ಪ್ರತಿರೋಧಕಗಳು
ಸಸ್ಯಗಳ ಮತ್ತು ಪ್ರಾಣಿಗಳ ರೋಗಗಳನ್ನು ನಿಯಂತ್ರಣಗೊಳಿಸಲು ಉಪಯೋಗಿಸುವ ರಾಸಾಯನಿಕ ವಸ್ತುಗಳಿಗೆ ಪ್ರತಿರೋಧಕಗಳು ಎಂದು ಹೆಸರು. ನ್ಯುಮೊನಿಯಾ, ವಿಷಮಶೀತಜ್ವರ, ಕೆಂಜ್ವರ, ಕ್ಷಯ ಮತ್ತು ಇನ್ನೂ ಅನೇಕ ಸಾಂಕ್ರಾಮಿಕ ರೋಗಗಳು, ಬ್ಯಾಕ್ಟಿರಿಯಾ, ಬೂಜು ಮತ್ತು ಇನ್ನೂ ಅನೇಕ ಸುಕ್ಷ್ಮ ಜೀವಿಗಳಿಂದ ಉಂಟಾಗಿದ್ದು, ಅವುಗಳನ್ನು ಎದುರಿಸಲು ನಮ್ಮ ಶರೀರಕ್ಕೆ ಸಹಾಯ ಆಗುವಂತೆ ಇವು ಮಾಡುತ್ತವೆ, ಬ್ಯಾಕ್ಟಿರಿಯಾ ಮತ್ತು ಸೂಕ್ಷ್ಮ ಜೀವಿಗಳ ಅನೇಕ ವಿಧಗಳಿವೆ . ಬೂಜುಗಳು, ಬ್ಯಾಕ್ಟೇರಿಯಾ ಮತ್ತು ಕೆಲವು ಸಸ್ಯಗಳಿಂದ ಪ್ರತಿರೋಧಕಗಳನ್ನು ಉತ್ಪಾದಿಸಲಾಗುತ್ತದೆ.
✔ ಬೆಳವಣಿಗೆ ಇತಿಹಾಸ :
ಆ್ಯಂಟಿಬಯೋಟಿಕ್ಸ್ ಪದವನ್ನು ಆಂಟಿಬಯೋಸಿಸ್ ಎಂಬುದರಿಂದ ಪಡೆಯಲಾಗಿದೆ, ಆಂಟಿ ಎಂದರೆ ವಿರುದ್ಧ ಮತ್ತು ಬಯೋಸಿಸ್ ಎಂದರೆ ಜೀವ ಎಂಬ ಅರ್ಥವಿದ. ಮೊಟ್ಟ ಮೊದಲು ಕಂಡುಹಿಡಿದ ಪ್ರತಿರೋಧಕವು ಪೆನ್ಸಿಲಿನ್- 1928ರಲ್ಲಿ ಬ್ಯಾಕ್ಟಿರಿಯಾಲಜಿಸ್ಟ್ ಪ್ರೊಫೆಸರ್ ಅಲೆಕ್ಸಾಂಡರ್ ಪ್ಲೇಮಿಂಗ್ ಲಂಡನ್ನಿನ ಸೇಂಟ್ ಮೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ, ತಾನು ಇಟ್ಟಿದ್ದ ಬ್ಯಾಕ್ಟಿರಿಯಾದ - ಜೀವಾಣು, ರಾಶಿಯಲ್ಲಿ ಪೆನ್ಸೀಲಿಯಮ್ ನೋಟೇಟಿಮ್ ಎಂದು ಹೆಸರಿಸಲ್ಪಟ್ಟ ಬೂಜಿನ ಸಮೀಪದಲ್ಲಿ, ಬೆಳೆಯಲಿಲ್ಲ ಎಂದು ಕಂಡು ಹಿಡಿದನು.
