಸಾಧನಗಳನ್ನು ಇವು ಹೊಂದಿರುತ್ತವೆ. ನೆಲದಿಂದ ನೆಲಕ್ಕೆ, ನೆಲದಿಂದ ಗಗನಕ್ಕೆ, ಗಗನದಲ್ಲೇ ಚಿಮ್ಮುವ ರಾಕೆಟ್‌ಗಳೂ ಇಂತಹ ಸಾಧನಗಳನ್ನು ಹೊಂದಿದ್ದು ಎಂತಹ ಪರಿಸರದಲ್ಲಿಯೂ ಕರಾರುವಾಕ್ಕಾಗಿ ತಮ್ಮ ಕಾರ್ಯ ಪೂರೈಸಬಲ್ಲವು. ಜಲಾಂತರ್ಗಾಮಿ ಬಳಸುವ ಟಾರ್ಪೆಡೊ ಸಹ ಇಂತಹ ಸಾಧನಗಳನ್ನು ಹೊಂದಿರುತ್ತದೆ.


✔ ವೈರಿಗಳನ್ನು ಗಡಿ ಪ್ರದೇಶಗಳಲ್ಲಿ ಗಮನಿಸುತ್ತಿರಲು, ಚಾಲಕರಹಿತ ಅಂತರಿಕ್ಷ ವಾಹನಗಳು ಇಂದು ವ್ಯಾಪಕವಾಗಿ ಬಳಕೆಯಲ್ಲಿವೆ. ಇವು 5 ಕಿ.ಮೀ. ಎತ್ತರದವರೆಗೂ ಆಗಸದಲ್ಲಿ ಸಂಚರಿಸುತ್ತ ವೈರಿ ಪ್ರದೇಶದಲ್ಲಿನ ವಿದ್ಯಮಾನಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು, ನಮ್ಮ ಭೂಕೇಂದ್ರಗಳಿಗೆ ರವಾನಿಸುತ್ತಿರುತ್ತವೆ. ಸಣ್ಣ ಗಾತ್ರದ ಇಂತಹ ಸಾಧನಗಳು ಕೀಟ ಅಥವಾ ಪಕ್ಷಿಗಳಂತೆ ವೈರಿಗಳ ನೆಲದ ಮೇಲೆ ಹಾರಾಡುತ್ತ ಯಾರಿಗೂ ಸಂದೇಹ ಬರದ ರೀತಿಯಲ್ಲಿ ಮಾಹಿತಿಯನ್ನು ರವಾನಿಸಬಲ್ಲವು. ಇವುಗಳನ್ನು ದೂರ ನಿಯಂತ್ರಣ ವ್ಯವಸ್ಥೆಗೂ ರವಾಜ್ಞಾನವನ್ನು ಅಮೆರಿಕೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಜ್ಞರು ಅಭಿವೃದ್ಧಿಪಡಿಸುತ್ತಿದ್ದಾರೆ. ಚಿಪ್‌ಗಳನ್ನು ಹೊಂದಿರುವ ಯಾವುದೇ ಸಾಧನದೊಂದಿಗೆ ಇದರಿಂದ ಸಂಪರ್ಕ ಹೊಂದಲು ಸಾಧ್ಯ. 
ಇತ್ತೀಚೆಗೆ ವಾಹನಗಳಿಗೆ ಮಾರ್ಗದರ್ಶನಕ್ಕಾಗಿ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ವ್ಯವಸ್ಥೆ ಹೆಚ್ಚು ವ್ಯಾಪಕವಾಗಿ ಬಳಕೆಗೆ ಬರುತ್ತಿದೆ. ಅಂತರಿಕ್ಷದಲ್ಲಿನ ಉಪಗ್ರಹ ಸಂಪರ್ಕ ಜಾಲ ನಿಮಗೆ ಪ್ರಯಾಣಕ್ಕೆ ಮಾರ್ಗದರ್ಶನ ಮಾಡುತ್ತದೆ.

