ಬರ್ಮುಡಾ ತ್ರಿಕೋನ ರಹಸ್ಯ ಬಯಲು

Admin
0

 ಬರ್ಮುಡಾ ತ್ರಿಕೋನ ರಹಸ್ಯ ಬಯಲು


    ಬರ್ಮುಡಾ ತ್ರಿಕೋನವನ್ನು ವಿಜ್ಞಾನಿಗಳು ವೈಜ್ಞಾನಿಕ ಸತ್ಯವೆಂದೇ ಭ್ರಮಿಸುವರು. ಇದೀಗ ಸತ್ಯ ಎನ್ನುವಷ್ಟು ವಿಷಯಗಳು ಹೊರಬಂದಿವೆ. ಮೊದಲು ಬರ್ಮುಡಾ ಟ್ರಯಾಂಗಲ್ ಎಂದರೇನು ತಿಳಿಯೋಣ.


Barmuda Triangle


👉ಬರ್ಮುಡಾ ಟ್ರಯಾಂಗಲ್ ಎಂದರೇನು ?

    ಬರ್ಮುಡಾ ಟ್ರಯಾಂಗಲ್ ನಿಗೂಢ ಮಾಯೆ ಎಷ್ಟೇ ವೈಜ್ಞಾನಿಕ ಭಾಷೆಯಲ್ಲಿ ತಾರ್ಕಿಕವಾಗಿ ನಿರೂಪಿಸಲಾಗಿದ್ದರೂ ಅದನ್ನು ವಾಸ್ತವ ಎನ್ನುವಂತಿಲ್ಲ. ಆದರ ವಾಸ್ತವ ಎಂದು ಹೇಳುವರು ಬಹುಮಂದಿ.


    ಬರ್ಮುಡಾ ಟ್ರಯಾಂಗಲ್ ಅಥವಾ ಡೆವಿಲ್ಸ್ ಟ್ರಯಾಂಗಲ್ ಉತ್ತರ ಅಟ್ಲಾಂಟಿಕ್‌ ಸಾಗರದ ಒಂದು ಭಾಗ. ಬಹುಶಃ ಜಗತ್ತನ್ನು ಗಾಬರಿಗೊಳಿಸಿದ ನಿಗೂಢಗಳಲ್ಲಿ ಇದು ಪ್ರಸಿದ್ಧ. ಇದು ಪಶ್ಚಿಮ ಅಟ್ಟಾಂಟಿಕ್‌ನಲ್ಲಿ ನೆಲೆಗೊಂಡಿದ ಎನ್ನಲಾಗಿದೆ. ಬರ್ಮುಡಾ ಸರಿಸುಮಾರು ಫ್ಲಾರಿಡಾ, ಬರ್ಮುಡಾ ಮತ್ತು ಪ್ರೊಟೊರಿಕೊಗಳ ನಡುವೆ ಇದೆ. ಎಷ್ಟೋ ವಿಮಾನಗಳು ಮತ್ತು ಹಡಗುಗಳು ಅಲ್ಲಿ ನಾಶವಾಗಿವೆ ಎನ್ನುವರು. ಇನ್ನು ಕೆಲವು ಸಿದ್ಧಾಂತಗಳ ಪ್ರಕಾರ ಇಲ್ಲಿ ಆದ ಅಪಘಾತಗಳಿಗೆ ಸಾಮಾನ್ಯವಲ್ಲದ ಕಾಂತಬಲಗಳು, ಗತ ಅಟ್ಟಾಂಟಿಕ್ ಕಿರಣಗಳು, ಕಾರಣವಿರಬಹುದು. ಬರ್ಮುಡಾ ತ್ರಿಕೋನ ಪತ್ತೆ ಹಚ್ಚಿರದ ಹಾರಾಡುವ ವಸ್ತುಗಳ ನೆಲೆ ಭೂಮಿ ಎಂದೂ ಹೇಳಿದ್ದು ಇದೆ. ಮೊದ ಮೊದಲು ತಕ್ಷಣದ ಹಾಗೂ ಅನಿರೀಕ್ಷಿತವಾದ ಹಡಗುಗಳು ಹಾಗೂ ಮಾನವರ ಕಣ್ಮರೆಯು ಕೇವಲ ಕಾಕತಾಳೀಯವೆಂದು ಪರಿಗಣಿಸಲಾಗಿತ್ತು. ಆದರೆ ಇಂತಹ ಸಂಭವಗಳು ಅನಿರೀಕ್ಷಿತವಾಗಿ ಹೆಚ್ಚಿದಂತೆ ಜನ ಕಾರಣ ತಿಳಿಯಲು ಕುತೂಹಲ ತಾಳಿದರು. ವಿಜ್ಞಾನಿಗಳಿಗೆ ಇದೊಂದು ಸವಾಲೇ ಆಯಿತು. ಲ್ಯಾಟಿನ್ ಅಮೆರಿಕಾದ ನೆತ್ತಿಯ  ಮೇಲಿರುವ ಬರ್ಮುಡಾ ದ್ವೀಪದ ಬಳಿ ಒಂದು ಕಾಲ್ಪನಿಕ ತ್ರಿಕೋನ. ಸಮುದ್ರದಲ್ಲಿನ ಚಲಿಸುವ ಹಡಗುಗಳೇ ಅಲ್ಲದೆ ಆಕಾಶದಲ್ಲಿ ಚಲಿಸುವ ಇಪ್ಪತ್ತಕ್ಕೂ ಹೆಚ್ಚು ವಿಮಾನಗಳೂ ಕಣ್ಮರೆ ಆಗಿವೆ ಎಂದು ದಾಖಲೆಗಳು ವಿಜ್ಞಾನಕ್ಕೆ ಸವಾಲೊಡ್ಡಿದವು. ಈ ಕಣ್ಮರೆಗಳು ಕೆಟ್ಟ ಹವೆ, ಮಾನವರ ಲೋಪದೋಷಗಳು ಮತ್ತು ಯಾಂತ್ರಿಕ ವಿಫಲತೆಯಿಂದ ಎಂದೂ ತಿಳಿಯಲಾಯಿತು. ಊಹೆಗಳಿಗೆ ಕೊನ ಇರುತ್ತದೆಯೆ?



