ಉಪ್ಪು ನೀರಿನಲ್ಲಿ ಸಾಗರದ ಪಶು ಪಕ್ಷಿಗಳು ಹೇಗೆ ಬದುಕುತ್ತವೆ?
👉 ಪರಿಚಯ
ಸಮುದ್ರದ ನೀರು ತುಂಬಾ ಉಪ್ಪು, ಕಾರಣ ಅದರಲ್ಲಿ ಸುಮಾರು ೩. ಪ್ರ.ಶ. ಉಪ್ಪಿರುತ್ತದೆ . ಸಮುದ್ರದ ನೀರನ್ನು ಕುಡಿಯುವುದರಿಂದ ಬಾಯಾರಿಕೆ ಇಂಗುವುದಿಲ್ಲ ; ಬಾಯಾರಿಕೆ ಹೆಚ್ಚುತ್ತದೆ.
ನಮ್ಮ ಶರೀರದ ಕೋಶಗಳಲ್ಲಿ ಮತ್ತು ರಕ್ತದಲ್ಲಿ ಸುಮಾರು ೧ ಪ್ರ, ಶ.ಉಪ್ಪಿರುತ್ತದೆ. ಒಂದು ವೇಳೆ ನಾವು ಸಮುದ್ರದ ನೀರನ್ನು ಕುಡಿದರೆ,ಅದರೊಂದಿಗೆ ಶರೀರದಲ್ಲಿ ಹೆಚ್ಚು ಪ್ರಮಾಣದಲ್ಲಿ ಉಪ್ಪು ಪ್ರವೇಶಿಸುವುದರಿಂದ ರಕ್ತದಲ್ಲಿ ಉಪ್ಪಿನ ಪ್ರಮಾಣ ಹೆಚ್ಚುತ್ತುದೆ. ಸಾಮಾನ್ಯ ಸ್ಥಿತಿಯಲ್ಲಿ, ಒಂದೊಂದು ಸಲ ರಕ್ತದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದಾಗ ಮೂತ್ರಕೋಶವು ಅದನ್ನು ಮೂತ್ರದೊಂದಿಗೆ ಶರೀರದಿಂದ ಹೊರಹಾಕುತ್ತದೆ. ಇದಕ್ಕೆ ನೀರಿನ ಅವಶ್ಯಕತೆಯಿದೆ. ಕಾರಣ, ನೀರಲ್ಲಿ ಕರಗಿಯೇ ಉಪ್ಪು ಮೂತ್ರದ ರೂಪದಲ್ಲಿ ಹೊರಬರುತ್ತದೆ.
ಸಮುದ್ರದ ನೀರನ್ನು ಕುಡಿದಾಗ ಅಧಿಕ ಪ್ರಮಾಣದ ಉಪ್ಪನ್ನು ಶರೀರದಿಂದ ಹೊರ ತೆಗೆಯಲು ರಕ್ತ ಮತ್ತು ಇತರ ಶರೀರದ್ರಾವಣಗಳಿಂದ ನೀರನ್ನು ತೆಗೆಯಲಾಗುತ್ತದೆ, ಇದರಿಂದಾಗಿ ಶರೀರದಲ್ಲಿ ನೀರಿನ ಕೊರತೆಯಾಗುತ್ತದೆ. ಈ ಕೊರತೆಯ ಬೇಡಿಕೆಗಾಗಿ ಶರೀರ ಬಾಯಾರಿಕೆಯನ್ನು ವ್ಯಕ್ತಪಡಿಸುತ್ತದೆ. ಒಂದು ವೇಳೆ , ವ್ಯಕ್ತಿ ಈ ಬಾಯಾರಿಕೆಯನ್ನು ಹೋಗಲಾಡಿಸಿಕೊಳ್ಳಲು ಸಮುದ್ರದ ನೀರನ್ನು ಕುಡಿದರೆ ಆ ನೀರಿನೊಂದಿಗೆ ಮತ್ತೂ ಹೆಚ್ಚು ಪ್ರಮಾಣದಲ್ಲಿ ಉಪ್ಪು ಅವನ ಶರೀರವನ್ನು ಪ್ರವೇಶಿಸುತ್ತವೆ.