(ರೋಗ ಉಂಟು ಮಾಡುವ ಬ್ಯಾಕ್ಟಿರಿಯಾ ಮತ್ತು ಸೂಕ್ಷ್ಮ ಜೀವಿಗಳ ವಿವಿಧ ಬಗೆಗಳು)
ಅನೇಕ ರೋಗ ಉಂಟು ಮಾಡುವ ಜೀವಿಗಳಿಗೆ ವಿಷವಾಗಿ ಪರಿಣಮಿಸುವ ಒಂದು ವಸ್ತುವನ್ನು ಬೂಜು ಉತ್ಪಾದಿಸುತ್ತದ ಎಂದು ಅವನು ಕಂಡು ಹಿಡಿದನು. ಈ ವಸ್ತುವನ್ನು ಬೂಜಿನ ಹೆಸರಿನಂತೆ ಪೆನಿಸಿಲಿನ್ ಎಂದು ಕರೆದನು. ಪೆನಿಸಿಲಿನ್ ಎಂಬುದು ಒಂದು ಪವಾಡ ಔಷಧಿಯಾಗಿ ಪರಿಣಮಿಸಿ, ಇಡೀ ಪ್ರಪಂಚವೇ ಅದಕ್ಕೆ ಋಣಿಯಾಗಿದ. ಪ್ಲೆಮಿಂಗ್‌ನು ಅದನ್ನು ಧೃಡಪಡಿಸಲಾಗಲಿಲ್ಲ. ಅನೇಕ ವರ್ಷಗಳ ನಂತರ, 1940ರಲ್ಲಿ, ಸರ್ ಹೋವರ್ಡ್ ಡಬ್ಲ್ಯೂ, ಪ್ಲೋರಿ ಮತ್ತು ಅರ್ನೆಸ್ ಬೋರಿಸ್ ಚೈನ್ ಎಂಬುವವರು ಪೆನಿಸಿಲಿನ್ ನನ್ನು ಸ್ಥಿರಪಡಿಸಿದರು. 1941ರಲ್ಲಿ ಈ ಔಷಧವನ್ನು ಮನುಷ್ಯರ ಮೇಲೆ ಉಪಯೋಗಿಸಿದಾಗ ಅತ್ಯಾಶ್ಚರ್ಯಕರವಾದ ಸಫಲ ಫಲಿತಾಂಶಗಳು ದೊರೆತವು, ಎರಡನೆಯ ಪ್ರಪಂಚ ಯುದ್ಧದಲ್ಲಿ ಮೊದಲನೆಯ ಪ್ರತಿರೋಧಕ ಪೆನಿಸಿಲಿನ್ ಅನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಲಾಯಿತು. 1945ರಲ್ಲಿ ಪ್ಲೆಮಿಂಗ್, ಫ್ಲೋರಿ ಮತ್ತು ಚೈನ್ ಮೂವರಿಗೂ ಒಂಟಿಯಾಗಿ ಔಷಧಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿಯನ್ನು ಕೊಡಲಾಯಿತು.
ಅಲ್ಲಿಂದೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿರೋಧಕಗಳನ್ನು ಕಂಡು ಹಿಡಿಯಲಾಗಿದೆ. 1947ರಲ್ಲಿ ಪೆನಿಸಿಲಿನ ರಾಸಾಯನಿಕ ರಚನೆಯನ್ನು ಕಂಡು ಹಿಡಿಯಲಾಯಿತು. ಆ ರಚನೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು(ಪ್ರತಿರೋಧಕಗಳ ವಿವಿಧ ಬಗೆಗಳು) ಮಾಡಿ, ಹೊಸ ಜಾತಿಯ ಪ್ರತಿರೋಧಕಗಳನ್ನು ಉತ್ಪಾದಿಸಲು ವಿಜ್ಞಾನಿಗಳಿಗೆ ಸಾಧ್ಯವಾಯಿತು,
ಪ್ರತಿರೋಧಕಗಳ ಬೆಳವಣಿಗೆಯಲ್ಲಿ ನಡೆಸಿದ ಅನೇಕ ಸಂಶೋಧನೆಗಳ ಪರಿಣಾಮವಾಗಿ ಈಗ 80ಕ್ಕೂ ಹೆಚ್ಚು ಪರಿಣಾಮಕಾರಿ ಪ್ರತಿರೋಧಗಳು ಇವೆ . ಪ್ರತಿರೋಧದ ವಿವಿಧ ಬಗೆಗಳನ್ನು ಕೆಳಗಿನ ಚಿತ್ರಗಳಲ್ಲಿ ತೋರಿಸಲಾಗಿದೆ.
