ವಸ್ತುವಿನ ನಾಲ್ಕನೇ ಸ್ಥಿತಿ ಪ್ಲಾಸ್ಮಾ

Admin
0

 ವಸ್ತುವಿನ ನಾಲ್ಕನೇ ಸ್ಥಿತಿ ಪ್ಲಾಸ್ಮಾ



👉 ಆರಂಭಿಕ ಮಾಹಿತಿ :  

        ಯಾವುದೇ ವಸ್ತು ಘನ, ದ್ರವ ಅಥವಾ ಅನಿಲ ಈ ಮೂರರ ಪೈಕಿ ಒಂದು ಸ್ಥಿತಿಯಲ್ಲಿರುತ್ತದೆ. ಆದರೆ ವಸ್ತು ಇನ್ನೂ ಒಂದು ಸ್ಥಿತಿಯಲ್ಲಿರ ಬಹುದು. ಇದಕ್ಕೆ ಪ್ಲಾಸ್ಮಾ ಎಂದು ಹೆಸರು. ಇದಕ್ಕೆ ವಸ್ತುವಿನ ನಾಲ್ಕನೇ ಸ್ಥಿತಿ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ವಸ್ತುಗಳು ಅನಿಲ ಸ್ಥಿತಿಯನ್ನು ಮೀರಿ ಧನಾತ್ಮಕ ಮತ್ತು ಋಣಾತ್ಮಕ ವಿದ್ಯುತ್ ಅಂಶಗಳನ್ನು ಹೊಂದಿದ ಅಯಾನ್ ರೂಪದಲ್ಲಿರುತ್ತದೆ. ಆದರೆ ಈ ಎರಡೂ ವಿದ್ಯುದಂಶ ಹೊಂದಿದ ಅಯಾನ್‌ಗಳು ಸಮಪ್ರಮಾಣದಲ್ಲಿರುವುದರಿಂದ ಅದು ತಟಸ್ಥವಾಗಿರುತ್ತದೆ. ಇವುಗಳೊಂದಿಗೆ ವಿದ್ಯುತ್ ತಟಸ್ಥವಾಗಿರುವ ಇನ್ನೂ ಕೆಲವು ಕಣಗಳನ್ನೂ ಪ್ಲಾಸ್ಮಾ ಹೊಂದಿರಬಲ್ಲದು.

        ಪ್ಲಾಸ್ಮಾ ಒಂದು ಗ್ರೀಕ್ ಶಬ್ದ. ಇದರ ಅರ್ಥ ಒಂದು ಕರಗಿದ ವಸ್ತು ಎಂದು. ಕೊಳವೆಯೊಂದರಲ್ಲಿ ಸೂಕ್ತ ಅನಿಲವನ್ನು ತುಂಬಿ ವಿದ್ಯುತ್ ಹಾಯಿಸಿದಾಗ ಅನಿಲ ವಿದ್ಯುತ್ ಪೂರಿತಗೊಂಡು ಅಯಾನ್‌ಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಕೆಲವೊಮ್ಮೆ ಪ್ಲಾಸ್ಮಾ ಎಂದರೆ ಅಧಿಕ ಉಷ್ಣತೆಯಲ್ಲಿ ಅಯನೀಕರಣ ಹೊಂದಿದ ಆದರೆ ತಟಸ್ಥವಾಗಿರುವ ಅನಿಲ ಎಂತಲೂ ಹೇಳಬಹುದು. ಇಲ್ಲಿ ಒಂದು ವಿಶೇಷವೇನೆಂದರೆ, ಪ್ಲಾಸ್ಮಾ ಸ್ಥಿತಿಯಲ್ಲಿರುವ ವಸ್ತುವಿನ ಸ್ವಭಾವ ಮತ್ತು ಗುಣಧರ್ಮ ಅದರ ಘನ, ದ್ರವ ಅಥವಾ ಅನಿಲ ರೂಪಕ್ಕಿಂತ ಬೇರೆಯೇ ಆಗಿರಲು ಸಾಧ್ಯ.