ಸಮುದ್ರದ ನೀರಿನಲ್ಲಿ ಉಪ್ಪು ಮಾತ್ರವಲ್ಲದೆ ಇನ್ನೊಂದು ಲವಣ ಮೆಗ್ನಿಷಿಯಂ ಸಲ್ಪೇಟ್ ಇರುತ್ತದೆ. ಇದರಲ್ಲಿ ಭೇದಿ ಔಷಧಿಯ (ಜುಲಾಬಿನ) ಗುಣವಿರುತ್ತದೆ. ಇದರಿಂದಾಗಿ ಸಮುದ್ರದ ನೀರನ್ನು ಕುಡಿದಾಗ ಭೇದಿಯಾಗಲಾರಂಭಿಸಿ ಶರೀರದಿಂದ ಹೆಚ್ಚು ಪ್ರಮಾಣದಲ್ಲಿ ನೀರು ಕ್ಷಯಿಸಲಾರಂಭಿಸುತ್ತದೆ. ಒಂದುವೇಳೆ, ವ್ಯಕ್ತಿಯೊಬ್ಬನಿಗೆ ಕೇವಲ ಸಮುದ್ರದ ನೀರನ್ನು ಮಾತ್ರವೇ ಕುಡಿದಿರಬೇಕಾದ ಪರಿಸ್ಥಿತಿ ಬಂದರೆ ಕೆಲವೇ ದಿನಗಳಲ್ಲಿ ಅವನು ಸಾವನ್ನಪ್ಪುತ್ತಾನೆ. ಈ ಕಾರಣದಿಂದಲೇ ಸಮುದ್ರದ ಮೇಲೆ ಯಾತ್ರೆ ಮಾಡುವ ಹಡಗುಗಳಲ್ಲಿ ' ಸಮುದ್ರದ ನೀರಿನಿಂದ ಉಪ್ಪು ತೆಗೆಯುವ ಯಂತ್ರಗಳಿರುತ್ತವೆ. ಇದರಿಂದ ಯಾತ್ರಿಕರಿಗೆ ಕಡಿಮೆ ಉಪ್ಪಿನ ನೀರು ಸಿಗುತ್ತದೆ.
👉ಸಮುದ್ರದ ಪ್ರಾಣಿಗಳು ಹೇಗೆ ಬದುಕುತ್ತವೆ ?
ಮನುಷ್ಯನಂತೆ, ಬಹಳಷ್ಟು ಪ್ರಾಣಿಗಳೂ ಸಮುದ್ರದ ಜಲದಲ್ಲಿ ಜೀವನ ಸಾಧಿಸಲು ಸಾಧ್ಯವಿಲ್ಲ. ಆದರೆ, ಸಮುದ್ರದಲ್ಲಿ ವಾಸಿಸುವ ಪ್ರಾಣಿಗಳು ಅದೇ ನೀರನ್ನು ಕುಡಿದು ಬದುಕಬೇಕಾಗುತ್ತದೆ. ಈ ಪ್ರಾಣಿಗಳು ಯಾಕೆ ಸಾಯುವುದಿಲ್ಲವೆಂಬ ಪ್ರಶ್ನೆ ಏಳುವುದು ಸಹಜ. ಅಥವಾ ಇವು ಸಮುದ್ರದ ನೀರನ್ನು ಕುಡಿಯುವುದಿಲ್ಲವೆ ? ಹೀಗಿದ್ದರೆ ಇವು ನೀರನ್ನು ಎಲ್ಲಿಂದ ಪಡೆಯುತ್ತವೆ ? ವೇಲ್, ಸೀಲ್, ಸಮುದ್ರದ ಚಿಪ್ಪೆಹುಳು ಮತ್ತು ಆಮೆ ಇತ್ಯಾದಿ ಬಹಳಷ್ಟು ಸಮುದ್ರ ' ಜೀವಿಗಳ ಶರೀರದಲ್ಲಿ ೧ ಪ್ರ.ಶ. ಉಪ್ಪಿರುತ್ತದೆ. ಇದನ್ನು ಕಾಯಮ್ ಆಗಿಟ್ಟು - ಕೊಳ್ಳುವುದು ಅವಶ್ಯ. . ಈ ಜೀವಿಗಳು ಸಮುದ್ರದ ನೀರನ್ನು ಕುಡಿದಾಗ ಉಪ್ಪಿನ, ಹೆಚ್ಚು ಪ್ರಮಾಣ ಹೇಗೋ ಇವುಗಳ ಶರೀರದಿಂದ ಹೊರ ಹೋಗಬೇಕು. ಒಂದುವೇಳೆ, ಇವು ವಾಸ್ತವವಾಗಿಯೂ ಸಮುದ್ರದ ನೀರನ್ನು ಕುಡಿಯುವುದಾದರೆ, ಉಪ್ಪು ಹೊರಹೋಗಿ, ಶರೀರದಲ್ಲಿ ನೀರಿನ ಹೆಚ್ಚು ಕೊರತೆಯಾಗದೆ, ಇವುಗಳಿಗೆ ಶೀಘ್ರವೇ ಬಾಯಾರಿಕೆಯಾಗದಂತಾಗಲು ಇವುಗಳ ಶರೀರದಲ್ಲಿ ಅಂತಹ ವಿಶೇಷತೆ ಏನಿದೆ ?