✔ ಈ ದೂರ ಸಂಪರ್ಕ ಜಾಲ ಎಷ್ಟು ಪರಿಣಾಮಕಾರಿಯೆಂದರೆ ಭೂಮಿಯ ಮೇಲಿನ ಯಾವುದೇ ನಿಗದಿತ ಪ್ರದೇಶದ ಅಥವಾ ಕಟ್ಟಡದ ಕರಾರುವಾಕ್ಕಾದ ನೆಲೆ ಮತ್ತು ನಕ್ಷೆಯನ್ನೂ ಸಹ ಇದರಿಂದ ಪಡೆಯಬಹುದು. ಇದಕ್ಕೆ ವಿರುದ್ಧವಾಗಿ, ಅಂತರಿಕ್ಷದಲ್ಲಿ ಸಂಪರ್ಕ ಕಲ್ಪಿಸುವ ಮಾಹಿತಿ ಜಾಲವನ್ನೇ ಅಸ್ತವ್ಯಸ್ತಗೊಳಿಸುವ ಅಥವಾ ನುಂಗಿಹಾಕುವ ಸಾಧನಗಳೂ ಇಂದು ಬಳಕೆಯಲ್ಲಿವೆ. ಟೆಲಿಫೋನ್, ಇಮೇಲ್, ಫ್ಯಾಕ್ಸ್ ಅಥವಾ ಯಾವುದೇ ಇಲೆಕ್ಟ್ರಾನಿಕ್ ಸಂಪರ್ಕವನ್ನು ಇವು ಕೆಡಿಸಬಲ್ಲವು. ಇವು ತಮ್ಮ ಸಂವೇದನಾ ಜಾಲದ ಮೂಲಕ ತಮಗೆ ದೊರೆತ ಮಾಹಿತಿಯನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸಿ, ಅಲ್ಲಿಂದ ಬರುವ ಆಜ್ಞೆಯಂತೆ ತಮ್ಮ ಕಾರ್ಯ ನಿರ್ವಹಿಸುವ ಅಂತರಿಕ್ಷ ಉಗ್ರಗಾಮಿಗಳಂತೆ. ಸಂಪರ್ಕ ಜಾಲವನ್ನು ಕೆಡಿಸಲು ಇವು ಲೇಸರ್‌ಕಿರಣಗಳನ್ನು ಹೆಚ್ಚಾಗಿ ಬಳಸುತ್ತವೆ.

✔ ಮಾನವರಹಿತ ಹೆಲಿಕಾಪ್ಟರ್‌ಗಳನ್ನೂ ಬಳಸುವ ಸಂದರ್ಭಗಳು ಈಗ ತೀರ ಸಾಮಾನ್ಯ. ಇವು ಭೂಮಿಯಿಂದ ಸುಮಾರು 150 ಮೀಟರ್ ಎತ್ತರದಲ್ಲಿ ಹಾರುತ್ತ ತಮ್ಮಲ್ಲಿರುವ ಕ್ಯಾಮರಾ ಮೂಲಕ ಸುಮಾರು 13 ಕಿ.ಮೀ. ದೂರದವರೆಗಿನ ಪ್ರದೇಶಗಳ ವಿವರಗಳನ್ನು ಸೆರೆಹಿಡಿದು ರವಾನಿಸುತ್ತವೆ. ಭೂಕಂಪ, ನೆರೆಹಾವಳಿಯಂತಹ ನೈಸರ್ಗಿಕ ವಿಕೋಪಗಳು ಉಂಟಾದಾಗ ಇಂತಹ ಹೆಲಿಕಾಪ್ಟರ್‌ಗಳ ನೆರವು ಪಡೆಯಬಹುದಾಗಿದೆ. ಇದೇ ರೀತಿ ಹಿಂಸಾಚಾರ, ಗಲಭೆ, ಯುದ್ಧ, ಅಪಘಾತ, ಅಗ್ನಿದುರಂತಗಳಂತಹ ಕಠಿಣ ಸಂದರ್ಭಗಳಲ್ಲೂ ಇವುಗಳ ಬಳಕೆ ಅನುಕೂಲಕರ.

