ಪ್ಲಾಸ್ಟಿಕ್ ಸರ್ಜರಿಯಲ್ಲಿ ಭಾರತದ ಐತಿಹಾಸಿಕ ಕೊಡುಗೆ

Admin
0

 ಪ್ಲಾಸ್ಟಿಕ್ ಸರ್ಜರಿಯಲ್ಲಿ ಭಾರತದ ಐತಿಹಾಸಿಕ ಕೊಡುಗೆ

Plastic Surgery



👉ಹಿನ್ನೆಲೆ :

        ಸಾವಿರಾರು ವರ್ಷಗಳ ಹಿಂದೆ, ಹೊರಗಿನ ಜನರಿಗೆ ಸಾಮಾನ್ಯ ಸರ್ಜರಿಯ ಬಗ್ಗೆಯೂ ಏನೂ ಅರಿವಿಲ್ಲದಿದ್ದಾಗ, ಭಾರತೀಯ ಚಿಕಿತ್ಸಕರು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡುತ್ತಿದ್ದರು. ಸುಶ್ರುತ ಸಂಹಿತೆಯಲ್ಲಿ ಕಿವಿ, ಮೂಗು. ತುಟಿ ಮುಂತಾದವುಗಳ ಬಗ್ಗೆ ಪ್ಲಾಸ್ಟಿಕ್ ಸರ್ಜರಿಯ ವಿಸ್ತ್ರತ ವಿವರಣೆ ದೊರೆಯುತ್ತದೆ. ಇದಲ್ಲದೆ, ಈ ವರ್ಣನೆಗಳ ಜೊತೆಗೆ ಪ್ರತಿಪಾದಿಸಿದ ಮೂಲಭೂತ ಸಿದ್ಧಾಂತಗಳು ಇಂದಿಗೂ ಸತ್ಯವಾಗಿದ್ದು, ಅದೇ ರೂಪದಲ್ಲಿ ಆಧುನಿಕ ಚಿಕಿತ್ಸಾಶಾಸ್ತ್ರದಲ್ಲಿ "ಭಾರತೀಯ ಪ್ಲಾಸ್ಟಿಕ್ ಸರ್ಜರಿಯ ವಿಧಾನ” ಎಂಬ ಹೆಸರಿನಿಂದ ಜಗತ್ತಿನಾದ್ಯಂತ ಮಾನ್ಯತೆಯನ್ನು ಪಡೆದಿವೆ. 


    ಆಧುನಿಕ ಚಿಕಿತ್ಸಾ ಶಾಸ್ತ್ರದಲ್ಲಿ ಪ್ಲಾಸ್ಟಿಕ್ ಸರ್ಜರಿಯ ಪ್ರವೇಶ ಹದಿನೈದನೆಯ ಶತಮಾನದಲ್ಲಾಯಿತು. ಈ ವಿಷಯದ ಬಗ್ಗೆ ಪಶ್ಚಿಮದಲ್ಲಿ ಮೊದಲು ಬೋಲೋನ್ಯಾ ವಿಶ್ವವಿದ್ಯಾನಿಲಯವು ಪುಸ್ತಕ ಬರೆಯಿತು. ಸರ್ಜರಿಯ ಪಿತಾಮಹನೆಂದು ಪ್ರಸಿದ್ಧನಾಗಿರುವ ಇಟಲಿಯ ಮಹಾನ್ ಚಿಕಿತ್ಸಕ ಹಾಗೂ ಪ್ರಾಧ್ಯಾಪಕನಾದ ತೈಗ್ಲೀಯಾಕೋಜಿಯು ಇದರ ಕರ್ತೃ.


ಸುಪ್ರಸಿದ್ದ ಇತಿಹಾಸಕಾರ ಬ್ಯೂರಿನ್‌ ಅಭಿಪ್ರಾಯದಂತೆ, ತೈಗ್ಲಿಯಾ ಕೋಜಿಯು ಮೂಗಿನ ಪ್ಲಾಸ್ಟಿಕ್ ಸರ್ಜರಿಯನ್ನು ಸಿಸಿಲಿ ಪ್ರಾಂತದ ಬ್ರಾಂಕಸ್ ಬಂಧುಗಳಿಂದ ಕಲಿತ. ಬ್ರಾಂಕಸ್ ಬಂಧುಗಳು ಮೂರು ಪೀಳಿಗೆಗಳಿಂದ ಮೂಗಿನ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡುತ್ತಾ ಬಂದಿದ್ದರು. ಬ್ರಾಂಕಸ್ ನು ಇದರ ಜ್ಞಾನವನ್ನು “ಸೀಮೆನ್ ಎಂಡ್ ಟ್ರೇಡ್ಸ್‌ ಮೆನ್"ನ ಹಡುಗುಗಳಿಂದ ಬಂದು ಹೋಗುವ ಭಾರತೀಯ ಯಾತ್ರಿಗಳಿಂದ ಪಡೆದಿದ್ದ.