ವಾಸ್ತವವಾಗಿ, ಈ ಸಮುದ್ರಜೀವಿಗಳ ಮೂತ್ರಕೋಶದ ಸಾಮರ್ಥ್ಯ ಮನುಷ್ಯನ ಮೂತ್ರಕೋಶದ ಸಾಮರ್ಥ್ಯಕ್ಕಿಂತ ಹೆಚ್ಚಿರುತ್ತದೆ. ಕೆಲವು ಸಮುದ್ರ ಜೀವಿಗಳು ಉದಾಹರಣೆಗೆ ವೈಲ್, ಸೀಲ್ ಸಮುದ್ರದ ನೀರನ್ನು ತುಂಬಾ ಕಡಿಮೆ / ಕುಡಿಯುತ್ತವೆ ಹಾಗೂ ನೀರಿನ ಪೂರೈಕೆಯನ್ನು ತಮ್ಮ ಆಹಾರದಲ್ಲಿರುವ ನೀರಿನಿಂದಲೇ ಮಾಡಿಕೊಳ್ಳುತ್ತವೆ. ಆಹಾರದಲ್ಲಿರುವ ಉಪ್ಪನ್ನು ಹೊರಹಾಕಲು ಇವುಗಳ ಮೂತ್ರಕೋಶಗಳಿಗೆ ಹೆಚ್ಚು ಚಿಂತಿಸಬೇಕಾಗಿಲ್ಲ: ಕಾರಣ ಇವುಗಳ ಅಹಾರ (ಇತರೆ ಮೀನುಗಳು ಮುಂತಾದುವುಗಳು) ದಲ್ಲಿ ಸಮುದ್ರಜಲದ ಉಪ್ಪಿಗಿಂತ ಕಡಿಮೆ ಉಪ್ಪಿರುತ್ತದೆ.
ಆದರೆ, ವಾಲರಸ್ ಅಂತಹ ಕೆಲವು ಇತರೆ ಶಾಖಾಹಾರಿ ಸಮುದ್ರ ಪ್ರಾಣಿಗಳು ಸಮುದ್ರದ ಗಿಡಗಳನ್ನು ತಿಂದು ಜೀವನ ಸಾಗಿಸುತ್ತವೆ. ಸಮುದ್ರದ ನೀರಿನಂತೆ ಈ ಸಮುದ್ರದ ಗಿಡಗಳಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿರುತ್ತದೆ. ಈ ಪ್ರಾಣಿಗಳು ಸಮುದ್ರದ ನೀರನ್ನು ಸ್ವಲ್ಪವೂ ಕುಡಿಯದಿದ್ದರೂ ಆಹಾರದೊಂದಿಗೆ ಹೆಚ್ಚು ಪ್ರಮಾಣದಲ್ಲಿ ಉಪ್ಪನ್ನು ಸೇವಿಸುತ್ತದೆ. ಈ ಉಪ್ಪನ್ನು ಶರೀರದಿಂದ ಹೊರಹಾಕುತ್ತಿರಬೇಕಾಗುತ್ತದೆ. ವಾಸ್ತವವಾಗಿ, ಇವುಗಳ ಮೂತ್ರಕೋಶ ಮನುಷ್ಯನ ಮಂತ್ರಕೋಶಕ್ಕಿಂತ ಹೆಚ್ಚು ಸಾಮರ್ಥ್ಯ ಹೊಂದಿದ್ದು, ಘನೀಭೂತ ಮೂತ್ರ ಉತ್ಪಾದಿಸಿ ಕಡಿಮೆ ನೀರಿನಿಂದಲೇ ಕೆಲಸ ಸಾಗಿಸುತ್ತದೆ .