    ಎಲ್ಲ ತಂತ್ರಜ್ಞಾನಗಳಂತೆ ಪ್ಲಾಸ್ಮಾ ತಂತ್ರಜ್ಞಾನ ಕೂಡ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಅನ್ವಯವೂ ವ್ಯಾಪಕವಾಗಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ ಪರಮಾಣು ಸಂಯೋಜನೆ. ಪರಮಾಣು ವಿದಳನ ಕ್ರಿಯೆಯಂತೆ ಪರಮಾಣು ಸಂಯೋಜನ ಕ್ರಿಯೆಯಲ್ಲೂ ಅಪಾರ ಪ್ರಮಾಣದ ಚೈತನ್ಯ ಬಿಡುಗಡೆಯಾಗುತ್ತದೆ. ಇದನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬಹುದು. ಉಷ್ಣಶಕ್ತಿಯನ್ನು ನೇರವಾಗಿ ವಿದ್ಯುಚ್ಛಕ್ತಿಯ ರೂಪದಲ್ಲಿ ಪರಿವರ್ತಿಸಲು ಸಾಧ್ಯವಾಗಿಸಬಲ್ಲ ಈ ತಂತ್ರಜ್ಞಾನ ಅತ್ಯಂತ ಮಹತ್ವದ್ದೆನಿಸಿದೆ. ಜಾಗತಿಕ ಮಟ್ಟದಲ್ಲಿ ಇದರ ಬಗೆಗೆ ಸಂಶೋಧನೆ ಮುಂದುವರಿದಿದ್ದು ವಿಶೇಷವಾಗಿ ಅಣುಶಕ್ತಿ ಬಳಕೆಯ ರಾಷ್ಟ್ರಗಳಲ್ಲಿ ಇದು ಹೆಚ್ಚಾಗಿದೆ.

        ಇದರ ಇನ್ನೊಂದು ಮಹತ್ವದ ಅನ್ವಯ, ತ್ಯಾಜ್ಯ ವಸ್ತುಗಳ ಸಂಸ್ಕರಣೆಯಲ್ಲಿ. ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ, ಒಂದು ಭಾರಿ ಸಮಸ್ಯೆಯಾಗಿ ಪರಿಣಮಿಸುತ್ತದೆ. ಪ್ಲಾಸ್ಮಾ ತಂತ್ರಜ್ಞಾನದ ಬಳಕೆ ಇದಕ್ಕೆ ಪರಿಹಾರ ಕಲ್ಪಿಸಬಲ್ಲದು.

        ಘನ ತ್ಯಾಜ್ಯದಲ್ಲಿ ಅನೇಕ ಬಗೆಯ ವಸ್ತುಗಳಿರುತ್ತವೆ. ಅವುಗಳನ್ನು ಸಂಸ್ಕರಿಸಲು ಬೇರೆ ಬೇರೆ ವಸ್ತುವಿಗೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಅಷ್ಟಾದರೂ ಸಂಸ್ಕರಣೆಯ ಸಂದರ್ಭದಲ್ಲಿ ಮಾಲಿನ್ಯಕಾರಕ ಅನಿಲಗಳು ಬಿಡುಗಡೆ ಆಗುವುದನ್ನು ತಪ್ಪಿಸುವುದು ಕಷ್ಟ. ಅಷ್ಟಲ್ಲದೆ ಈ ವಿಧಾನಗಳೂ ನಿಧಾನ ಮತ್ತು ಅಸಮರ್ಪಕ. ಪ್ಲಾಸ್ಮಾ ತಂತ್ರಜ್ಞಾನದ ಬಳಕೆ ಈ ಎಲ್ಲ ಅನಾನುಕೂಲಗಳಿಗೆ ಉತ್ತರವಾಗಬಲ್ಲದೆಂಬುದು ತಜ್ಞರ ನಂಬಿಕೆ.