✔ ಅಂತರಿಕ್ಷದಲ್ಲಿ ಮಾನವನಿರುವ ನಿಲ್ದಾಣವನ್ನು ರಚಿಸಿ, ಗೂಢಚರ್ಯೆಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶವನ್ನು ಚೀನಾ ಹೊಂದಿದೆ. ಅಲ್ಲದೆ

✔ ತನ್ನ ವಿರೋಧಿ ಉಪಗ್ರಹಗಳನ್ನು ಅಂತರಿಕ್ಷದಲ್ಲೇ ಹೊಡೆದುರುಳಿಸಬಲ್ಲ ತಂತ್ರವನ್ನೂ ಅದು ಅಭಿವೃದ್ಧಿಪಡಿಸುತ್ತಿದೆ. ಇದಲ್ಲದೆ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಲು ಅನುವಾಗಬಲ್ಲ ಉಪಗ್ರಹಗಳನ್ನೂ ಜರ್ಮನಿಯಂತಹ ಕೆಲ ಯುರೋಪ್ ದೇಶಗಳು ಅಭಿವೃದ್ಧಿಪಡಿಸುತ್ತಿರುವುದು ವರದಿಯಾಗಿದೆ.

✔ ಅಂತರಿಕ್ಷದಲ್ಲಿ ರವಾನೆಯಾಗುವ ಸಂಪರ್ಕಜಾಲವನ್ನೇ ಸಮಗ್ರವಾಗಿ ಶೋಧಿಸಬಲ್ಲ ಬೇಹುಗಾರಿಕೆ ತಂತ್ರವನ್ನು ಅಮೇರಿಕಾ ಈಗಾಗಲೇ ಅಭಿವೃದ್ಧಿಪಡಿಸಿದೆ. ವಿಶ್ವದಲ್ಲಿ ಮೂಲೆ ಮೂಲೆಗೂ ರವಾನೆಯಾಗುತ್ತಿರುವ ದೂರವಾಣಿ ಕರೆಗಳು, ಇಮೇಲ್, ಫ್ಯಾಕ್ಸ್, ಅಷ್ಟೇ ಏಕೆ ಮೊಬೈಲ್ ಫೋನ್ ಕರೆಗಳು, ಎಸ್‌ಎಂಎಸ್ ಮುಂತಾದುವನ್ನು ಈ ಮೈಕ್ರೋವೇವ್ ಗ್ರಾಹಕ ವ್ಯವಸ್ಥೆ ಗ್ರಹಿಸಿ ದಾಖಲು ಮಾಡಬಲ್ಲದು. ಈ ಬೇಹುಗಾರಿಕೆ ಜಾಲದ ಕೇಂದ್ರಗಳು ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ಗಳಲ್ಲಿಗೆ ಯಾವುದೇ ಸಮಯದಲ್ಲಿ ಲಕ್ಷಗಟ್ಟಲೆ ಕರೆಗಳನ್ನು ದಾಖಲೆ ಮಾಡಿ, ಇವು ಉಗ್ರಗಾಮಿಗಳ ಚಟುವಟಿಕೆಗೆ ಸೇರಿದ ಕರೆಗಳೆ ಎನ್ನುವುದನ್ನು ಇದರಿಂದ ಪರೀಕ್ಷಿಸಬಹುದು.

✔ ಉಗ್ರಗಾಮಿಗಳ ಚಟುವಟಿಕೆಗಳ ವಿರುದ್ಧ ಸದಾ ಜಾಗ್ರತವಾಗಿರಲು ಈ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ಇದಕ್ಕಾಗಿ ಅಂತರಿಕ್ಷದಲ್ಲಿ ಅತ್ಯಂತ ಸಂವೇದನಾಶೀಲ ಉಪಗ್ರಹ ವ್ಯವಸ್ಥೆಯನ್ನು ಅಮೆರಿಕಾ ಸ್ಥಾಪಿಸಿದೆ. ಇವು ಆಕಾಶದಲ್ಲಿನ ತರಂಗಗಳನ್ನು ಗ್ರಹಿಸಿ ಮುದ್ರಿಸುತ್ತವೆ. ವಿಶೇಷರೀತಿಯ ಕಂಪ್ಯೂಟರ್‌ಗಳ ಸಹಾಯದಿಂದ ಇವುಗಳನ್ನು ವಿಶ್ಲೇಷಿಸಲಾಗುತ್ತದೆ. ಇವು ಸಂದೇಶದ ಅರ್ಥವನ್ನಷ್ಟೇ ಅಲ್ಲದೆ ಅವುಗಳ ಉಗಮಸ್ಥಳ, ಅದರ ಮೂಲ ಸಂದೇಶದ ಉದ್ದೇಶ ಮುಂತಾದುವನ್ನೂ ಗ್ರಹಿಸುತ್ತವೆ. ಇಷ್ಟಲ್ಲದೆ ಇವುಗಳಲ್ಲಿನ ಧ್ವನಿಗಳನ್ನೂ ಯಾರಿಗೆ ಸೇರಿದ್ದೆನ್ನುವುದನ್ನು ಕಂಡುಹಿಡಿಯಬಹುದಾಗಿದೆ. ವಿಶ್ವದಲ್ಲೇ ಇಂತಹ ಅದ್ಭುತ ವ್ಯವಸ್ಥಿತ ಬೇಹುಗಾರಿಕೆ ಜಾಲ ಅದೂ ಅಂತರಿಕ್ಷದಲ್ಲಿ ಇದೇ ಪ್ರಥಮ.