ಒಂಟೆ ಮತ್ತು ಮರುಭೂಮಿಯ ಇಲಿಗಳೂ ಸಹ ಕಡಿಮೆ ನೀರಿನಲ್ಲಿ ಬದುಕುತ್ತವೆ. ಕಾರಣ, ಅವುಗಳ ಮೂತ್ರಕೋಶ ಹೆಚ್ಚು ಸಾಮರ್ಥ್ಯ ಹೊಂದಿದ್ದು ಘನೀಭೂತ ಮೂತ್ರ ಉತ್ಪಾದಿಸಿ ಶರೀರದಲ್ಲಿ ಸಾಕಷ್ಟು ನೀರು ಸಂಚಯಿಸಿಟ್ಟು ಕೊಳ್ಳಲು ಸಹಾಯ ಮಾಡುತ್ತದೆ. ಮರುಭೂಮಿಯ ಇಲಿಯಂತೂ ಸಮುದ್ರ ಜಲದಲ್ಲಿ ಮಜವಾಗಿ ಜೀವನ ಸಾಗಿಸಬಲ್ಲುದು .
👉ಸಾಗರದ ಪಕ್ಷಿಗಳು :
ಆದರೆ, ಸಮುದ್ರ ಪಕ್ಷಿಗಳ ಮೂತ್ರಕೋಶಗಳು ನಮ್ಮ ಮೂತ್ರಕೋಶ ದಂತೆಯೇ ಕಡಿಮೆ ಸಾಮರ್ಥ್ಯವುಳ್ಳವಾಗಿದ್ದು ಹೆಚ್ಚು ಉಪ್ಪನ್ನು ಹೊರಹಾಕುವ ಸಮಸ್ಯೆ ಉಂಟುಮಾಡುತ್ತವೆ. ಒಂದು ಲೀಟರ್ ಸಮುದ್ರ ಜಲದ ಉಪ್ಪನ್ನು ಶರೀರದಿಂದ ಹೊರಹಾಕಲು ಈ ಪಕ್ಷಿಗಳಿಗೆ ಎರಡು ಲೀಟರ್‌ಗಿಂತಲೂ ಹೆಚ್ಚು ಪ್ರಮಾಣದಲ್ಲಿ ಮೂತ್ರ ಉತ್ಪಾದಿಸಬೇಕಾಗಿರುತ್ತದೆ. ಇದು ಅಸಂಭವ. ಒಂದು ವೇಳೆ ಈ ಪಕ್ಷಿಗಳು ಸಮುದ್ರದ ನೀರನ್ನೇ ಕುಡಿದು, ಇವುಗಳ ಮೂತ್ರಕೋಶ ಹೆಚ್ಚು ಉಪ್ಪನ್ನು ಹೊರಹಾಕಲು ಅಸಮರ್ಥವಾದರೆ ಇವು ಶರೀರದಲ್ಲಿ ಉಪ್ಪಿನ ಅಂಶವನ್ನು ಹೇಗೆ ಕಡಿಮೆಯಾಗಿಟ್ಟುಕೊಳ್ಳುತ್ತವೆ ? ಒಂದು ವೇಳೆ ಕಡಿಮೆ ಯಾಗಿಟ್ಟುಕೊಳ್ಳಲು ಸಾಧ್ಯವಿಲ್ಲದಿದ್ದರೆ ಇವು ಸಾಯುವುದಿಲ್ಲ ಏಕೆ ?