ಟಾಮ್‌ಗ್ಯಾರಿ ಅಪ್ಟೆಂಚರ್ಸ್ ಆಫ್ ಅಮೆಚೂರ್ ಸೈಕಿಕ್' ಎಂಬ ಪುಸ್ತಕ ಬರದಿದ್ದು, ಬರ್ಮುಡಾ ಟ್ರಯಾಂಗಲ್ 'ವಿನಾಶಕಾರಿ ಸಾಮರ್ಥ್ಯ ಹಾಗೂ ಬಲ ಕಡಲ ಅಡಿಯಿಂದ ಹೊರ ಸೂಸುವ ಶಕ್ತಿಯಿಂದ ಬಂದುದೆಂದು ಹೇಳುತ್ತಾನೆ. ಆತನ ಪ್ರಕಾರ ಬರ್ಮುಡಾ ಪ್ರದೇಶದಲ್ಲಿನ ಜಲದಡಿಯಲ್ಲಿ ಈ ಶಕ್ತಿ ಕಟ್ಟಡ ಇನ್ನೂ ಇದೆ ಎಂಬ ಊಹಾಪೋಹಾವಿದೆ. ಪರಿಸ್ಥಿತಿಗಳು ಅನುಕೂಲವಾದಾಗ ಈ ಶಕ್ತಿ ಕಟ್ಟಡ ಅಥವಾ ವಿನ್ಯಾಸ ಬಿಟ್ಟು, ಬಿಟ್ಟು, ಕ್ರಿಯಾತ್ಮಕವಾಗಿ ಹಡಗು ಮತ್ತು ವಿಮಾನಗಳ ಕ್ಯಾಪ್ಟನ್‌ಗಳು ತಮ್ಮ ವಾಹನಗಳ ಮೇಲೆ ಹತೋಟಿ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದೂ ಗ್ಯಾರಿ ಹೇಳಿದ್ದಾನೆ. ಆತನ ಪ್ರಕಾರ ವಿದ್ಯುತ್ವವಾಹದಿಂದ ಹೊಮ್ಮಿದ ಅಯಾನುಗಳು ಕಾಂತ ಕ್ಷೇತ್ರವನ್ನುಂಟುಮಾಡಿ ಆ ಕಾಂತ ಕ್ಷೇತ್ರ ಸಮೀಪದ ವಾಹನದಲ್ಲಿನ ಉಪಕರಣ ವಿಫಲಗೊಳ್ಳುವಂತೆ ಮಾಡುತ್ತದೆ. ಕಾಂತೀಯ ದಿಕ್ಕೂಚಿಗಳು, ಇಂಧನ ಮಾಪಕಗಳು, ಎತ್ತರ ಸೂಚಿಗಳು ಮತ್ತಿತರ ಎಲ್ಲಾ ವಿದ್ಯುತ್‌ ಸಹಾಯದಿಂದ ಕೆಲಸ ಮಾಡುವ ಉಪಕರಣಗಳು ಪರಿಣಾಮಕ್ಕೊಳಗಾಗುತ್ತವೆ. ಅಪಾಯದಿಂದ ಪಾರಾದ ವಿಮಾನ ಚಾಲಕರು ಬ್ಯಾಟರಿಗಳು ದುರ್ಬಲಗೊಂಡ ವರದಿ ಮಾಡಿದ್ದಾ ರೆಂದೂ ಗ್ಯಾರಿ ಹೇಳಿರುತ್ತಾನೆ. 