✔ ತಾಂತ್ರಿಕವಾಗಿ ಬೇಹುಗಾರಿಕೆ ಸಾಧನಗಳಿಗೂ, ಇತರ ಸಾಧನಗಳಿಗೂ ಅಂತಹ ವ್ಯತ್ಯಾಸಗಳಿಲ್ಲ. ಆದರೆ ಅವುಗಳ ಬಳಕೆಗೆ ತಕ್ಕಂತೆ ಕೆಲವು ಸೂಕ್ತ ಮಾರ್ಪಾಟು ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ಬೇಹುಗಾರಿಕೆ ಕಾರ್ಯದಲ್ಲಿ ದತ್ತಾಂಶಗಳ ಅಂದರೆ ಸಂಗ್ರಹಿಸಿದ ಮಾಹಿತಿಗಳ ವಿಶ್ಲೇಷಣೆ ಹೆಚ್ಚು ಮುಖ್ಯವಾಗುತ್ತದೆ. ಸಾವಿರಾರು ಅಥವಾ ಲಕ್ಷಾಂತರ ಮಾಹಿತಿ ತುಣುಕುಗಳಲ್ಲಿ ನಮಗೆ ಬೇಕಾದದ್ದನ್ನು ಆರಿಸಿಕೊಳ್ಳುವುದು ಮತ್ತು ಅದರ ಬಗೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವುದು ಅಗತ್ಯವಾಗುತ್ತದೆ. ಉದಾಹರಣೆಗೆ ಅತ್ಯಂತ ಸುರಕ್ಷಿತ ಸ್ಥಳವೊಂದರ ಛಾಯಾಚಿತ್ರವನ್ನು ಬಹಳ ಕಷ್ಟದಿಂದ ಪತ್ತೇದಾರನೊಬ್ಬ ಸಂಗ್ರಹಿಸಿರುತ್ತಾನೆ. ಆದರೆ ಅದರ ಬಗ್ಗೆ ಖಚಿತಪಡಿಸಿಕೊಳ್ಳಬೇಕಾಗಿದೆ. ಅಂತಹ ಸಂದರ್ಭದಲ್ಲಿ ಮಾನವರಹಿತ ವೋಮ ವಾಹನದಿಂದಲೋ, ಬೇಹುಗಾರಿಕೆ ಉಪಗ್ರಹದಿಂದಲೋ ದೊರಕಿಸಿದ ಛಾಯಾ ಚಿತ್ರಗಳೊಂದಿಗೆ ಆತ ತನ್ನ ಛಾಯಾಚಿತ್ರವನ್ನು ಹೋಲಿಸಿಕೊಂಡು ಪರೀಕ್ಷಿಸಬಹುದು. ಒಂದೇ ವಸ್ತು ಅಥವಾ ಸ್ಥಳದ ಬಗ್ಗೆ ಒಂದೇ ಮೂಲಕ್ಕಿಂತ ಬೇರೆ ಬೇರೆ ಮೂಲಗಳಿಂದ ಪಡೆದುಕೊಂಡ ಮಾಹಿತಿಯಿಂದ ಆ ವಸ್ತು ಅಥವಾ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಒಂದು ನಿರ್ಧಾರಕ್ಕೆ ಬರಲು ಅನುವಾಗುತ್ತದೆ. ಹೀಗೆ ದೂರ ಸಂಪರ್ಕ ತಂತ್ರ, ಭೂ-ವೋಮಗಳನ್ನು ಕಿರಿದಾಗಿಸುತ್ತಿದೆ. ಸರ್ವಾಂತರ್ಯಾಮಿ ಆಗುತ್ತಿದೆ ಎನ್ನಬಹುದು.


***

Post a Comment

0Comments
Post a Comment (0)