ಉಪ್ಪನ್ನು ನಿಯಂತಣವಾಗಿಟ್ಟುಕೊಳ್ಳಲು ಈ ಪಕ್ಷಿಗಳ ಶರೀರದಲ್ಲಿ ಮೂತ್ರ ಕೋಶವಲ್ಲದೆ ಇನ್ನೊಂದು ವಿಶೇಷ ಅಂಗವಿರುತ್ತದೆ. ಇದು ಗ್ರಂಥಿಗಳ ರೂಪದಲ್ಲಿ ಮೂಗಿನ ಹೊಳ್ಳೆ ಅಥವಾ ಕಣ್ಣುಗಳ ಹಿಂಭಾಗದಲ್ಲಿರುತ್ತದೆ. ಈ ಗ್ರಂಥಿಗಳು ಮೂತ್ರಕೋಶಗಳಿಗಿಂತ ಹೆಚ್ಚು ಶೀಘ್ರವಾಗಿ ಉಪ್ಪನ್ನು ಶರೀರದಿಂದ ಹೊರ ಹಾಕುತ್ತವೆ. ಇವುಗಳನ್ನು "ಪ್ರೊನ್ ಗ್ರಂಥಿಗಳು" ಅಥವಾ "ಲವಣ ಗ್ರಂಥಿಗಳು ಎನ್ನಲಾಗುತ್ತದೆ. ಇವು ಎಲ್ಲಾ ಪಕ್ಷಿಗಳಲ್ಲೂ ಇರುತ್ತವೆ ; ಆದರೆ ಸಮುದ್ರದ ಪಕ್ಷಿಗಳು ಮತ್ತು ಬಾತುಕೋಳಿಗಳಲ್ಲಿ ಹೆಚ್ಚು ವಿಳಸಿತವಾಗಿದ್ದು ಕಣ್ಣುಗಳ ಹೀಭಾಗದಲ್ಲಿ ಎರಡೂ ಕಡೆ ಇರುತ್ತವೆ. ಈ ಗ್ರಂಥಿಗಳ ಸ್ರಾವದಲ್ಲಿ ಸುಮಾರು ೫ ಪ. ಶ, ಉಪ್ಪಿರುತ್ತದೆ. ಈ ಸ್ರಾವ, ಗ್ರಂಥಿಗಳಿಂದ ಹೊರಟು ಕೊಕ್ಕುಗಳಿಂದ ಹರಿಯುತ್ತಾ ಅದರ ಕೊನೆ ತುದಿಯಿಂದ ಹನಿ ಹನಿಯಾಗಿ ಉದುರುತ್ತಿರುತ್ತದೆ. ಈ ಗ್ರಂಥಿಗಳು ಉಪ್ಪಿನಂಶವನ್ನು ಶರೀರದಿಂದ ಸುಲಭವಾಗಿ ಹೊರ ಹಾಕುತ್ತವೆ
ಈ ವಿಶೇಷಣೆಯಿಂದಾಗಿ ಯಾವುದೇ ಸಮುದ್ರ ಪಕ್ಷಿಯು ತೂಕಕ್ಕನುಸಾರವಾಗಿ ತನ್ನ ಶರೀರದ ಹತ್ತನೇ ಭಾಗದಷ್ಟು ಸಮನಾಗಿ ಸಮುದ್ರದ ಜಲವನ್ನು ಸುಲಭವಾಗಿ ಕುಡಿಯಬಲ್ಲದು. ಆದರೆ ಮನುಷ್ಯ ತನ್ನ ಶರೀರ ಭಾರದ ಹತ್ತನೇ ಭಾಗದಷ್ಟು ಸಮುದ್ರ ಜಲವನ್ನು (ಇದು ಸುಮಾರು ೨ ಗ್ಯಾಲನ್ ಆಗುತ್ತದೆ) ಎಂದೂ ಸಹಿಸಲಾರ. ಅಲ್ಲದೆ, ಇದರ ಸ್ವಲ್ಪ ಭಾಗವನ್ನು ಕುಡಿದರೂ ಕಾಯಿಲೆ ಬೀಳುತ್ತಾನೆ. ಆದರೆ, ಸಮುದ್ರದ ಪಕ್ಷಿಯ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮವಾಗುವುದಿಲ್ಲ. ಮತ್ತು ಸುಮಾರು ಮೂರು ಗಂಟೆಯೊಳಗೆ. ನೀರಿನೊಂದಿಗೆ ಶರೀರವನ್ನು ಪ್ರವೇಶಿಸಿದ್ದ ಉಪ್ಪನ್ನು ಅದು ಹೊರಹಾಕುತ್ತದೆ.