    ಪ್ರಾಧ್ಯಾಪಕ ತೆಗ್ಲೀಯಾಕೋಜಿಯ ಸಫಲ ಪ್ರಯೋಗಗಳ ಆಧಾರಗಳ ಮೇಲೆ ಹಾಗೂ ಅವುಗಳ ಪ್ರಸ್ತುತ ವರ್ಣನೆಯ ಪ್ರಭಾವದಿಂದ ಹದಿನಾರನೆಯ ಶತಮಾನದಲ್ಲಿ ಜರ್ಮನಿ ಮುಂತಾದ ದೇಶಗಳ ಚಿಕಿತ್ಸಕರೂ ಕೂಡ ಈ ವಿಷಯದಲ್ಲಿ ಆಸಕ್ತಿ ವಹಿಸಿದರು. ಕೆಲವು ಸಫಲ ಪ್ರಯೋಗಗಳನ್ನು ಕೈಗೊಂಡ ಶೋಧ ಪತ್ರಗಳು ಪ್ರಕಾಶಿತಗೊಂಡವು.


    ಆದರೆ ಕ್ರೈಸ್ತರ ಚರ್ಚುಗಳು ಈ ಕಾರ್ಯವನ್ನು ಘೋರವಾಗಿ ವಿರೋಧಿಸಿದವು. ಅವರ ದೃಷ್ಟಿಯಲ್ಲಿ, ಮುರಿದ ಕಿವಿ-ಮೂಗು ಇತ್ಯಾದಿಗಳನ್ನು ಮಾಡುವುದು ದೇವರಿಗೆ ಅಪವಾದವೆಸಗಿದಂತೆ. ಯಾರಾದರೂ ಮುರಿದ ಮೂಗು ಕಿವಿಗಳನ್ನು ಮಾಡಿದರೆ ಅಂತಹವರನ್ನು ಚಿಕಿತ್ಸಾ ಸೇವೆಯಿಂದ ತೆಗೆದುಹಾಕ ಲಾಗುವುದೆಂದು ಫ್ರಾನ್ಸಿನಲ್ಲಿ ಆಜ್ಞೆಯನ್ನೇ ಹೊರಡಿಸಲಾಯಿತು. ಆ ಕಡೆ ಇಟಲಿಯಲ್ಲಿ ಪ್ರಾಧ್ಯಾಪಕ ತೈಗೀಯಾಕೋಜಿಯವರ ಶವವನ್ನು ಚರ್ಚಿನ ಸಮಾಧಿ-ಭೂಮಿಯಿಂದ ಹೊರ ತೆಗೆಯಿಸಿ ಬೇರೆ ಕಡೆ ಹೂಳಿಸಲಾಯಿತು.


    “ಈಶ್ವರನ ಇಚ್ಛೆಯ ವಿರುದ್ಧ ಕಾರ್ಯವೆಸಗಿದ ಇದೊಂದು ಮಲಿನ ಆತ್ಮವಾಗಿತ್ತು” ಎಂದು ಪಾದರಿಗಳು ಹೇಳಿದರು. ಇವೆಲ್ಲದರ ದುಷ್ಪರಿಣಾಮ ಗಳಿಂದಾಗಿ, ಹದಿನೇಳನೆಯ ಶತಮಾನದಲ್ಲಿ ಯೂರೋಪಿನಲ್ಲಿ ಪ್ಲಾಸ್ಟಿಕ್ ಸರ್ಜರಿಯ ನಾಮಾವಶೇಷಗೊಂಡು, ಅದರ ಭವಿಷ್ಯ ಇದ್ದಕ್ಕಿದ್ದಂತೆ ಅಂಧಕಾರದಲ್ಲಿ ಸಿಲುಕಿಕೊಂಡಿತು.


👉ಭಾರತದ ಜ್ಞಾನಿಗಳು :

ಪ್ಲಾಸ್ಟಿಕ್ ಸರ್ಜರಿಯ ಭವಿಷ್ಯಕ್ಕೆ ಹಾಕಿದ್ದ ಪರದೆಯನ್ನು ಮತ್ತೊಮ್ಮೆ ತೆಗೆದ ಶ್ರೇಯಸ್ಸು ಸಹ ಭಾರತಕ್ಕೇ ಲಭಿಸಿದೆ. ಗೋವಾಸಜಿ ಎಂಬ ವ್ಯಕ್ತಿ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದಲ್ಲಿ ಗಾಡಿ ಹೊಡೆಯುವವನಾಗಿದ್ದ. ೧೭೯೨ರಲ್ಲಿ ಮೈಸೂರು ಯುದ್ಧದಲ್ಲಿ ಟಿಪ್ಪುಸುಲ್ತಾನನು ಬ್ರಿಟಿಷ್ ಸೈನ್ಯವನ್ನು ತಡೆಗಟ್ಟಿದ. ಆಗ ಗೋವಾಸಜಿ ಬ್ರಿಟಿಷ್ ಸೈನ್ಯಕ್ಕೆ ಗುಪ್ತವಾಗಿ ಆಹಾರ ಸಾಮಗ್ರಿಗಳನ್ನು ತಲುಪಿಸುತ್ತಿರುವಾಗ ಸಿಕ್ಕಿಬಿದ್ದ. ಟಿಪ್ಪು ಅವನನ್ನು ಬಂಡಾಯಗಾರನೆಂದು. ಅವನ ಒಂದು ಕೈ ಮತ್ತು ಮೂಗನ್ನು ಕತ್ತರಿಸಿ ಹಾಕಿದ. ಇದಾದ ಒಂದು ವರ್ಷದಲ್ಲಿ ಮಹಾರಾಷ್ಟ್ರದ ಒಬ್ಬ ಸರ್ಜನ್ ಪೂನಾದಲ್ಲಿ ಗೋವಾಸಜೆಯ ಮೂಗನ್ನು ಪ್ಲಾಸ್ಟಿಕ್ ಸರ್ಜರಿಯ ಮೂಲಕ ಮಾಡಿದ. ಮುರಿದ ಮೂಗು ಮತ್ತೆ ಸಾಮಾನ್ಯ ಸ್ಥಿತಿಗೆ ಬಂತು. ದೌರ್ಭಾಗ್ಯದ ವಿಷಯವೇನೆಂದರೆ, ಆ ಮಹಾನ್ ಭಾರತೀಯ ಸರ್ಜನನ ಹೆಸರು ಅಜ್ಞಾತವಾಗಿದೆ.