![]() |
| ಪ್ರತಿರೋಧಕಗಳು |
ಪ್ರಚಲಿತವಾಗಿ ಪ್ರತಿರೋಧಕಗಳು ಯಾವುವೆಂದರೆ ಟೆಟ್ರಾಸೈಕ್ಲಿನ್ , ಆಕ್ಟಿನೋಮೈಸಿನ್ , ಸ್ಟ್ರೆಪ್ಟೋಮೈಸಿನ್ ಮುಂತಾದವು. ಪ್ರತಿಯೊಂದು ಪ್ರತಿರೋಧಕವೂ ಎಲ್ಲ ಬ್ಯಾಕ್ಟಿರಿಯಾಗಳ ಮೇಲೆ ಪರಿಣಾಮವನ್ನು ಹೊಂದಿರುವದಿಲ್ಲ .
ಕೆಲವು ಹೆಚ್ಚು ವ್ಯಾಪ್ತಿಯ ಸೂಕ್ಷ್ಮ ಜೀವಿಗಳ ವಿರುದ್ಧ ಪರಿಣಾಮ ಸೂಕ್ಷ್ಮ ಜೀವಿಗಳ ವಿರುದ್ಧ ಪರಿಣಾಮ ಬೀರುತ್ತದೆ. ಇನ್ನು ಕೆಲವು ಕೇವಲ ಕೆಲವೇ ಸೂಕ್ಷ್ಮ ಜೀವಿಗಳ ವಿರುದ್ಧ ಪರಿಣಾಮ . ಹೆಚ್ಚು ಸೂಕ್ಷ್ಮ ಜೀವಿಗಳ ಮೇಲೆ ಪರಿಣಾಮ ಬೀರುವ ಪ್ರತಿರೋಧಕಗಳಿಗೆ ಬ್ರಾಡ್ ಸ್ಪೆಕ್ಟಮ್ ಪ್ರತಿರೋಧಕಗಳು ಎಂದು ಹೆಸರಿಡಲಾಗಿದೆ . ಕೆಲವೇ ಸೂಕ್ಷ್ಮ ಜೀವಿಗಳ ಮೇಲೆ ಪರಿಣಾಮ ಬೀರುವ ಪ್ರತಿರೋಧಕಗಳಿಗೆ ನ್ಯಾರೋಸ್ಪೆಕ್ಟಮ್ ಪ್ರತಿರೋಧಕಗಳು ಎಂದು ಹೆಸರು.
✔ ಅವುಗಳು ಹೇಗೆ ಕೆಲಸ ಮಾಡುತ್ತವೆ?
ಮೂಲಭೂತವಾಗಿ 2 ವಿಧವಾದ ಪ್ರತಿರೋಧ ಕ್ರಿಯೆಗಳಿವೆ .
1. ಏಕಾಣು ಜೀವಿಸ್ಥಿತಿ ಕ್ರಿಯೆ
2. ಏಕಾಣು ಜೀವಿ ನಾಶಕ ಸ್ಥಿತಿ
ಏಕಾಣು ಜೀವಿ ಸ್ಥಿತಿಯಾಗಿರುವ ಪ್ರತಿರೋಧಗಳು ಖಾಯಿಲೆಯನ್ನುಂಟು ಮಾಡುವ ಸೂಕ್ಷ್ಮಾಣು ಜೀವಿಗಳನ್ನು ವಾಸ್ತವವಾಗಿ ನಾಶಪಡಿಸದೇ ಅವುಗಳ ಬೆಳವಣಿಗೆಯನ್ನು ತಡೆಯುತ್ತವೆ .