ಈ ಉಪ್ಪು ಮುಖ್ಯವಾಗಿ, ಇವೇ ಪ್ರೊನ್ ಗ್ರಂಥಿಗಳು ಅಥವಾ ಲವಣ ಗ್ರಂಥಿಗಳಿಂದ ಹೊರಹಾಕಲ್ಪಡುತ್ತದೆ. ಈ ಗ್ರಂಥಿಗಳು ಮೂತ್ರದ ಎದುರಲ್ಲಿ ಕೇವಲ ಎರಡನೇ ಮೂರುಭಾಗದಷ್ಟು ಪ್ರಮಾಣದಲ್ಲಿಯೇ ಸ್ರಾವ ಉತ್ಪಾದಿಸುತ್ತವೆ. ಆದರೆ ಉಪ್ಪಿನ ೯೦ ಪ್ರ.ಶ. ಭಾಗ ಇವುಗಳ ಮೂಲಕವೇ ಹೊರಹೋಗುತ್ತದೆ. ಈ ಸ್ರಾವ ರಕ್ತ ಮತ್ತು ಶರೀರದ ಅನ್ಯ ದ್ರವಗಳ ಎದುರಲ್ಲಿ ಸುಮಾರು ೫ ಪಟ್ಟು ಹೆಚ್ಚು ಉಪ್ಪಿನಿಂದ ಕೂಡಿರುತ್ತದೆ.
ಈ ಗ್ರಂಥಿಗಳು, ಬಹಳಷ್ಟು ಸಮಾನಾಂತರ ಭಾಗಗಳು ಸೇರುವುದರಿಂದಲೇ ಆಗುತ್ತವೆ. ಪ್ರತಿಯೊಂದು ಭಾಗದಲ್ಲಿ ಅನೇಕ ಸಾವಿರ ಶಾಖೆಗಳಾದ ನಾಳಗಳಿರುತ್ತವೆ. ಮತ್ತು ಅವು ನಡುವಿನ ಒಂದು ಅಪೇಕ್ಷಾಕೃತ ದಪ್ಪ ನಾಳದ ನಾಲ್ಕು ಕಡೆ 'ಬಾಟ್ಲಿ ಶುದ್ಧ ಮಾಡುವ ಬ್ರಶ್‌ನ ನಾರಿನಂತೆ' ವ್ಯವಸ್ಥಿತವಾಗಿರುತ್ತವೆ. ಈ ನಾಳಗಳು ತುಂಬಾ ಜಿನುಗಾಗಿದ್ದು ಇವುಗಳ ಕೋರಿಕೆಗಳಿಂದ ಉಪ್ಪಿನಂಶದ ದ್ರವ ಸ್ರವಿಸುತ್ತದೆ. ಈ ನಾಳಗಳ ಸಮಾನಾಂತರ ತೆಳು-ತೆಳು ಕೋಶಿಕೆಗಳ ಜಾಲ ಹರಡಿರುತ್ತದೆ. ಇವುಗಳಲ್ಲಿ ರಕ್ತದ ಹರಿಯುವಿಕೆ, ನಾಳಗಳಲ್ಲಿ ಹರಿಯುವ ದ್ರವದ ಹರಿಯುವಿಕೆಗೆ ವಿರುದ್ಧವಾದ ದಿಕ್ಕಿನಲ್ಲಿರುತ್ತದೆ. ಈ ವಿರುದ್ಧ ಹರಿಯುವಿಕೆಯಿಂದಾಗಿ ರಕ್ತದ ಉಪ್ಪು ಸುಲಭವಾಗಿ ಕೋರಿಕೆಗಳಿಂದ ಹಾಯ್ದು ನಾಳಗಳಲ್ಲಿ ಪ್ರವೇಶಿಸುತ್ತದೆ.
ನಾಳಗಳು ಒಂದು ನಿಮಿಷದಲ್ಲಿ ತಮ್ಮ ಭಾರದ ಅರ್ಧದಷ್ಟು ಉಪ್ಪನ್ನು ಶರೀರದಿಂದ ಹೊರಹಾಕುತ್ತವೆ- ಉಪ್ಪು ಇಂಗಿಸುವ ಇಷ್ಟೊಂದು ಸಾಮರ್ಥ್ಯ ಅವುಗಳಲ್ಲಿರುತ್ತವೆ! ರಕ್ತದಲ್ಲಿ ಉಪ್ಪಿನಂಶ ಹೆಚ್ಚಾದಾಗ ಗ್ರಂಥಿಗಳು ತಮ್ಮ ಕೆಲಸ ಪ್ರಾಂಂಭಿಸುತ್ತವೆ. ರಕ್ತದಲ್ಲಿ ಉಪ್ಪಿನಂಶ ಕಡಿಮೆಯಾಗುತ್ತಲೇ ಇವುಗಳ ಕ್ರಿಯಾಶೀಲತೆ ಮಂದವಾಗಿ ಕೊನೆಗೊಳ್ಳುತ್ತದೆ. ಒಂದು ವೇಳೆ ಉಪ್ಪಿನ ದ್ರಾವಣ ಶಿರದ ಮೂಲಕ ರಕ್ತದಲ್ಲಿ ಪ್ರವೇಶ ಮಾಡಿಸಿದರೆ ಗ್ರಂಥಿಗಳು ಸ್ರವಿಸ ಲಾರಂಭಿಸುತ್ತವೆ.