        ಕೈಗಾರಿಕೆಗಳಲ್ಲಿ ಪ್ಲಾಸ್ಮಾ ತಂತ್ರಜ್ಞಾನದ ಬಳಕೆಗೆ ಅತ್ಯುತ್ತಮ ಅವಕಾಶಗಳಿವೆ. ಮುಖ್ಯವಾಗಿ ಕೈಗಾರಿಕೆಗಳಿಗೆ ಅಗತ್ಯವಾದ ವಿದ್ಯುಚ್ಛಕ್ತಿಯ ಪೂರೈಕೆಗೆ ಇದು ಅನುಕೂಲಕರ. ವಿವಿಧ ವಸ್ತುಗಳ ಸಂಸ್ಕರಣೆಗೂ ಅತ್ಯುಪಯುಕ್ತ. ವಿಶೇಷವಾಗಿ ವಿವಿಧ ಬಗೆಯ ವಸ್ತುಗಳನ್ನು ಕರಗಿಸಲು ಈ ತಂತ್ರಜ್ಞಾನ ನೆರವಾಗಬಲ್ಲದು. ಕೈಗಾರಿಕಾ ವಿಧಾನಗಳಲ್ಲಿ ಪ್ಲಾಸ್ಮಾ ತಂತ್ರಜ್ಞಾನದ ಅನ್ವಯದಿಂದ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ತಂತ್ರಜ್ಞರು ಪ್ರಯತ್ನಿಸುತ್ತಿದ್ದಾರೆ. ಕೈಗಾರಿಕಾ ಲೇಸರ್ ಫ್ಲ್ಯಾಶ್ ಲ್ಯಾಂಪ್, ರಿಲೇ ಸಿಸ್ಟಂ ಲೋಹಗಾರಿಕೆ ಮತ್ತು ರಿಯಾಕ್ಟರ್ ಸ್ಥಾವರಗಳಲ್ಲಿ ಇದು ಬಳಕೆಯಲ್ಲಿದೆ. ವಸ್ತುಗಳ ಮೇಲೆ ಲೇಪನಕ್ಕೆ, ಸಿಂಪಡಣೆಗೆ, ತೆಳುವಾದ ಪೊರೆಯ ಪ್ರಕ್ಷೇಪಕ್ಕೆ, ವೇಗವರ್ಧಕ ಕ್ರಿಯೆಗೆ, ಪ್ಲಾಸ್ಮಾ ತಂತ್ರಜ್ಞಾನ ಬಳಸಲಾಗುತ್ತಿದೆ. ಇದಕ್ಕೆ ಕೈಗಾರಿಕಾ ಪ್ಲಾಸ್ಮಾ ಎನ್ನುತ್ತಾರೆ. ಇದಲ್ಲದೆ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲೂ, ಪ್ಲಾಸ್ಮಾ ತಂತ್ರಜ್ಞಾನ ಬಳಕೆಯಲ್ಲಿದೆ.

        ವೈದ್ಯಕೀಯ ಕ್ಷೇತ್ರದಲ್ಲೂ ಪ್ಲಾಸ್ಕಾ ಲೇಸರ್ ತಂತ್ರದ ಬಳಕೆಗೆ ಉತ್ತಮ ಅವಕಾಶವಿದೆ. ಕಣ್ಣಿನ ಪೊರೆ ತೆಗೆಯಲು ಪ್ಲಾಸ್ಮಾ ಲೇಸರ್ ಬಳಕೆ ಹೆಚ್ಚು ಅನುಕೂಲಕರವೆನಿಸಿದೆ. ಇನ್ನೂ ಅನೇಕ ಬಗೆಯ ಶಸ್ತ್ರ ಚಿಕಿತ್ಸೆಗಳಲ್ಲಿ, ಎಕ್ಸ್‌ರೇ ಉಪಕರಣ ಮುಂತಾದ ಸಾಧನಗಳಲ್ಲಿ ಇದರ ಬಳಕೆ ಹೆಚ್ಚಿನ ದಕ್ಷತೆ ತರಬಲ್ಲದು.

    

       ಪ್ಲಾಸ್ಕಾ ತಂತ್ರಜ್ಞಾನದ ಒಂದು ಮಹತ್ವದ ಅನುಕೂಲವೆಂದರೆ ಇದು ಮಾಲಿನ್ಯರಹಿತ ಎಂಬುದು. ಉಷ್ಣವಿದ್ಯುತ್ ಸ್ಥಾವರದಂತೆ ಹಾರುಬೂದಿ (ಫೈಆಶ್) ಯಂತಹ ಮಲಿನಕಾರಕ ವಸ್ತು ವಾತಾವರಣದಲ್ಲಿ ಬಿಡುಗಡೆ ಆಗುವುದಿಲ್ಲ. ಅಥವಾ ಜಲವಿದ್ಯುತ್ ಆಗರಗಳಂತೆ ಜಲಪಾತವನ್ನಾಗಲಿ, ನೀರಿನ ಹರವನ್ನಾಗಲಿ ಅರಸಿಕೊಂಡು ಅಲೆಯಬೇಕಾಗಿಲ್ಲ. ಒಡ್ಡು, ಜಲಾಶಯ ನಿರ್ಮಾಣ, ಮುಳುಗಡೆ, ಪರಿಹಾರ ಕಾರ್ಯಗಳಂತಹ ಜಂಜಾಟವಿಲ್ಲ. ಸೌರವಿದ್ಯುತ್‌ನಂತೆ ಸೂರ್ಯನ ಬೆಳಕನ್ನಾಗಲಿ, ಗಾಳಿಯಂತ್ರದಂತೆ ಬೀಸುವ ಗಾಳಿಯನ್ನಾಗಲಿ ಅವಲಂಬಿಸಿಲ್ಲ. ಬೇಕಾದ ಸ್ಥಳದಲ್ಲಿ ಪ್ರಯೋಗಶಾಲೆಯ ಪರಿಸರದಲ್ಲೂ ಇದನ್ನು ಅಳವಡಿಸಬಹುದು.