ಈ ಕಾರ್ಯವು ಟಾಮಸ್ಸ ಕ್ರೂಸೋ ಮತ್ತು ಜೇಮ್ಸ್ ಫಿಂಡಲೆ ಎಂಬ ಇಬ್ಬರು ಉಗ್ಲರು ಉಪಸ್ಥಿತಿಯಲ್ಲಿ ಸಂಪನ್ನವಾಯಿತು. ಅವರಿಬ್ಬರೂ ಇದರಿಂದ ತುಂಬಾ ಪ್ರಭಾವಿತರಾದರು. ಅಪರಲ್ಲಿ ಓರ್ವ ಸರ್ಜನ್, ಮತ್ತೊಬ್ಬ ಚಿತ್ರಕಾರನಾಗಿದ್ದ. ಸರ್ಜನ್ ಅಪರೇಶನ್ನಿನ ವೇಳೆಯಲ್ಲಿ ಅಳವಡಿಸಲಾದ ವಿಧಾನಗಳ ವಿವರಣೆಯನ್ನು ಬರೆದುಕೊಂಡ ; ಚಿತ್ರಕಾರನು ಆಪರೇಶನ್ನಿನ ವೇಳೆಯ ವಿಭಿನ್ನ ಚಿತ್ರಗಳನ್ನು ಚಿತ್ರಿಸಿಕೊಂಡ . ಈ ರೀತಿ ಇಬ್ಬರೂ ಸೇರಿ ಮೂಗಿನ ಗ್ಲಾಸ್ಟಿಕ್ ಸರ್ಜರಿಯ ಬಗ್ಗೆ ತಯಾರಿಸಿದ ವಿಸ್ತ್ರತ ವಿವರಣೆಯು ಮದರಾಸಿನ ಮೆಡಿಕಲ್ ಗೆಜೆಟ್‌ನಲ್ಲಿ ಪ್ರಕಾಶಿತಗೊಂಡಿತು.


ಹತ್ತು ವರ್ಷಗಳಾದ ಮೇಲೆ ಅದೇ ವಿವರಣೆಯು ಇಂಗ್ಲೆಂಡಿನ 'ಜೆಂಟಲ್ ಮೇನ್ಸ್ ಮ್ಯಾಗಜೀನ್'ನಲ್ಲಿ ವಿಸ್ತಾರವಾಗಿ ಪ್ರಕಟವಾಯಿತು. ಕಾರಣ, ಆಪರೇಶನ್ ಇಬ್ಬರು ಆಂಗ್ಲರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತ್ತು. ಅಲ್ಲದೆ ಅವರೇ ಅದರ ವರದಿಯನ್ನೂ ಪ್ರಸ್ತುತ ಪಡಿಸಿದ್ದರು. ಈ ಕಾರಣದಿಂದಾಗಿ ಇಂಗ್ಲೆಂಡಿನ ಜನರು ಅದನ್ನು ಅವಿಶ್ವಾಸನೀಯವೆಂದು ಹೇಳಿ ತಿರಸ್ಕರಿಸದಾದರು. ಈ ವಿಷಯದಲ್ಲಿ ಪಶ್ಚಿಮದಲ್ಲಿ ಮತ್ತೆ ಕುತೂಹಲ ಜಾಗೃತವಾಯಿತು.


ಜೆಂಟಲ್‌ ಮೆನ್ಸ್ ಮ್ಯಾಗಜೀನಿನ ಲೇಖನದಿಂದ ಪ್ರಭಾವಿತರಾದ ಇಂಗ್ಲೆಂಡಿನ ಡಾ|| ಜೋಸೆಫ್ ಕಾರ್ಪೂರವರು ಭಾರತೀಯ ವಿಧಾನಗಳನ್ನು ಉಪಯೋಗಿಸಿ ಕೊಂಡು, ಮೂಗಿನ ಪ್ಲಾಸ್ಟಿಕ್ ಸರ್ಜರಿಯ ಎರಡು ಸಫಲ ಆಪರೇಶನ್ ಮಾಡಿ ಅದರ ರಿಪೋರ್ಟನ್ನು ೧೮೧೨ರಲ್ಲಿ ಪ್ರಕಟಿಸಿದರು, ರಿಪೋರ್ಟಿನಲ್ಲಿ ಅವರು ತಾವು ಅಳವಡಿಸಿದ ವಿಧಾನಗಳನ್ನು ಉಲ್ಲೇಖಿಸಿದ್ದಾರೆ. ಇಂದು ಡಾ|| ಕಾರ್ಪೂರವರನ್ನು ಆಧುನಿಕ ಪ್ಲಾಸ್ಟಿಕ್ ಸರ್ಜರಿಯ ಪಿತಾಮಹರೆಂದು ತಿಳಿಯಲಾಗಿದೆ.


