ಒಂದು ಸ್ವಾರಸ್ಯಕರವಾದ ಪ್ರಶ್ನೆ ನೋವು ಅಂದರೇನು?

Admin
0

 ಒಂದು ಸ್ವಾರಸ್ಯಕರವಾದ ಪ್ರಶ್ನೆ "ನೋವು" ಅಂದರೇನು?



what is pain


 👉  ಹಿನ್ನೆಲೆ :  

    ನೋವು ನಿಜಕ್ಕೂ ನಮಗೆಲ್ಲಾ ತುಂಬ ಅಹಿತಕಾರಿಯಾಗಿದ್ದರೂ, ನಿಜಕ್ಕೂ  ಇದು ನಮ್ಮ ಶತ್ರುವಂತೂ ಅಲ್ಲ! ನೋವು ಸಕಾಲದಲ್ಲಿ ಎಚ್ಚರಗೊಳ್ಳಲು ನಮಗೆ  ಕೊಡುವ ಕರೆ ಗಂಟೆ ಅಥವಾ ಸಿಗ್ನಲ್. ಈ ಮಾತಿನ ಅರ್ಥವನ್ನು ಸರಿಯಾಗಿ ತಿಳಿಯಬೇಕಾದರೆ ನೋವಿನಿಂದಾಗುವ ಉಪಕಾರವನ್ನು ನಾವು ಅರಿಯಬೇಕು.


        ಕುಷ್ಠರೋಗದವರಿಗೆ ಪ್ರಾರಂಭದಲ್ಲಿ ರೋಗ ಅಂಟಿದ ಜಾಗದಲ್ಲಿ ಸ್ಪರ್ಶಜ್ಞಾನವೇ ಇರುವುದಿಲ್ಲ. ಅಲ್ಲಿ ಸೂಜಿ ಚುಚ್ಚಿದರೂ ಗೊತ್ತಾಗದು. ಹಾಗೆಯೇ ಬೆಂಕಿಯಿಂದ ಸುಟ್ಟರೂ ಗೊತ್ತಾಗದು. ಇವರಿಗೆ ನೋವೇ ಆ ಸ್ಥಳದಲ್ಲಿ ಆಗದು. ಇದರಿಂದ ಆಕಸ್ಮಿಕವಾಗಿ ಸುಟ್ಟುಕೊಂಡಾಗ, ಗಾಯವಾದಾಗ ಇವರಿಗೆ ಗೊತ್ತಾಗದೆ ಅಂಗಾಂಗಗಳು ವಿಕಾರಗೊಳ್ಳುತ್ತವೆ. ಇನ್ನು ಹುಟ್ಟುತ್ತಲೇ ನೋವನ್ನು ಅನುಭವಿಸುವ ಅಂಶವೇ ಇಲ್ಲದ ಮಕ್ಕಳೂ ಉಂಟು. ಇಂತಹ ಮಕ್ಕಳು ಸುಟ್ಟುಕೊಂಡಾಗಲೂ, ಬಿದ್ದಾಗಲೂ, ಕುದಿಯುವ ನೀರಿನಲ್ಲಿ ಕೈ ಇಟ್ಟಾಗಲೂ ನೋವನ್ನು ಅನುಭವಿಸುವುದಿಲ್ಲ! ಆದರೆ ಶಾಖಕ್ಕೆ ಈಡಾದ ಅವರ ಅಂಗಾಂಗಗಳು ಶಾಶ್ವತವಾಗಿ ಹಾಳುಗೆಡಹುತ್ತವೆ. ಈ ಕಾರಣಕ್ಕೆ ಇಂತಹವರು ಪೂರ್ಣಾಯಸ್ಸು ಬದುಕುವುದೇ ಅಪರೂಪ.