ಏಕಾಣು ಜೀವಿ ನಾಶಕ ಪ್ರತಿರೋಧಕಗಳು ಸೂಕ್ಷ್ಮ ಜೀವಿಗಳ ಜೀವರಾಸಾಯನಿಕ ಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡಿ ಅವುಗಳನ್ನು ಕೊಲು ತ್ತವೆ. ಉದಾಹರಣೆಗೆ, ಏಕಾಣು ಜೀವಿಯ ಕೋಶಭಿತ್ತಿಯ ಸಂಯೋಗವನ್ನು ಪೆನಿಸಿಲಿನ್ ಅಡ್ಡಗಟ್ಟುತ್ತದೆ. ಸೂಕ್ಷ್ಮ ಜೀವಿಗಳ ಕೋಶಗಳ ಜೊತೆಯಲ್ಲಿ ಪಾಲಿಮೈಕ್ಕ್ಸಿನ್ ಮತ್ತು ನೋವೋಬಯೋಸಿನ್ ಗಳು ಸೇರಿಕೊಂಡು ಆಹಾರ ವಸ್ತುಗಳು ಮತ್ತು ಕಲ್ಮಶ ಪದಾರ್ಥಗಳ ಮಾರ್ಗವನ್ನು ಅಡ್ಡಗಟ್ಟುತ್ತದೆ. ಎರಿತ್ರೋಮೈಸಿನ್ ಮತ್ತು ಟೆಟ್ರಾಸೈಕ್ಲಿನ್ ಗಳು ಏಕಾಣು ಜೀವಿ ಕೋಶದಲ್ಲಿ ಸಸಾರಜನಕ ಸಂಯೋಗವನ್ನು ತಡೆಗಟ್ಟುತ್ತವೆ . ಪ್ರತಿರೋಧಕಗಳು ರೋಗಾಣುಗಳಿಗೆ ಆಮ್ಲಜನಕ ಬರುವದನ್ನು ತಡೆದು, ಆಮ್ಲಜನಕವಿಲ್ಲದೇ ಅವು ಸಾಯುತ್ತವೆ ಎಂದು ಕೆಲವು ವಿಜ್ಞಾನಿಗಳು ಯೋಚಿಸುತ್ತಾರೆ.ಪ್ರತಿರೋಧಕಗಳ ಕ್ರಿಯೆಯ ಕೌಶಲ್ಯ ಏನೇ ಇರಲಿ, ಪ್ರತಿವರ್ಷವೂ ವಿವಿಧ ಖಾಯಿಲೆಗಳಿಂದ ನರಳುತ್ತಿರುವ ಲಕ್ಷಾಂತರ ಜೀವಗಳನ್ನು ಅವುಗಳು ಉಳಿಸಿವೆ ಎಂಬುದು ಧೃಡೀಕರಿಸಿದ ಸತ್ಯ .
✔ ಪ್ರತಿರೋಧಕಗಳ ಉಪಯೋಗಗಳು
ರೋಗಗಳನ್ನು ನಿಯಂತ್ರಿಸಲು ನಮ್ಮಲ್ಲಿ ಇರುವ ಅತಿಪ್ರಬಲ ಅವಶ್ಯಕತೆಗಳ ಗುಂಪುಗಳಲ್ಲಿ, ಪ್ರತಿರೋಧಕಗಳು ಪ್ರಾಮುಖ್ಯ ಸ್ಥಾನವನ್ನು ಪಡೆದಿವೆ. ಅಂಟು ರೋಗಗಳು ಮತ್ತು ಕ್ಷಯ, ರಕ್ತ ವಿಷವಾಗುವಿಕ, ಆಮಶಂಕೆ, ಸಿಫಿಲಿಸ್ ಮತ್ತು ಟೈಫಸ್ ಮುಂತಾದ ರೋಗಗಳ ವಿರುದ್ಧ ಹೆಚ್ಚು ಸಫಲವಾಗಿ ಇವುಗಳನ್ನು ಉಪಯೋಗಿಸಲಾಗುತ್ತಿದೆ.