ರೇಡಿಯೋಗಳು ವಿಫಲಗೊಳ್ಳುವುದು ಮತ್ತು ದಿಕ್ಕೂಚಿ ತಪ್ಪಾಗಿ ಅಂಕಿ ಅಂಶಗಳನ್ನು ತೋರಿಸುವುದು ತೀವ್ರ ಗುರುತ್ವಾಕರ್ಷಣ ಮತ್ತು ಕಾಂತೀಯ ಬಾಗುವಿಕೆಯಿಂದ ಎಂಬ ಊಹೆ ಇದೆ. ಕೆಲವರು ಗತ ಅಟಾಂಟಿಕ್ ನಾಗರಿಕತೆ ಕಾಲದ ಅಸಾಧಾರಣ ಯಂತ್ರೋಪಕರಣಗಳು ಇನ್ನೂ ಕೆಲಸ ಮಾಡುತ್ತಿವೆ ಹಾಗೂ ಇದಕ್ಕೆ ಆಧಾರವೇ ಬರ್ಮುಡಾ ಟ್ರಯಾಂಗಲ್‌ ಎಂದು ಊಹಿಸಿದ್ದಾರೆ. ಬಾಹ್ಯಾಕಾಶದಿಂದ ಬಂದ ಕೊಳ್ಳೆ ಹೊಡೆಯುವ ಸ್ವಭಾವದ ಸಂದರ್ಶಕರಿಗೆ ಬರ್ಮುಡಾ ಒಂದು ಬೇಟೆಯ ನೆಲೆ ಎನ್ನುವವರೂ ಇದ್ದಾರೆ,