👉     ಇಷ್ಟಾದರೂ ನೋವನ್ನು ಮನಸ್ಸು ನಿಗ್ರಹಿಸುವುದರ ಮೂಲಕ ನಿಯಂತ್ರಿಸಬಹುದು. ಹಠಯೋಗಿಗಳು ಮುಳ್ಳಿನ ಹಾಸಿಗೆಯಲ್ಲಿ ಮಲಗಿದರೂ ವಿಜ್ಞಾನದ ವಿಸ್ಮಯ ವಿಹಾರಗಳು / ೧೪೮ಅವರಿಗೆ ಅಂತಹ ನೋವಾಗುವುದಿಲ್ಲ. ವಯಸ್ಸಾಗುತ್ತಾ ನೋವನ್ನು ತಡೆಯುವ ಕಟ್ಟಿಯೂ ಹೆಚ್ಚಾಗುತ್ತದೆ. ರಾತ್ರಿ ಹೊತ್ತು ಹೆಚ್ಚು ನೋವಿನ ಅನುಭತೆಯುವ ಕಾರಣ, ಬೇರೆ ಯಾವ ಕಾರ್ಯಗಳೂ ಇಲ್ಲದೆ ಅದರ ಬಗ್ಗೆಗ ಲೋಚಿಸುವುದರಿಂದ ಆಗುತ್ತದೆ. ಮನಸ್ಸನ್ನು ಬೇರೆಡೆಗೆ ತಿರುಗಿಸುವ ಪರಿಸರ ಇದ್ದರೆ ನೋವು ಕಡಿಮೆಯಾದ ಅನುಭವ ಉಂಟಾಗುತ್ತದೆ. ಮುಷ್ಟಿ ಬಿಗಿಹಿಡಿರೆ ಏನಾದರೂ ವಸ್ತುವನ್ನೂ ಬಲವಾಗಿ ಹಿಡಿದು ನೋವಿನ ಅಸಹನೀಯತೆಯನ್ನು ತಣಿಸಿ ಹಿಡಿತಕ್ಕೆ ತರಬಹುದು.

    ಮನಸ್ಸು ತೀವ್ರವಾದ ಉದ್ರೇಕದಲ್ಲಿದ್ದಾಗ ನೋವು ಆಗದು. ಆಟದಲ್ಲಿದ್ದಾಗ, ಕುಸ್ತಿಯಲ್ಲಿ ಪೆಟ್ಟಾದಾಗ, ಅಪಘಾತದಲ್ಲಿ ಗಾಯವಾದಾಗ, ಇತ್ಕಾಲಿಕವಾಗಿ ನೋವು ಆಗದು. ಆದರೆ ಮರುದಿನ ನೋವು ಉಲ್ಬಣಗೊಳ್ಳುತ್ತದೆ.

👉 ಒಂದು ಸ್ವಾರಸ್ಯ ನೋಡಿ: 
    ಹಿಂದಿನಿಂದ ಬಂದು ನೀವು ಮಗುವಿಗೆ ಹೊಡೆದು ಅದು ತಿರುಗಿ ನಿಮ್ಮನ್ನು ನೋಡಿದಾಗ ನಗುತ್ತಾ ಇರಿ. ಆಗ ಮಗು ಅಳುವುದಿಲ್ಲ. ಅದೇ ನೀವು ಕೋಪ ಗೊಂಡಂತೆ ಮುಖ ಮಾಡಿ, ತಕ್ಷಣ ಮಗು ಅಳುತ್ತದೆ! ಈಗ - ನೋವನ್ನೂ ಅಳೆಯಬಹುದಾಗಿದೆ. ನೋವನ್ನು ಅಳೆಯುವ ಯಂತ್ರಕ್ಕೆ ಡೋಲರೀಮೀಟರ್ ಎಂದು ಹೆಸರು. ನಮಗಾಗುವ ನೋವಿನ ಗರಿಷ್ಠ ಮಾನವನ್ನು ಈ ರೀತಿ ಅಳೆದಿದೆ. ನಮ್ಮ ಚರ್ಮದ ಮೇಲೆ ಅದೂ ಕಪ್ಪು ಬಣ್ಣವಿಲ್ಲದ ಚರ್ಮದ ಆ ಮೇಲೆ ೧೦೦೦ ವ್ಯಾಟ್ ಬಲ್ಸ್‌ನಿಂದ ಹೊರಹೊಮ್ಮುವ ಉಷ್ಣತೆಯನ್ನು ಒಟ್ಟಾರೆ ಒಂದು ಬಿಂದುವಿನ ಮೇಲೆ ಕೇಂದ್ರೀಕರಿಸಿದರೆ ಆಗ ಚರ್ಮದ ಉಷ್ಣತೆ ೧೫೨೦cಗೆ ಏರುತ್ತದೆ . ಈ ಸುಡುವ ಉಷ್ಣತೆಯೇ ನಮಗೆ ನೋವಿನ ರೂಪದಲ್ಲಿ ಗೊತ್ತಾಗುವ ಅತ್ಯುಗ್ರ ಸ್ವರೂಪದ್ದು. ನಂತರ ಎಷ್ಟೇ ಉಷ್ಣತೆ ಏರಿದರೂ ನೋವಿನ ಪ್ರಮಾಣ ಒಂದೇ ಮಟ್ಟದಲ್ಲಿ ನಿಂತುಬಿಡುತ್ತದೆ. ಆದರೂ ಮಿತಿಮೀರಿದ ನೋವು ನಮ್ಮ ನರವ್ಯೂಹವನ್ನು ಧರಣಿ ನಾಶಗೊಳಿಸಿಬಿಡುತ್ತದೆ. ನೋವನ್ನು ಅಳೆಯುವ ಮಾನಕ್ಕೆ "ಡೋಲ್" ಎಂದು ಹೆಸರು. ಕುದಿಯುವ ಎಣ್ಣೆ ಮೈಮೇಲೆ ಬಿದ್ದಾಗ ಅತಿ ತ್ರಾಸದಾಯಕ ನೋವು ನಮಗುಂಟಾಗುತ್ತದೆ. ಇದನ್ನು ಹತ್ತು ಡೋಲ್ ಮಾನದ ನೋವೆಂದು ಗುರುತಿಸಿದ್ದಾರೆ. ಇದಕ್ಕೆ ಸಮನಾದ ನೋವು, ಸುಡುವ ಸಿಗರೇಟನ್ನು ಚರ್ಮಕ್ಕೆ ಒತ್ತಿ ಹಿಡಿದಾಗಲೂ ಆಗುತ್ತದೆ.