ಪ್ರತಿರೋಧಕಗಳನ್ನು, ಔಷಧ ಕೊಶಗಳ ರೂಪದಲ್ಲಿ, ಅಥವಾ ಚುಚ್ಚುವುದರ ಮೂಲಕ ಕೊಡಲಾಗುತ್ತದೆ. ನ್ಯೂಮೋನಿಯ, ಕೆಮ್ಮು, ಗಂಟಲು ನೋವ, ಬೊಬ್ಬೆಗಳು ಮುಂತಾದವುಗಳ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿಯಾಗಿ ಪೆನಿಸಿಲಿನ್ ಕೆಲಸ ಮಾಡುತ್ತದೆ. ಮನಿನ್‌ಜೈಟಿಸ್, ಆಸ್ಟಿಯೋಮೈಲೇಟಸ್, ಗಂಟಲು ರೋಗ, ಧನುರ್ವಾಯು ಮುಂತಾದ ಚಿಕಿತ್ಸೆಗಳಲ್ಲಿ ಇದು ಬಹಳ ಉಪಯುಕ್ತವಾಗಿದೆ. ಕ್ಷಯ ,ಮೆನಿಂಜೈಟಿಸ್ ಮೂತ್ರದ್ವಾರ ಮತ್ತು ಶ್ವಾಸಕೋಶಗಳ ಕಾಯಿಲೆಗಳ ಚಿಕಿತ್ಸೆಗಳಲ್ಲಿ ಸೈಪ್ಟೋಮೈಸಿನ್ ಅನ್ನು ಉಪಯೋಗಿಸಲಾಗುತ್ತದೆ, ಚರ್ಮ, ಕಣ್ಣುಗಳು ಮತ್ತು ಕರುಳಿನ ವ್ಯಾಧಿಗಳ ನಿಯೋಮೈಸಿನ್ ನನ್ನು ಉಪಯೋಗಿಸಲಾಗಿದೆ. ಕ್ಷಯರೋಗ ನಿವಾರಣೆಯಲ್ಲಿ ಪರಿಣಾಮಕಾರಿ ಪ್ರತಿರೋಧಕವಾಗಿ ವಯೋಮೈಸಿನ್‌ನನ್ನು ಸೇರಿಸಲಾಗಿದೆ.
ಪ್ರತಿರೋಧಕಗಳು, ಪ್ರಾಣಿಗಳ ಔಷಧಗಳಲ್ಲಿ ಕೂಡಾ ತಮ್ಮ ಸಾಮರ್ಥ್ಯವನ್ನು ಸಾಧಿಸಿ ತೋರಿಸಿವೆ. ಸಾವಿರಾರು ಪ್ರಾಣಿಗಳ ಜೀವಗಳನ್ನು ಅವು ಉಳಿಸಿವೆ. ಪ್ರಾಣಿಗಳ ಬೆಳವಣಿಗೆಯಲ್ಲಿ, ಅವು ಅಸಾಧಾರಣ ಪರಿಣಾಮವನ್ನುಂಟು ಮಾಡುವುದರಿಂದ ಪ್ರಾಣಿಗಳ ಪೋಷಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಕೆಲವು ಪ್ರತಿರೋಧಕಗಳನ್ನು ಪ್ರಾಣಿಗಳ ಆಹಾರ ವಸ್ತುಗಳಿಗೆ ಅನೇಕ ಸಲ ಸೇರಿಸುವುದರಿಂದ ಹಂದಿ, ಕೋಳಿ, ಬಾತುಕೋಳಿ ಬೆಗನೆ ಬೆಳೆದು ಆರೋಗ್ಯವಾಗಿಯೂ ಇರುತ್ತವೆ.