        ಪ್ಲಾಸ್ಮಾವನ್ನು ಒಂದು ಮಾಧ್ಯಮದಂತೆ ಬಳಸುವ ಮೂಲಕ ಅನೇಕ ಅನುಕೂಲಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಕೆಲವೊಂದು ಘನವಸ್ತುಗಳಲ್ಲಿ ಒಂದು ನಿರ್ದಿಷ್ಟ ಪ್ರಕಾರದ ವಿದ್ಯುತ್ ಕಣಗಳನ್ನು ಸ್ಥಿರವಾಗಿಟ್ಟು ಇನ್ನೊಂದು ರೀತಿಯ ವಿದ್ಯುತ್ ಕಣಗಳನ್ನು ಚಲನೆಗೆ ಒಳಪಡಿಸುವ ಮೂಲಕ, ವಿದ್ಯುತ್ಕಾಂತೀಯ ಅಲೆಗಳನ್ನು ವಸ್ತುವಿನಲ್ಲಿ ಪ್ರಚೋದಿಸಬಹುದು. ಈ ಚೈತನ್ಯಕ್ಕೆ ಪ್ಲಾಸ್ಕೊನ್ಸ್ ಎಂದು ಹೆಸರು. ನ್ಯಾನೊ ವಸ್ತುಗಳಂತಹ ಸೂಕ್ಷ್ಮ ಪದಾರ್ಥಗಳಲ್ಲಿ ಇಂತಹ ಚೈತನ್ಯವನ್ನುಂಟುಮಾಡುವ ಮೂಲಕ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬೆಳವಣಿಗೆ ಸಾಧಿಸಬಹುದಾಗಿದೆ ಇದಕ್ಕೆ ಪ್ಲಾಸ್ಕೊನಿಕ್ಸ್ ಎಂದು ಹೆಸರಿಸಲಾಗಿದ್ದು, ಈ ಕ್ಷೇತ್ರದಲ್ಲಿ ಸಂಶೋಧನೆ ಮಹತ್ವದ ಹಂತ ತಲುಪಿದೆ.

    ಗಾಜಿನಲ್ಲಿ ಬೆಳಕಿನ ಅಲೆಗಳು ವರ್ತಿಸುವ ರೀತಿಯಲ್ಲೇ ಪ್ಲಾಸ್ಮನ್ ಅಲೆಗಳು ಲೋಹದಲ್ಲಿ ಪ್ರವಹಿಸಬಲ್ಲವು. ಒಂದೊಂದು ಅಲೆಯಲ್ಲೂ ಮಾಹಿತಿಯ ತುಣುಕನ್ನು ಸಾಗಿಸಲು ಸಾಧ್ಯವಾಗಿಸುವ ನಿಟ್ಟಿನಲ್ಲಿ ಸಂಶೋಧಕರು ಪ್ರಯತ್ನ ಮುಂದುವರಿಸಿದ್ದು, ಬಹುಮಟ್ಟಿಗೆ ಸಫಲರಾಗಿದ್ದಾರೆ. ಬೆಳಕಿನ ವೇಗದಲ್ಲೇ ಈ ಮಾಹಿತಿ ಚಲಿಸಬಲ್ಲದು. ಇದರ ತರಂಗಮಾನವೂ ಬೆಳಕಿನ ಅಲೆಯ ತರಂಗಮಾನದಷ್ಟೇ ಇರಬಲ್ಲದು. ಇಲೆಕ್ಟ್ರಾನಿಕ್ ಮೈಕ್ರೋಪ್ರೊಸೆಸರ್‌ಗಿಂತ ಇದರ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಫೈಬರ್ ಆಪ್ಟಿಕ್ಸ್‌ಗಿಂತಲೂ ಇದು ಹೆಚ್ಚಾಗಿರುತ್ತದೆ. ಆದರೆ ಇದಕ್ಕೆ ಬಳಸುವ ವಾಹಕಗಳು ಅಂದರೆ ತಂತಿಗಳು/ ಕೇಬಲ್‌ಗಳು ದಪ್ಪವಾಗಿರಬೇಕಾಗುತ್ತದೆ. ತೆಳ್ಳನೆಯ ವಾಹಕದಲ್ಲಿ ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ರವಾನಿಸುವುದು ಕಷ್ಟ. ಈ ಅನಾನುಕೂಲ ನಿವಾರಿಸಲೂ