ಈ ರೀತಿ ಪಶ್ಚಿಮದಲ್ಲಿ ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಆದ ದ್ವಿತೀಯ ಕ್ರಾಂತಿಯ ಪ್ರೇರಣಾಸ್ರೋಶಕ್ಕೂ ಭಾರತವೇ ಕಾರಣವಾಗಿತ್ತು; ನಂತರ ಪ್ಲಾಸ್ಟಿಕ್ ಸರ್ಜರಿಯ ವಿಕಾಸ ಯಾವ ಅಡ್ಡಿ ಆತಂಕಗಳಿಲ್ಲದೆ ಅಮೇರಿಕ, ಇಂಗ್ಲೆಂಡ್ ಹಾಗೂ ರಷ್ಯಾದಲ್ಲಿ ಮುಂದುವರಿಯಲಾರಂಭಿಸಿತು.


ಪಾದರಿಗಳು ಅಪವಿತ್ರ ಆತ್ಮಗಳೆಂದು ಹೇಳಿದ್ದ ಪ್ರಾಧ್ಯಾಪಕ ತೈಗ್ಲೀಯಾ ಕೋಜಿಯ ಪ್ರತಿಮೆಯು ಇಂದು ಬೋಲೋನ್ಯಾ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗಿದೆ. ಪ್ರತಿಮೆಯಲ್ಲಿ ಅವರನ್ನು ಒಂದು ಕೈಯಲ್ಲಿ ಮೂಗು 'ಹಿಡಿದಂತೆ ತೋರಿಸಲಾಗಿದೆ, ತೈಗೀಯಾಕೋಜಿಯು ರಚಿಸಿದ ಮೂಗು ಸಾಮಾನ್ಯ ಮೂಗಿನಂತೆ ಕಂಡರೂ ಜೋರಾಗಿ ಸೀನಿದರೆ ಬಹುಶಃ ಕಿತ್ತು ಕೆಳಗೆ ಬೀಳಬಹುದೆಂದು ಒಂದು ಕಾಲದಲ್ಲಿ ಜನರು ತಮಾಷೆ ಮಾಡುತ್ತಿದ್ದರು !


ಜೂನಾಗಢ ರಾಜ್ಯದ ಚೀಫ್ ಮೆಡಿಕಲ್ ಆಫೀಸರ್ ಶ್ರೀ ತ್ರಿಭುವನದಾಸ್ ಮೋತಿಚಂದ್ ಶಾಹ (೧೮೫೦-೧೯೦೫) ಮೂಗಿನ ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ೨೦೦ ಅಪರೇಶನ್ ಕೈಗೊಂಡರು. ಅದರ ಬಗ್ಗೆ ವಿವರಣೆಯು ೧೮೮೯ರಲ್ಲಿ ಪ್ರಕಟವಾಯಿತು. ಇದೂ ಸಹ ವಿದೇಶಿಯರಿಗೆ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಜಾಗೃತಿ ಕೆರಳಿಸಿತು. ಈ ಆಪರೇಶನ್ಗಳಿಂದಾಗಿ ಡಾ|| ತ್ರಿಭುವನ್‌ದಾಸ್ ಶಾಹರು ಎಷ್ಟು ಜನಪ್ರಿಯರಾದರೆಂದರೆ, ಆ ಇಲಾಖೆಯಲ್ಲಿ "ಕಾದು ಕಾಪೆ ನಾಕ್ ಸಾಂಧ ತ್ರಿಭುವನ್” ಎಂಬ ಉಕ್ತಿಯು ಹುಟ್ಟಿಕೊಂಡಿತು. ಅಂದರೆ ಕಾದು ಮೂಗು ಮುರಿದರೆ ತ್ರಿಭುವನ ಅದನ್ನು ಮಾಡುತ್ತಾನೆ. ಕಾದು ಮಕರಾನಿ ಆಗ ಸೌರಾಷ್ಟ್ರದ ಪ್ರಸಿದ್ಧ ದರೋಡೆಕಾರನಾಗಿದ .


ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಪ್ರಾಚೀನ ಭಾರತೀಯ ಚಿಕಿತ್ಸಾಶಾಸ್ತ್ರದ ಮೂಲಭೂತ ಹಾಗೂ ವೈಜ್ಞಾನಿಕ ವಿಚಾರಗಳ ವರ್ಗಿಕೃತ ವಿವರಣೆ ದೊರೆಯುವ ಸುಶ್ರುತ ಸಂಹಿತೆಯ ಅಂಶಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ಈಗ ಪರಿಚಯ ಮಾಡಿಕೊಳ್ಳೋಣ.