ಗ್ರಂಥಿಗಳ ಕ್ರಿಯಾಶೀಲತೆಯ ನಿಯಂತ್ರಣ ಮಸ್ತಿಷ್ಕದಲ್ಲಿರುವ ಒಂದು ಕೇಂದ್ರದಿಂದಾಗುತ್ತದೆ. ಅದು ಒಂದು ನರದ ಮೂಲಕ ಸೇರಿರುತ್ತದೆ. ಈ ನರವನ್ನು ಕತ್ತರಿಸಿದಾಗ ಗ್ರಂಥಿಗಳು ಸ್ರವಿಸುವುದನ್ನು ನಿಲ್ಲಿಸುತ್ತವೆ. ಇದನ್ನು ಉದ್ದೀಪನಗೊಳಿಸಿದಾಗ ಗ್ರಂಥಿಗಳ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಕೇಂದ್ರವನ್ನು ತಲಪುವ ರಕ್ತದಲ್ಲಿ, ಉಪ್ಪಿನ ಸಾಂದ್ರತೆಯು ಕೇಂದ್ರವನ್ನು ನಿಯಂತ್ರಿತ ವಾಗಿಡುತ್ತದೆ.
ಸಾಮಾನ್ಯವಾಗಿ ಎಲ್ಲಾ ಸಮುದ್ರ ಪಕ್ಷಿಗಳಲ್ಲಿ ಲವಣ ಗ್ರಂಥಿಗಳ ಸಂರಚನೆ ಮತ್ತು ಕ್ರಿಯೆ ಒಂದೇ ರೀತಿಯದಾಗಿರುತ್ತದೆ, ಆದರೆ ಎಲ್ಲಾ ಪಕ್ಷಿಗಳಲ್ಲಿ ಇವು ಒಂದೇ ಜಾಗದಲ್ಲಿರುವುದಿಲ್ಲ. ಮುಖ್ಯವಾಗಿ ಇವು ಕಣ್ಣುಗಳ ಗೋಳದ ಮೇಲೆ ಎರಡೂ ಕಡೆಯ ಕಪಾಲದಲ್ಲಿರುತ್ತವೆ. ನೀರುಕಾಗೆ ಕಾರ್ ಮೋರೆಂಟ್) ಮತ್ತು ಗೈನೆಟ್ ನಲ್ಲಿ ಇವು ಕಣ್ಣು ಮತ್ತು ಮೂಗಿನ ಹೊಳ್ಳೆಗಳ ನಡುವೆ ಎರಡು ಕಡೆ ಇರುತ್ತವೆ. ಇವುಗಳ ಬಾಹ್ಯ ನಾಳಗಳು ಮೂಗಿನ ಹೊಳ್ಳೆಯಲ್ಲಿ ತೆರೆದ ಸ್ರಾವ ಹೊಳ್ಳೆಗಳಿಂದ ಹಾಯ್ದು ಕೊಕ್ಕಿನ ತುದಿಯಿಂದ ಬೀಳುತ್ತದೆ. ಹೆಲಿಕನ್ ಪಕ್ಷಿಯ ಉದ್ದ ಕೊಕ್ಕಿನ ಮೇಲ್ಬಾಗದಲ್ಲಿ ಎರಡೂ ಕಡೆ ತೆಳು ಧಮನಿಯಂತಿರುತ್ತದೆ. ಗ್ರಂಥಿಗಳ ಸ್ರಾವ ಈ ಧಮನಿಗಳಿಂದ ಹಾಯ್ದು ಕೊಕ್ಕಿನ ತುದಿಯವರೆಗೆ ತಲುಪುತ್ತದೆ.