   
👉 ತಲೆನೋವು. ಹೃದಯಾಘಾತ, ಸ್ನಾಯುಹಿಡಿತ, ಸಣ್ಣ ಬಗೆಯ ಸುಟ್ಟ ಗಾಯಗಳಾದಾಗ ಏಳರಿಂದ ಒಂಬತ್ತು ಡೋಲ್ ಮಾನದ ನೋವು ನಮಗಾಗುತ್ತದೆ. ಹಲ್ಲು ನೋವು, ಬೆನ್ನುನೋವು, ಸಂಧಿವಾತ ಮೊದಲಾದವು ಒಂದು ಅಥವಾ ಎರಡು ಡೋಲ್ ಮಾನದ ನೋವನ್ನು ತರಿಸುವಂತಹವು. ಕೆಲವು ನರಗಳ ಮೂಲಕ ನೋವು ೧೭೫ ಮೈಲಿ ವೇಗದಲ್ಲಿ ನಮಗೆ ಅನುಭವವಾದರೆ ಮತ್ತೆ ಕೆಲವು ನರಗಳಿಂದ ಸ್ವತಃ ಗ ನೋವು ನಿಧಾನವಾಗಿ ಅರಿವಾಗುತ್ತದೆ. ಆಗಲೇ ನಮಗೆ ತುಳಿಯುವ ನೋವು ಉಂಟಾಗುವುದು.

👉 ನಮ್ಮಲ್ಲಿ ನೋವು ಹೇಗೆ ಪಸರಿಸುತ್ತದೆ ಎಂಬುದನ್ನು ಸ್ವಲ್ಪ ತಿಳಿದುಕೊಳ್ಳೋಣ.
 ನಮ್ಮ ದೇಹದಾದ್ಯಂತ ನರಬಳ್ಳಿಗಳು ಹಬ್ಬಿವೆ. ಇವುಗಳ ತುದಿಗಳೇ ಸಂಜ್ಞಾವಾಹಕಗಳು. ಇವು ನೋವಿನ ಅನುಭವವನ್ನು ನಮ್ಮ ಬೆನ್ನುಹುರಿ- Spinal Card- ಮೂಲಕ ಕ್ಷಣಾರ್ಧದಲ್ಲಿ ಮೆದುಳಿಗೆ ಸಾಗಿಸುತ್ತದೆ. ಮೆದುಳಿ ನಲ್ಲಿ ಈ ನೋವಿನ ಸಂಜ್ಞೆಗಳನ್ನು ಗ್ರಹಿಸುವ ಕೇಂದ್ರ ಥಲಾಮಸ್. ಅಲ್ಲಿಂದ ಮೆದುಳಿನ ಹೊರಕವಚವಾದ ಕಾರ್ಟೆಕ್ಸ್‌ಗೆ ಇದು ರವಾನಿಸಲ್ಪಡುತ್ತದೆ.