👉ವೇದಗಳಲ್ಲಿ ಉಲ್ಲೇಖ :

    ಸುಶ್ರುತ ಸಂಹಿತೆಯ ಸೂತ್ರಸ್ಥಾನದ ಹದಿನಾರನೆಯ ಅಧ್ಯಾಯದಲ್ಲಿ ಮೂಗು, ಕಿವಿ, ತುಟಿಗಳ ಪ್ಲಾಸ್ಟಿಕ್ ಸರ್ಜರಿಗೆ ಕ್ರಮವಾಗಿ 'ನಾಸಾ-ಸಂಧಾನ', 'ಕರ್ಣ-ಸಂಧಾನ' ಮತ್ತು ಓಪ್ಪ-ಸಂಧಾನ' ಶಬ್ದಗಳನ್ನು ಬಳಸಲಾಗಿದೆ. ಕರ್ಣ ಪಾಲಿಯ ಸಂಧಾನ (ಇರ್ಯ ಲೋಬ್ ಪ್ಲಾಸ್ಟಿ)ವನ್ನು ವರ್ಣಿಸುತ್ತಾ, ಆಚಾರ್ಯ ಸುಶ್ರುತನು ಪ್ಲಾಸ್ಟಿಕ್ ಸರ್ಜರಿಯ ಮೂರು ಮೂಲಭೂತ ನಿಯಮಗಳನ್ನು ಹೇಳಿದ್ದಾನೆ. ಅದರ ಜ್ಞಾನವು ಪ್ಲಾಸ್ಟಿಕ್ ಸರ್ಜರಿಯಲ್ಲಿ ಅತ್ಯಂತ ಆವಶ್ಯಕ. ಆ ನಿಯಮಗಳು ಈ ರೀತಿ ಇವೆ :


* ನಚಾ… ಶುದ್ಧ ರಕ್ತಮತಿ ಪ್ರವೃತ್ತರಕ್ತಂ ಕ್ಷೀಣರಕ್ತಂ ವಾ


[ನಿರ್ಣಯ ಸಾಗರ ಸಂಸ್ಕರಣ್ ]

ಅನಕೆ-


-(a) ಒಂದು ವೇಳೆ ಅಶುದ್ಧ ರಕ್ತ ಬಂದರೆ, ಹೆಚ್ಚು ರಕ್ತ ಮುತ್ತಿದ್ದರೆ ಅಥವಾ ತುಂಬಾ ಕಡಿಮೆ ರಕ್ತ ಬರುತ್ತಿದ್ದರೆ ಸಂಧಾನ (ಪ್ಲಾಸ್ಟಿ) ಉಡಬಾರದು.


ತ್ವಚೆಯ ಎರಡೂ ಅಂಚುಗಳನ್ನು ಜೋಡಿಸುವಾಗ ಅಲ್ಲಿ ಅಶುದ್ಧತೆ ಉಬಾರದೆಂದು ಮೊದಲನೆಯ ನಿಯಮವಾಯಿತು. ಅಂದರೆ ತ್ವಚೆಯು ಊತವಾಗಬಾರದು, ದೂಷಿತವಾಗಬಾರದು, ಸೊಂಕಾಗ (ಇನ್ಸೆಕ್‌ಶನ್) ಬಾರದು. ಹಾಗೇನಾದರೂ ಆದಲ್ಲಿ ಸಂಧಾನ ಕ್ರಿಯೆಯಲ್ಲಿ ಅಡ್ಡಿಯಾಗಬಹುದು.


ಎರಡನೇ ನಿಯಮವೇನೆಂದರೆ, ಹೆಚ್ಚು ರಕ್ತಸ್ರಾವವಾಗುವ ಸ್ಥಳದಲ್ಲಿ ಸಂಧಾನಕ್ರಿಯೆ ಮಾಡಬಾರದು. ಎರಡು ಅಂಚುಗಳ ನಡುವೆ ಹೆಚ್ಚು ರಕ್ತ- ಸ್ರಾವವಾದರೆ ಅಂಚುಗಳನ್ನು ಜೋಡಿಸುವ ತಂತುಗಳು ಸೇರುವಲ್ಲಿ ಅಡಚಣೆಯಾಗಿ, ಸಂಗ್ರಹಗೊಂಡ ರಕ್ತದಿಂದಾಗಿ, ಪ್ರಾರಂಭಿಕ ಸಂಧಾನ ಅಸಂಭವವಾಗುತ್ತದೆ.


ಇದಕ್ಕೆ ವಿರುದ್ಧವಾಗಿ, ರಕ್ತಸ್ರಾವ ಸುತಾರಾಂ ಆಗದಿದ್ದಲ್ಲಿ ಜೀವನ ಸಂದಿಗ್ಧವಾಗುತ್ತದೆ, ಕೂಡುವ ತಂತುಗಳ ಇದು ಮೂರನೆ ನಿಯಮ. ಸರಿಯಾಗಿ ಪೋಷಣೆ ఆగుపువిల్ల


ಕರ್ಣ-ಸಂಧಾನಕ್ಕೆ ಸುಶ್ರುತನು ವಿಭಿನ್ನ ಪರಿಸ್ಥಿತಿಗಳಲ್ಲಿ ವಿಭಿನ್ನ ಸಂಧಾನ ವಿಧಾನಗಳನ್ನು ಹೇಳಿದ್ದಾನೆ :


ಯಸ್ಯ ಪಾಲಿದ್ವಯಮಪಿ ಕರ್ಣಸ್ಯ ನ ಭವೇದಿಹ ! ಕರ್ಣಪೀಠಂ ಸಮೆ ಮಧ್ಯೆ ತಸ್ಯ ವಿದ್‌ಧ್ವಾ ವಿವರ್ಧಯೇತ್ ||೧೧il


-ಯಾವ ವ್ಯಕ್ತಿಯ ಕಿವಿಯಲ್ಲಿ ಎರಡೂ ಪಾಲಿಗಳಿಲ್ಲವೋ (ಲೋಬ್) ಅವನ ಕರ್ಣಪೀಠ (ಎಂಟೀಟ್ರೇಗಸ್‌ನ ಸಮೀಪದ ಭಾಗ)ದ ಮದ್ಯಸ್ಥಾನದಲ್ಲಿ ರಂಧ್ರ ಮಾಡಬೇಕು.