ಪೆಟ್ರಲ್ ಎಂಬ ಪಕ್ಷಿಯಲ್ಲಿ ಪ್ರಕೃತಿಯೂ ವಿಶೇಷ ರೀತಿಯ ವ್ಯವಸ್ಥೆಯನ್ನು ಮಾಡಿದೆ. ಎರಡು ತೆಳು ಧಮನಿಗಳು ಇದರ ಮೂಗಿನ ಹೊಳ್ಳೆಗಳಿಂದ ಹೊರಟು ಕೊಕ್ಕಿನ ಮೇಲೆ ಸರಿದು ಸ್ವಲ್ಪ ದೂರದವರೆಗೆ ಹೋಗುತ್ತದೆ. ಗ್ರಂಥಿಗಳು ಕ್ರಿಯಾಶೀಲವಾದಾಗ ಪಕ್ಷಿ ಈ ಧಮನಿಗಳಿಂದ ಸ್ರಾವದ ಹನಿಗಳನ್ನು ವೇಗವಾಗಿ ಪಿಚಕಾರಿಯಂತೆ ಹೊರಹಾಕುತ್ತದೆ.
ಉಪ್ಪನ್ನು ಸ್ರವಿಸುವ ಈ ವಿಶೇಷ ಗ್ರಂಥಿಗಳು ಹೇರಿಂಗ್ ಗಲ್, ಕಪ್ಪು, ಬೆನ್ನಿನ ಗಲ್, ಕಾಮನ್‌ಟರ್ನ್, ಬ್ಲಾಕ್ ಸ್ವೀಮರ್, ಜ್ವಲೀನಾಟ್, ಹೆರನ್, ಕಾರನೋರೆಂಟ್, ಪೆಲಿಕನ್, ಸೈನೆಟ್, ಪೆಟೀಲ್, ಎಲ್ವೇಟ್ರಾಸ್, ಇಡರ್‌ಡಕ್ ಮತ್ತು ಪೆಂಗ್ವಿನ್ ಮುಂತಾದ ಸಮುದ್ರ ಪಕ್ಷಿಗಳಲ್ಲಿ ಕಂಡುಬರುತ್ತವೆ. ಇವುಗಳ ದೆಸೆಯಿಂದ ಈ ಪಕ್ಷಿಗಳು ಸಮುದ್ರದ ಉಪ್ಪು ನೀರನ್ನು ಕುಡಿದೂ ಮಜವಾಗಿ ಬದುಕುತ್ತವೆ.
ಸಮುದ್ರ ಪಕ್ಷಿಗಳಲ್ಲದೆ ಆಮೆಯಂತಹ ಕೆಲವು ಇತರೆ ಪ್ರಾಣಿಗಳಲ್ಲೂ ಈ ಗ್ರಂಥಿಗಳು ಕಂಡುಬರುತ್ತದೆ. ಆಮೆ ಮರಳಲ್ಲಿ ಮೊಟ್ಟೆಯಿಡುವಾಗ ಸಮುದ್ರದಿಂದ ಹೊರಬಂದಾಗ, ಈ ಗ್ರಂಥಿಗಳಿಂದ ತುಂಬಾ ಹೆಚ್ಚು ಸ್ರಾವ ಹೊರಬರುತ್ತದೆ. ಆಗ ಅದು ಅಳುತ್ತಿರುವಂತೆ ಅನ್ನಿಸುತ್ತದೆ. ಅದು ಮೊಟ್ಟೆಯಿಡಲು ಗುಂಡಿ ತೋಡುತ್ತದೆ. ಸ್ರಾವ ಬರುತ್ತಿರುತ್ತದೆ. ಮೊಟ್ಟೆಯಿಡುವ ಸಮಯ ಬಂದಾಗ ಅಷ್ಟು ಹೊತ್ತಿಗೆ ಕಣ್ಣೀರಿನಿಂದ ಒದ್ದೆಯಾದ ಮರಳಿನಿಂದ ಇದರ ಕಣ್ಣುಗಳು ಮುಚ್ಚಿಬಿಟ್ಟಿರುತ್ತದೆ. ಈ ಸುಳ್ಳು ಕಣ್ಣೀರು ವಾಸ್ತವದಲ್ಲಿ ಲವಣ ಗ್ರಂಥಿಗಳ ಸ್ರಾವ ಮತ್ತು ಇದು ಅದರ ಶರೀರದಿಂದ ಹೆಚ್ಚಾದ ಉಪ್ಪನ್ನು ಹೊರ ತೆಗೆಯುವಲ್ಲಿ ಸಹಕಾರಿ ಮಾಗುತ್ತದೆ.
.png)
.png)