        ಸಂಶೋಧನೆ  ಮುಂದುವರಿದಿದೆ. ಪ್ಲಾಸ್ಕೊನಿಕ್ಸ್ ಬಳಕೆಯಿಂದ ತೆಳ್ಳಗಿನ ಬಡುಬಂದಿದೆ. 

ನ್ಯಾನೊ ತಂತ್ರಜ್ಞಾನ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದರಿಂದ ನಾಕ್ಕೊನಿಕ್ಸ್‌ಗೂ ಉಜ್ವಲ ಭವಿಷ್ಯವಿದೆಯೆಂದು ತಜ್ಞರು ಭಾವಿಸಿದ್ದಾರೆ. ಪ್ಲಾಸ್ಕೋಪಿಕ್ ಆಪ್‌ಗಳನ್ನು ಅಭಿವೃದ್ಧಿಪಡಿಸುವ ವಿಚಾರ ಇದಕ್ಕೊಂದು ಉದಾಹರಣೆ. ಇವುಗಳನ್ನು ಸಾಂಪ್ರದಾಯಿಕ ಸಿಲಿಕಾನ್ ಚಿಪ್ಳೊಂದಿಗೆ ಸಮನ್ವಯಗೊಳಿಸುವ ಮೂಲಕ, ಅತ್ಯಂತ ಜನನಿಬಿಡ ಪ್ರದೇಶದಲ್ಲಿನ ಸಂಪರ್ಕಜಾಲವನ್ನು ಹೆಚ್ಚಿನ ದಕ್ಷತೆಯಿಂದ ನಿಭಾಯಿಸಲು ಸಾಧ್ಯವೆಂದು ಯೋಚಿಸಲಾಗಿದೆ. ಆದರೆ ಸಿಲಿಕಾನ್ ಬೇಸ್‌ಗಳಲ್ಲಿ ಸೆಂಟಿಮೀಟರ್‌ನಷ್ಟು ದೀರ್ಘ ಅಂತರದವರೆಗೆ ವಿದ್ಯುತ್ ಅಲೆ ಒಂದೇ ರೀತಿಯಲ್ಲಿ ಪ್ರವಹಿಸಬಹುದಾಗಿದ್ದರೆ, ಪ್ಲಾಸ್ಕೋನಿಕ್ಸ್‌ನಲ್ಲಿ ಕೇವಲ ಮಿಲಿಮೀಟರ್ ತನಕ ಮಾತ್ರ ಇಂತಹ ಒಂದೇ ರೀತಿಯ ಹರಿಯುವಿಕೆ ಕಂಡುಬರುತ್ತದೆ. ಇದೊಂದು ಅನಾನುಕೂಲವಾಗಿದ್ದು ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ. ಇವುಗಳನ್ನು ಜೈವಿಕ ಸಂವೇದಕ (ಬಯೋ ಸೆನ್ಸರ್‌ಗಳಲ್ಲೂ) ಬಳಸಿಕೊಳ್ಳುವ ಬಗ್ಗೆ ಸಂಶೋಧಕರು ಕಾತರರಾಗಿದ್ದಾರೆ. ಈಗಾಗಲೇ ರಾಸಾಯನಿಕ ಸಂವೇದಕ (ಕೆಮಿಕಲ್ ಸೆನ್ಸ‌ರ್)ಗಳಲ್ಲಿ ಇವುಗಳ ಬಳಕೆ ಉಪಯುಕ್ತ ವೆಂಬುದು ಕಂಡುಬಂದಿದೆ. ಸಿಲಿಕಾನ್ ಬೇಸ್‌ಗಳನ್ನು ಅರೆವಾಹಕಗಳಲ್ಲಿ ಬಳಸುವಾಗ ಅವು ತುಂಬ ಬಿಸಿಯಾಗದಂತೆ ಜಾಗ್ರತೆವಹಿಸಬೇಕಾಗುತ್ತದೆ. ಆದರೆ ಪ್ಲಾಸ್ಕೋನಿಕ್ಸ್ ಬಳಕೆಯಲ್ಲಿ ಉಂಟಾಗುವ ತಾಪಮಾನ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಇದರ ಬಗೆಗೂ ಪರೀಕ್ಷೆಗಳನ್ನು ನಡೆಸಬೇಕಾಗಿದೆ.