ಯಿತು ಕರ್ಣಾ ನ ವರ್ಧಂತೆ ಸೈದ ಸ್ನೇಹೋಪ ಪಾದಿತಾಃ ! ತೇಷಾಮಪಾಂಗ ದೇಶೆ ತು ಕುರ್ಯಾತ್ ಪ್ರಜ್ಞಾನ ಮೆವತು



-ಯಾನ ಕಿವಿ ಸ್ಟೇದನೆ ಮತ್ತು ತೈಲ ಮರ್ಧನೆ ಮಾಡಿದಾಗ್ಯೂ ಹಿಗ್ಗದಿದರೆ ಅವರ ಅನಾಂಗ ಪ್ರದೇಶದಲ್ಲಿ (ಎಂಟಟ್ರೇಗಸ್-ಕರ್ಣ ಪುತ್ರಿಕೆಯ ಸ್ವಲ್ಪ ಕೆಳಗಿ ಸಣ್ಣ ರಂಧ್ರ ಮಾಡಬೇಕು.


ಬಾಜ್ಯಾಯಾಮಿಹ ದೀರ್ಘಾಯಾಂ ಸಂಧಿರಾಜ್ಯ೦ತರೋ ಭವೇತ್ | ಅಭ್ಯತರಾಯಾಂ ದೀರ್ಘಾಯಾಂ ಬಾಹ್ಯಸಂಧಿರು ದಾ ಹೃತಃ |isil ಒಂದು ವೇಳೆ ಹೊರಗಿನ ಪಾಲಿ (ಲೋಬ್) ದೊಡ್ಡದಾಗಿದ್ದರೆ ಜೋಡಿಸ (ಪ್ಲಾಸ್ಟಿ) ಬೇಕು. ಒಳಗಿನ ಪಾಲಿ ದೊಡ್ಡದಾಗಿದ್ದರೆ ಹೊರಭಾಗಕ್ಕೆ ಜೋಡಿಸಬೇಕು.


ಎಕೈನ್ ತು ಭವೇತ್ ಪಾಲಿಂ ಪೃಥ್ವಿ ಸ್ಕೂಲಾ ಸ್ಥಿರಾ ಚಯಾ । ತಾಂ ದ್ವಿಧಾ ಪಾಟಯಿಶ್ವಾ ತು ವಿತ್‌ ತ್ವಾ ಚೋಪರಿ ಸಂಧಯೇತ್


ಒಂದು ವೇಳೆ ಒಂದೇ ಕಡೆ ಪಾಲಿ ದಪ್ಪ, ಅಗಲ ಹಾಗೂ ಸ್ಥಿರವಾಗಿದ್ದರೆ ಅದನ್ನು (ಮೇಲ್ಬಾಗಕ್ಕೆ) ಮಧ್ಯದಿಂದ ಜೋಡಿಸಬೇಕು. ಸೀಳಿ ಮತ್ತೊಂದು ಕಡೆಗೆ


ಈ ವಿಧಾನವನ್ನು ಆಧುನಿಕ ಸರ್ಜರಿಯಲ್ಲಿ ಹತ್ತೊಂಭತ್ತನೆಯ ಶತಮಾನದ ಅಂತ್ಯದಲ್ಲಿ ಸ್ವೀಕರಿಸಲಾಯಿತು. ಉಪಯೋಗದ ದೃಷ್ಟಿಯಿಂದ ಇಂದು ಪ್ರಚಲಿತ ಸಿದ್ಧಾಂತಗಳ ರೂಪದಲ್ಲಿ ಮಾನ್ಯವಾಗಿದೆ.


ಗಂಡಾದು ತ್ವಾಟ್ಯ ಮಾಂಸೇನ್ ಸಾನುಬಂಧೇನ್ ಜೀವತಾ | ಕರ್ಣಪಾಲೀ ಮಪಾಲೇಸ್ತು ಕುರ್ಯಾಗ್ನಿರ್ಲಿಖ್ಯ ಶಾಸ್ತ್ರವಿತ್ ||೧೪|| ಶಸ್ತ್ರ ವೈದ್ಯಶಾಸ್ತ್ರ (ಸರ್ಜರಿ) ಬಲ್ಲವ ಗಲ್ಲದ ಪ್ರದೇಶದಿಂದ ತೆಗೆದ ಜೀವಿತ ಮಾಂಸ ಮತ್ತು ಅದರೊಂದಿಗೆ ಸೇರಿದ ಮಾಂಸದಿಂದ ಪಾಲಿ-ರಹಿತ ಕಿವಿಯ ಪಾಲಿಯನ್ನು ಚಿತ್ರ ತೆಗೆದು ಮಾಡಿದ.