    1914 'ಆರ್ಗೋಸಿ' ಎಂಬ ಪತ್ರಿಕೆಯಲ್ಲಿ ಎನ್ನೆಂಟ್‌ಗಾಡಿಸ್ ಎಂಬುವನು ಬರ್ಮುಡಾ ತ್ರಿಕೋನದ ಬಗ್ಗೆ ಬರೆದ ಲೇಖನ ಹಲವರ ಗಮನ ಸೆಳೆದಿತ್ತು, ಇದನ್ನೋದಿದ ಇವಾನ್ ಟಿ, ಸ್ಯಾಂಡರ್ಸನ್ ಎಂಬ ಬರಹಗಾರ ಬರ್ಮುಡಾ ಟ್ರಯಾಂಗಲ್ ಎಂಬುದು ಹಲವು ತಿಳಿಯದ ಪ್ರದೇಶಗಳಲ್ಲಿ ಒಂದು ಎಂದು ಹೇಳಿ ಲೇಖನವನ್ನು ಬರೆದನಷ್ಟೆ. 'ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ವಿಶ್ವಕೋಶ ಸಹ 1973 ರಲ್ಲಿ ಬರ್ಮುಡಾ ಕುರಿತು ಮಾಹಿತಿ ನೀಡಿದರೆ, 'ಲಿಂಬೊ ಆಫ್ ದಿ ಲಾಸ್ಟ್' ಎಂಬ ತನ್ನಿಮಿತ್ತ ಕೃತಿ ಜನಪ್ರಿಯವಾಯಿತು. 1974ರಲ್ಲಿ 'ವರ್ಲ್ಡ್ ಆಫ್ ಸ್ಟೇಂಟ್ ಫೆನಾಮಿನ್ ಓಮ್ಮಿ ಬಸ್' ಎಂಬ ಜನಪ್ರಿಯ ಕೃತಿಯ ಲೇಖಕ ಚಾರ್ಲ್ಸ್ ಬರ್ಲಿಟ್ಸ್ 'ದಿ ಬರ್ಮುಡಾ ಟ್ರಯಾಂಗಲ್‌' ಎಂಬ ಕೃತಿ ಬರೆದು ಅದು ಬೇಗ ಖರ್ಚಾಯಿತು. ಈ ನಿಟ್ಟಿನಲ್ಲಿ ಹೆಚ್ಚು ಕುತೂಹಲ ಕೆರಳಿಸಿದ ಪುಸ್ತಕವೆಂದರೆ ಲಾರನ್ಸ್‌ಡಿ-ಕುಶ ಬರೆದ 'ದಿ ಬರ್ಮುಡಾ ಟ್ರಯಾಂಗಲ್ ಮಿಸ್ಟರಿ ಸಾಲ್ಟ್ ಎಂಬುದೇ ಆಗಿದೆ. ಆತ 'ಇಲ್ಲಿ ಏನಂಥ ನಿಗೂಢವಿದೆ' ಎಂಬ ಪ್ರಶ್ನೆ ಹಾಕಿದ್ದನು. ಆತನ ಪ್ರಕಾರ 'ಹಾಗೆ ಹಡಗುಗಳಾಗಲೀ ವಿಮಾನಗಳಾಗಲೀ ಕಣ್ಮರೆಯಾದುದಿಲ್ಲ. ಒಂದು ವೇಳೆ ಆಗಿದ್ದರೆ ವಿವರಣೆ ಸಿಗುತ್ತಿತ್ತು. ಸ್ವಾರಸ್ಯವೆಂದರೆ ಅಂತಹ ಅಪಘಾತಗಳು ಇತರ ಕಡಲುಗಳಲ್ಲೂ ಸಂಭವಿಸಿವೆ. ಆದರೂ ಬಹಳಷ್ಟು ಅಪಘಾತಗಳು ಆ ಪ್ರದೇಶದಲ್ಲಿ ಆದುದೇ ರಹಸ್ಯವೆನಿಸಿದೆ.


    ಈ ನಿಗೂಢ ಹೀಗೆಯೇ ಇದ್ದಿತು. ಇತ್ತೀಚೆಗೆ ಕೆಲವು ಸಂಗತಿಗಳು ಬಯಲಾಗಿವೆ. ಜಲಾಂತರ್ಗಾಮಿಗಳು ಮತ್ತು ಹಡಗುಗಳು ಕಣ್ಮರೆಯಾದುದಕ್ಕೆ ಸಾಗರ ವಿಜ್ಞಾನಿಗಳು ಒಂದು ಕಾರಣ ಕೊಡುತ್ತಾರೆ- ಸಮುದ್ರ ತಳದಲ್ಲಿರುವ ಗ್ಯಾಸ್ ಹೈಡೇಟ್ಸ್ ಎಂಬ ಕುತೂಹಲಕಾರಿ ಶಕ್ತಿ ದ್ರವ್ಯಗಳೇ ಇದಕ್ಕೆ ಕಾರಣ ಎನ್ನುತ್ತಾರೆ ಅವರು, ಗ್ಯಾಸ್ ಹೈಡ್ರೆಟ್ಸ್‌ಗಳು ಅನಿಲವಷ್ಟೆ, ಆಳ ಸಮುದ್ರದ ಅತಿ ಶೈತ್ಯವಿರುವ ಕೆಸರು ನೆಲದಲ್ಲಿ ಈ ಅನಿಲ ಹರಳಿನ ರೂಪದಲ್ಲಿರುತ್ತದೆ. ಇದು ಸಾವಯವ ಅನಿಲ, ಮೀಥೇನ್, ಇದು ಪತ್ತೆಯಾಗಿ ನಾಲೈದು ವರ್ಷಗಳು ಕಳೆದಿವೆ. 

👉 ಈ ಅನಿಲದ ಕೆಲಸವಾದರೂ ಏನು?