    ಪ್ಲಾಸ್ಥಾ ತಂತ್ರಜ್ಞಾನ ಇಷ್ಟೊಂದು ಅನುಕೂಲ ಹೊಂದಿದ್ದರೂ ಅದರ ಉತ್ಪತ್ತಿ ಮತ್ತು ಬಳಕೆಗೆ ಸಂಬಂಧಿಸಿದಂತೆ ಆಗಬೇಕಾಗಿರುವ ಕಾರ್ಯ ಇನ್ನೂ ಸಾಕಷ್ಟಿದೆ. ಇದಕ್ಕೆ ಮುಖ್ಯ ಅಡಚಣೆಯೆಂದರೆ ಬಂಡವಾಳದ್ದು, ಪ್ಲಾಸ್ಮಾ ತಂತ್ರ ಆಧರಿತ ಪ್ರಯೋಗಾಲಯಗಳ ಸ್ಥಾಪನೆ ಮತ್ತು ನಿರ್ವಹಣೆ ತುಂಬ ದುಬಾರಿಯದು. ಅಲ್ಲದೆ ಇದಕ್ಕೆ ಮೂಲ ವಿಜ್ಞಾನ ಸಂಶೋಧನೆಯ ಬೆಂಬಲವೂ ಅಗತ್ಯ. ಇತ್ತೀಚಿನ ದಿನಗಳಲ್ಲಿ ಮೂಲ ವೈಜ್ಞಾನಿಕ ಸಂಶೋಧನೆ ಆಕರ್ಷಣೆ ಕಳೆದುಕೊಂಡು ಮೂಲೆಗುಂಪಾಗುತ್ತಿದೆ.

    ದಿಢೀ‌ರ್ ಪ್ರತಿಫಲ ನೀಡಬಲ್ಲ, ಲಾಭದಾಯಕವೆನಿಸುವ ಆನ್ವಯಿಕ ತಾಂತ್ರಿಕ ಸಂಶೋಧನೆಗೇ ಹೆಚ್ಚಿನ ಮಹತ್ವ ನೀಡಲಾಗುತ್ತಿರುವ ಇಂದಿನ ದಿನಗಳಲ್ಲಿ ಮೂಲ ಸಂಶೋಧನಾ ಕ್ಷೇತ್ರ ಹೇಗೆ ಅಲಕ್ಷ್ಯಕ್ಕೆ ಒಳಗಾಗುತ್ತಿದೆಯೆನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಆದರೂ ಗುಜರಾತ್‌ನ ಗಾಂಧೀನಗರದಲ್ಲಿರುವ ಇನ್‌ಸ್ಟಿಟ್ಯೂಟ್ ಫಾರ್ ಪ್ಲಾಸ್ಟಾ ರಿಸರ್ಚ್ ಸಂಸ್ಥೆ, ಈ ನಿಟ್ಟಿನಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ. 1986ರಲ್ಲಿ ಪ್ರಾರಂಭವಾದ ಈ ಸಂಸ್ಥೆ, ಈ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿದೆ. ಸಂಶೋಧನೆಯ ಜೊತೆಗೆ ತರಬೇತಿ, ಶಿಕ್ಷಣ ಮತ್ತು ಸಲಹಾ ಕಾರ್ಯಗಳ ವಿಸ್ತರಣೆಯನ್ನೂ ಕೈಗೊಂಡಿದೆ.



Post a Comment

0Comments
Post a Comment (0)