✔ ಪ್ರತಿರೋಧಕಗಳ ಕೆಲವು ಸಮಸ್ಯೆಗಳು :
ಸ್ನೇಹಿತರೆ ಈಗ ಕೆಲವು ಸಮಸ್ಯೆಗಳ ಬಗ್ಗೆ ನೋಡೋಣ . ನಿಸ್ಸಂದೇಹವಾಗಿ ಪ್ರತಿರೋಧಕಗಳು ನಮಗೆ ಬಹಳ ಉಪಯುಕ್ತವಾಗಿವೆಯಾದರೂ, ಕೆಲವು ಸಲ, ಕೆಲವು ಪಾರ್ಶ್ವ ಪ್ರತಿಕ್ರಿಯೆಗಳನ್ನು ಉತ್ಪತ್ತಿ ಮಾಡುತ್ತವೆ. ಶರೀರದ ಜೊತೆಯಲ್ಲಿ ಅವು ಪ್ರತಿಕ್ರಿಯಿಸಿದಾಗ ಚರ್ಮದ ಮೇಲೆ ಗಂಧೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಕೆಲವು ಸಲ ಹಾನಿಕಾರಕ ಅನಾರೋಗ್ಯ ಸಂಭವಿಸುತ್ತದೆ. ಪ್ರತಿರೋಧಕಗಳನ್ನು, ಉಪಯೋಗಿಸುವುದರಿಂದ ಉಂಟಾಗುವ ಬಹಳ ತೀವ್ರವಾದ ಸಮಸ್ಯೆ ಎಂದರೆ, ಏಕಾಣು ಜೀವಿಗಳು ಒಂದು ಪ್ರತಿರೋಧಕ ನಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ಅನೇಕ ಸಂದರ್ಭಗಳಲ್ಲಿ, ಒಂದು ಒಂದು ಪ್ರತಿರೋಧಕದ ವಿರುದ್ಧ ಏಕಾಣು ಜೀವಿ ನಿರೋಧಕ ಶಕ್ತಿಯು ಉಂಟಾಗುತ್ತದೆ. ಆಗ ಸೋಂಕನ್ನು ತೆಗೆದು ಹಾಕಲು ಎರಡನಯ ಪ್ರತಿರೋಧವನ್ನು ಉಪಯೋಗಿಸಬಹುದು, ಪ್ರತಿರೋಧಕಗಳ ದೀರ್ಘ ಕಾಲದ ಉಪಯೋಗದಿಂದ ಇತರೆ ಖಾಯಿಲೆಗಳು ಕೂಡ ಉಂಟಾಗಬಹುದು .
✔ ಕೆಲವು ಅತಿ ನವೀನ ಪ್ರತಿರೋಧಕಗಳು
ಇತ್ತೀಚೆಗೆ ಅಭಿವೃದ್ಧಿಪಡಿಸಲಾದ ಪ್ರತಿರೋಧಕಗಳು ಯಾವುವೆಂದರೆ ಅಂಪೋಟೈಸಿನ್ ಬಿ, ನೈಸ್ಟಾಟಿನ್ ,ಅಂಪಿಸಿಲಿನ್ ಮತ್ತು ಸೇಪಲೆಸ್ಟೂರಿನ್ , , ಮೊದಲನೆಯ ಎರಡನ್ನೂ ಬೂಜು ಸೋಂಕು ರೋಗಗಳಿಗೆ ಉಪಯೋಗಿಸಲಾಗುತ್ತದೆ. ಅಂಪಿಸಿಲಿನ್ ಅನ್ನು ಕಲೆಗಳ ರೋಗಗಳ ವಿರುದ್ಧ ಉಪಯೋಗಿಸಲಾಗುತ್ತದೆ. ಮ ಅಲರ್ಜಿಯಾಗುವ ಜನರಿಗೆ ಪರ್ಯಾಯ ಪ್ರತಿರೋಧಕವಾಗಿ ಸೆಫಲೇಸ್ಟೋರಿಸ್‌ನನ್ನು ಪಯೋಗಿಸಬಹುದು.
ಪ್ರತಿರೋಧಕಗಳ ಕೆಲವು ಪಾರ್ಶ್ವ ಪರಿಣಾಮಗಳು ಇದ್ದರೂ ಕೂಡಾ ಅವುಗಳು ಪವಾಡ ಔಷಧಗಳು, ಪ್ರಪಂಚದಾದ್ಯಂತ ಲಕ್ಷಾಂತರ ಜನರ ಜೀವವನ್ನು ಉಳಿಸುತ್ತವೆ ಎಂದು ನಾವು ಹೇಳಬಹುದು.