👉 ಕೆಲವರಿಗೆ ನೋವು ವಿಪರೀತವಾಗಿ ಯಾವುದರಿಂದಲೂ ಹಿಡಿಯುವುದಿಲ್ಲ. ಅಂತಹವರಿಗೆ ನೋವಿನ ಸಂಜ್ಞೆಗಳನ್ನು ಒಯ್ಯುವ ನರತಂತುಗಳನ್ನೇ ಕತ್ತರಿಸಲಾಗುತ್ತದೆ.  1846ರಲ್ಲಿ ನೋವು ನಿವಾರಕ ಔಷಧಿಗಳು ಬಳಕೆಗೆ ಬಂದವು. 1847 ರಲ್ಲಿ ಕ್ಲೋರೋಫಾರಂ ನೋವು ನಿವಾರಕ ಔಷಧಿ ಕಂಡುಹಿಡಿಯಲ್ಪಟ್ಟಿತು. ಇದರಿಂದ ನೋವಿಲ್ಲದ ಶಸ್ತ್ರಚಿಕಿತ್ಸೆಯನ್ನು ಮಾಡುವಂತಾಯಿತು. ಕ್ಲೋರೋಫಾರು ಮೆದುಳಿನ ವೇದನಾ ಗ್ರಾಹಕ ಕೇಂದ್ರಗಳನ್ನು ನಿಷ್ಕ್ರಿಯೆಗೊಳಿಸುತ್ತದೆ. ಇನ್ನು ಸ್ಥಳೀಯವಾಗಿ ನೋವನ್ನು ನಿವಾರಿಸುವ ನೋವೋಕೇನ್ ಮೊದಲಾದ ಔಷಧಿಗಳೂ ಬಂದಿವೆ. ಈ ಔಷಧಿಗಳನ್ನು ಎಲ್ಲಿ ಚುಚ್ಚುತ್ತೇವೆಯೋ ಆ ಜಾಗದಲ್ಲಿ ನೋವಿನ ಅನುಭವ ಕೆಲವು ಕಾಲ ಇರುವುದಿಲ್ಲ.

👉 ಇನ್ನು ನಾವೆಲ್ಲ ದಿನನಿತ್ಯ ನುಂಗುವ ಆಸ್ಪಿರಿನ್ ನಮ್ಮ ತಲೆನೋವು, ಮೈಕೈ ನೋವನ್ನು ಹೇಗೆ ನಿವಾರಿಸುತ್ತದೆ ಗೊತ್ತೇ? ಅದರೊಳಗೆ ಸೇರಿರುವ ಫೆನಾಸಿಟಿವ ಮೊದಲಾದ ವೇದನಾಹರ ಔಷಧಿಗಳು ನಮ್ಮ ಮೆದುಳಿನಲ್ಲಿ ನೋವನ್ನು ಗುರುತಿಸುವ ಭಾಗಗಳನ್ನೇ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವುದರಿಂದ ನಮಗೆ ನೋವು ಮರೆಯಾಗುತ್ತದೆ ಅಷ್ಟೆ. ಈ ನೋವಿನ ಸಂಗತಿಯಲ್ಲಿ ಒಂದು ಬಹು ಸ್ವಾರಸ್ಯಕರ ಸಂಗತಿ ಎಂದರೆ ಎಲ್ಲಾ ನೋವನ್ನು ಗುರುತಿಸುವ ನಮ್ಮ ಮೆದುಳಿಗೆ ಸ್ವತ: ಗಾಯವಾದರೆ ಅಥವಾ ಹುಣ್ಣಾದರೆ ನೋವೇ ತಿಳಿಯುವುದಿಲ್ಲ! ಕಾರಣ ನಮ್ಮ ಮೆದುಳಿನಲ್ಲಿರುವ ನರವ್ಯೂಹದಲ್ಲಿ ವೇದನಾವಾಹಕ ನರಗಳೇ ಇಲ್ಲ!

Post a Comment

0Comments
Post a Comment (0)