ಇದು 'ಆಹಾರ್ಯಬಂದ್' ಸಂಧಾನ-ದರ್ಶಕ ಸೂತ್ರ. ಇಂದು ಈ ವಿಧಾನವನ್ನು “ರೀಪೆಯರ್ ಬಾಯಪೆಡಿಕಲ್ ಪ್ರೈಪ್ ಗ್ರಾಸ್ಟಿಂಗ್" ಎನ್ನಲಾಗುತ್ತದೆ. ಇದರಲ್ಲಿ ಗಲ್ಲದಿಂದ ಬೇಕಾದ ಆಕಾರದ ಮಾಂಸವನ್ನು ಕತ್ತರಿಸಿ ತೆಗೆಯಲಾಗುತ್ತದೆ. ಕರ್ಣಪಾಲಿಯ ಸಂಪೂರ್ಣ ಅಭಾವದಲ್ಲಿ ಅಲ್ಲಿಯ ಸ್ಥಾನಿಕ ಚಿತ್ರ ತೆಗೆದು ಈ ಮಾಂಸವನ್ನು ಜೋಡಿಸಲಾಗುತ್ತದೆ. ಸಂಬದ್ಧ ಜೀವಿತ ಮಾಂಸ (ಸೆಡಿಕಲ್ ಸ್ಟೈಪ್)ದ ಪ್ರಯೋಗ ಆಧುನಿಕ ಸರ್ಜರಿಯಲ್ಲಿ ಹೊಸದು.

ಭಾರತ-ಪ್ಲಾಸ್ಟಿಕ್ ಸರ್ಜರಿಯ ಕೊಡುಗೆ


'ನಾಸಾ-ಸಂಧಾನ-ವಿಧಿ' (ರೀನೋಪ್ಲಾಸ್ಟಿ)ಯ ప్రధాన- విధి'యెంట ಬೃನ ಪಡೆದಿದೆ, 'ಭಾರತೀಯ ನಾಸಾ ಹೆಸರಿನಿಂದ ಅಧುನಿಕ ಸರ್ಜರಿಯಲ್ಲಿ ಅದೇ ರೂಪದಲ್ಲಿ


ವಿಶ್ಲೇಷಿತಾಯಾಸ್ತವಥ್ ನಾಸಿಕಾಯ ನಕ್ಷಾಮಿ ಸಂಧಾನನಿಧಿಂ ಯಥಾವತ್ |


ನಾಸಾಪ್ರಮಾಣಂ ಪೃಥಿವೀರು ಹಾಣಾಂ ಪತ್ರಂಗೃ ಹೀತ್ವಾತ್ವವಲಂಬಿ


ಶೀನ್ ಪ್ರಮಾಣೇನ್ ಹಿ ಗಂಡಪಾಶ್ವಾದ್ ಉತ್ಕೃಷ್ಟಬದ್ಧಂ ತ್ವಥ್ ನಾಸಿಕಾಗ್ರ |


ವಿಲಿಖ್ಯ ಚಾಶು ಪ್ರತಿ ಸಂದಧೀಶ್ ತತ್ಸಾಧು ಬಂದ್ರೆ ರ್ಭಿಷಗಪ್ರಮತ್ತಃ || ಸುಸಂಹಿತಂ ಸಮಗ ಯಥಾವನ್ನಾಡೀ ದ್ವಯೆ ನಾಭಿಸಮಕ್ಷ


ಪ್ರೋನ್ನಾಮ ಚೈನಾಮನ ಚೂರ್ಣಯೇತ್ತು ಪತಂಗ ಯಷ್ಟಿಮಧು ಕಾಂಜನೈಶ್ಚ ||


ಸಂಭಾದ್ಯ ಸಮ್ಯಕ್ ಪಿಚುನಾ ಸಿತೇನ್ ಶೈಲೇನ್ ಸಿಂಚೆದಸಕ ಸಕೃತ್ತಿ ಲಾನಾವತ್ |


ಧೃತಂ ಚ ಪಾಯ್ಯಃ ಸ ನರಃ ಸುಜೀರ್ಣಸ್ಸಿಗೋ ವಿರೇಚ್ಯಃ ಸ 'ಯಥೋಪ ದೇಶವಮ್ || ರೂಢಂ ಚ ಸಂಧಾನ ಮಪಾಗತಂ ಸ್ಯಾತ್ ತದರ್ಧ ಶೇಷಂ ಚ