    ಅನಿರೀಕ್ಷಿತ ಒತ್ತಡದಿಂದ ಈ ಹರಳುಗಳು ಒಡೆದು ಸಮುದ್ರ ತಳದಿಂದ ಮೇಲಕ್ಕೆ ಚಿಮ್ಮಿ, ಅನಿಲದ ಗುಳ್ಳೆಗಳಾಗಿ ಗಾತ್ರದಲ್ಲಿ ಹಿಗ್ಗುತ್ತ ಸಾವಿರಾರು ನೊರೆಗಳು ಅರಳಿ ಮೇಲಿನ ಪಾತಳಿಗೆ (ಮೇಲೆ) ಬರುತ್ತವೆ. ಹಾಗೆ ಬಂದ ಈ ಅಪಾರ ನೆರೆಗುಳ್ಳೆಗಳು ತಮ್ಮ ಹಾದಿಯಲ್ಲಿ ಬರುವ ದೋಣಿಯೋ, ಹಡಗೋ ಅಥವಾ ಜಲಾಂತರ್ಗಾಮಿ ನೌಕೆಗಳನ್ನು ಬಹು ಬೇಗ ಉರುಳಿಸಿ ನಾಶ ಮಾಡಿಬಿಡುತ್ತವೆ ಎಂಬುದನ್ನು ಸಾಗರ ವಿಜ್ಞಾನಿಗಳು ಊಹಿಸಿದ್ದಾರೆ. ಇವರು ಅನಿಲ ಗುಳ್ಳೆಗಳನ್ನು ಮೇಲೆ ತರಲೆಂದು ಸಾಹಸ ಮಾಡಿದ್ದೂ ಉಂಟು. ಅವರು ಇಡೀ ಗುಳ್ಳೆಯನ್ನು ಪಾತಳಿಗೆ ತರಲು ಆಗಿಯೇ ಇಲ್ಲ. ಏಕೆಂದರೆ ಚೆಂಡಿನಂತಹ ಆ ಮುದ್ರೆ ದಾರಿಯಲ್ಲಿ ಒಡೆದು ಗುಳ್ಳೆಗಳು ನೀರಿನಲ್ಲಿ ಒಂದಾಗಿಬಿಡುತ್ತವೆ. ಈ ಮೀಥೇನ್ ಚೆಂಡುಗಳನ್ನು ಶಕ್ತಿದ್ರವ್ಯವೆಂದೂ ಅವರು ಹೇಳುತ್ತಾರೆ. ಅಂದಾಜಿನ ಪ್ರಕಾರ ಒಂದು ಘನ ಮೀಟರ್ ಗಾತ್ರದಲ್ಲಿ ಅಲ್ಲಿನ ದಟ್ಟ ಸಾಂದ್ರತೆಯಲ್ಲಿರುವ ಹರಳುಗಳನ್ನು ಮೇಲೆ ಎತ್ತಿ ತಂದರೆ ಸುಮಾರು ನೂರಾ ಎಪ್ಪತ್ತು ಗೊಬ್ಬರ ಅನಿಲ ಸ್ಥಾವರಗಳಲ್ಲಿರುವಷ್ಟೇ ಮೊತ್ತದ ಅನಿಲ ಸಿಗುತ್ತದೆಂದು ತಿಳಿಯಲಾಗಿದೆ. ಮೀಥೇನ್ ಅನಿಲವೇನೋ ಹೌದು.


ಸಮುದ್ರ ತಳದಲ್ಲಿ ಅಪರೂಪವಾದ ಚುಂಬಕ ಶಕ್ತಿ ಇದೆ ಎಂದೂ ಹೇಳುತ್ತಿದ್ದಾರೆ. ಬರ್ಮುಡಾ ಸಾಗರ ಭಾಗದಲ್ಲಿ ಸುಮಾರು ಹಡಗುಗಳು ಕಣ್ಮರೆಯಾಗಲು ಹೀಗೆ ಹಲವು ಹತ್ತು ಕಾರಣಗಳನ್ನು ಕೊಡುತ್ತಿರುವರಾದರೂ ಕಾರಣವಿಲ್ಲದೆ ಕಾರ್ಯವಿಲ್ಲ ಎಂಬಂತೆ ಇದನ್ನು ನಿಗೂಢ ಎನ್ನಲು ವಿಜ್ಞಾನಿಗಳು ಒಪ್ಪುವುದಿಲ್ಲ. ಬಲವಾದ ಕಾರಣವಿದ್ದೇ ಇರುತ್ತದೆ. ಬರ್ಮುಡಾ ತ್ರಿಕೋನದ ರಹಸ್ಯ ಬಯಲಾಗುವ ದಿನ ದೂರವಿಲ್ಲ.


Post a Comment

0Comments
Post a Comment (0)