ಪುನರ್ನಿಕೃಂತೇತ್ ಹೀನಾಂ ಪುನರ್ವಧ್ರಯಿತುಂ ಯತೇತ್ ಸಮಾಂ ಚ ಕುರ್ಯಾದ 1



ತಿವೃದ್ಧ ಮಾಂಸಾಮ್ | ಭಿನ್ನ ನಾಸಿಕಾವನ್ನು ಜೋಡಿಸುವ ಪದ್ಧತಿಯನ್ನು ಯಥಾವಿಧಿಯಾಗಿ ವರ್ಣಿಸುತ್ತೇನೆ. ಬಿನ್ನ ನಾಸಿಕಾಂಶದ ಅಳತೆಗೆ ತಕ್ಕಂತೆ ಗಲ್ಲದಿಂದ ಅದಕ್ಕೆ ಸಮನಾಗಿ ಚರ್ಮಯುಕ್ತ ಮಾಂಸವನ್ನು ಕತ್ತರಿಸಿ (ಆದರೆ ಗಲ್ಲಕ್ಕೆ ಅವಲಂಬಿತ ವಾಗಿರುವಂತೆ), ಕತ್ತರಿಸಿದ ಮೂಗಿನ ಹೊಳ್ಳೆಯನ್ನು ಕೆತ್ತಿ ಅದರ ಮೇಲೆ ಹೇಳಿದ ಮಾಂಸವನ್ನು ಬುದ್ಧಿವಂತ ವೈದ್ಯನು ದ್ರವ್ಯಗಳ ಸಹಾಯದಿಂದ ಶೀಘ್ರವಾಗಿ, ಸರಿಯಾಗಿ ಜೋಡಿಸಲಿ. ತದನಂತರ ಮೂಗಿನ ಹೊಳ್ಳೆಯಲ್ಲಿರುವ ಎರಡು ನಲಿಕೆಗಳಿಂದ ಮೇಲ್ಮಾಡಿ ಎರಡರ ಜೋಡಣೆಯನ್ನು ಸರಿಯಾದ ಮತ್ತು ಸಹಜವಾದ ಮೂಗಿನಂತೆ ಮಾಡಿ ಕಟ್ಟಲಿ-ಹಾಗೂ ಅದರ ಮೇಲೆ ಕೆಂಪುಚಂದನ,



ಅತಿಮಧುರ ಮತ್ತು ರಸಾಂಜನದ ಚೂರ್ಣವನ್ನು ಚಿಮುಕಿಸಲಿ. ನಂತರ ಬಿಳಿ ಬಟ್ಟೆಯಿಂದ ಮುಚ್ಚಿ ಎಳ್ಳೆಣ್ಣೆಯಿಂದ ಬಟ್ಟೆಯನ್ನು ಬಾರಿ ಬಾರಿಗೂ ಒದ್ದೆ ಮಾಡುತ್ತಿರಲಿ. ರೋಗಿಗೆ ತುಪ್ಪ ಕುಡಿಸಬೇಕು. ತುಪ್ಪ ಅರಗಿದಾಗ ಆ ಸ್ನಿಗ್ಧಗೊಂಡ ರೋಗಿಗೆ ನಿರ್ದಿಷ್ಟ ಪ್ರಕಾರವಾಗಿ ಭೇದಿ ಔಷಧಿಯನ್ನು ಕೊಡಲಿ. ಹುಣ್ಣಿನ ಜೋಡಣೆಯೂ ಸರಿಯಾದಾಗ (ಗಲ್ಲಕ್ಕೆ ಸಂಬಂಧಿಸಿದ) ತ್ವಚೆ ಭಾಗವನ್ನು ಕತ್ತರಿಸಬೇಕು. ಈಗ ಮೂಗು ಒಂದು ವೇಳೆ ಚಿಕ್ಕದು ಅಥವಾ ದೊಡ್ಡದಾದರೆ ಅದನ್ನು ವೃದ್ಧಿಸುವ ಅಥಹಾ ಸಮನಾಗಿ ಮಾಡುವ ಪ್ರಯತ್ನ ಮಾಡಬೇಕು.


ನಾಡಿಯೋಗಂ ವಿನೌಶಸ್ಯ ನಾಸಾಸಂಧಾನವಥ್ ವಿಧಿತ್ |


ಯ ಏವಮೇವ ಜಾನೀಯಾತ್ ಸ ರಾಜ್ಞಾಃ ಕರ್ತ್ತು


ಹರಿದ ತುಟಿಯನ್ನು ಜೋಡಿಸುವ ವಿಧಾನವು ನಲಿಕೆಯನ್ನು ಉಪಯೋಗಿಸದೆ ಮೇಲೆ ತಿಳಿಸಿದ ಮೂಗಿನ ಹೊಳ್ಳೆ ಜೋಡಿಸುವಂತೆಯೇ ಮಾಡಲಾಗುತ್ತದೆ. ಇವನ್ನೆಲ್ಲಾ ತಿಳಿದ ವೈದ್ಯ ರಾಜ ಚಿಕಿತ್ಸೆಯನ್ನು ಮಾಡಲು ಯೋಗ್ಯ.


ಈ ವಿವರಣೆಗಳಿಂದ, ಆಚಾರ್ಯ ಸುಶ್ರುತನು ಪ್ಲಾಸ್ಟಿಕ್ ಸರ್ಜರಿಯ ವಿಧಾನಗಳ ವರ್ಣನೆಗಳೊಂದಿಗೆ ಪ್ರತಿಪಾದಿಸಿದ ಸಿದ್ದಾಂತ ಸೂತ್ರಗಳಿಗೆ ಇಂದಿಗೂ ಅಂದಿನಷ್ಟೇ ಮಹತ್ವವಿತ್ತೆಂಬುದು ಸ್ಪಷ್ಟ, ಇವು ಪ್ರಪಂಚದಲ್ಲಿ ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಅತಿ ಪ್ರಾಚೀನ ವಿವರಣೆಯಾದ್ದರಿಂದ ಇವುಗಳ ಐತಿಹಾಸಿಕ ಮಹತ್ವ ಇನ್ನೂ ಹೆಚ್ಚಿನದು. ವಾಸ್ತವವಾಗಿ, ಆಧುನಿಕ ಪ್ಲಾಸ್ಟಿಕ್ ಸರ್ಜರಿಯ ವಿಕಾಸಕ್ಕೆ ಇದೇ ತಳಹದಿ.


Post a Comment

0Comments
Post a Comment (0)